RR vs DC: ರಾಜಸ್ಥಾನ-ಡೆಲ್ಲಿ ನಡುವೆ ಬಿಗ್‌ ಫೈಟ್‌: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ

ರಾಜಸ್ಥಾನ ರಾಯಲ್ಸ್‌ ತಂಡವನ್ನು ಸಂಜು ಸ್ಯಾಮ್ಸನ್‌ ಮುನ್ನಡೆಸುತ್ತಿದ್ದು, ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿರುವ ಹನ್ನೊಂದು ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ಸಾಧಿಸಿದ್ದು, ನಾಲ್ಕರಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದೆ. 

Written by - Bhavishya Shetty | Last Updated : May 11, 2022, 09:25 AM IST
  • ರಾಜಸ್ಥಾನ-ಡೆಲ್ಲಿ ನಡುವೆ ಇಂದು ಪಂದ್ಯ
  • ಪ್ಲೇ ಆಫ್‌ ಪ್ರವೇಶಿಸಲು ಹರಸಾಹಸ
  • ಮುಂಬೈನ ಡಾ.ಡಿ ವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಆಟ
RR vs DC: ರಾಜಸ್ಥಾನ-ಡೆಲ್ಲಿ ನಡುವೆ ಬಿಗ್‌ ಫೈಟ್‌: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ title=
Indian Premier League

ಹದಿನೈದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಭರ್ಜರಿಯಾಗಿ ಸಾಗುತ್ತಿದೆ. ಇಂದು ಸಂಜೆ  7.30ಕ್ಕೆ ನಡೆಯಲಿರುವ 58ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಮತ್ತು ಡೆಲ್ಲಿ ಕ್ಯಾಪಿಟಕ್ಸ್‌ ತಂಡವು ಮುಖಾಮುಖಿಯಾಗಲಿದೆ. ಮುಂಬೈನ ಡಾ.ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಈ ಪಂದ್ಯವು ನಡೆಯಲಿದೆ. 

ಇದನ್ನು ಓದಿ: ವಿದ್ಯುತ್‌ ಸ್ಪರ್ಶಿಸಿ ಜ್ಯೂ. ರವಿಚಂದ್ರನ್‌ ನಿಧನ

ರಾಜಸ್ಥಾನ ರಾಯಲ್ಸ್‌ ತಂಡವನ್ನು ಸಂಜು ಸ್ಯಾಮ್ಸನ್‌ ಮುನ್ನಡೆಸುತ್ತಿದ್ದು, ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿರುವ ಹನ್ನೊಂದು ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ಸಾಧಿಸಿದ್ದು, ನಾಲ್ಕರಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿದೆ. 

ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕತ್ವವನ್ನು ರಿಷಬ್‌ ಪಂತ್‌ ವಹಿಸಿಕೊಂಡಿದ್ದು, ಟೂರ್ನಿಯಲ್ಲಿ ಉತ್ತಮವಾಗಿ ಆಟವಾಡುತ್ತಿದೆ. ಸದ್ಯ ಆಡಿರುವ ಹನ್ನೊಂದು ಪಂದ್ಯಗಳ ಪೈಕಿ ಐದರಲ್ಲಿ ಸೋಲು ಅನುಭವಿಸಿ, ಆರರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. 

ಉಭಯ ತಂಡಗಳು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇಂದು ನಡೆಯುವ ಪಂದ್ಯದಲ್ಲಿ ಯಾರಿಗೆ ವಿಜಯಮಾಲೆ ಲಭಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. 

ಸಂಭಾವ್ಯ ಆಟಗಾರರ ಪಟ್ಟಿ: 
ರಾಜಸ್ಥಾನ ರಾಯಲ್ಸ್‌: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ಕ್ಯಾ & ವಿ.ಕೀ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್

ಇದನ್ನು ಓದಿ: Gold Price Today: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರವೂ ಕುಸಿತ

ಡೆಲ್ಲಿ ಕ್ಯಾಪಿಟಲ್ಸ್‌: 
ಶ್ರೀಕರ್ ಭರತ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ಕ್ಯಾ & ವಿ.ಕೀ), ರೋವ್‌ಮನ್ ಪೊವೆಲ್, ರಿಪಾಲ್ ಪಟೇಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News