Jupiter Retrograde 2022: 12 ವರ್ಷಗಳ ಬಳಿಕ ಈ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ, ಈ ಜನರಿಗೆ ಲಾಭವೇ ಲಾಭ

Guru Vakri Effect 2022: 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಗುರು ತನ್ನದೇ ಆದ ಮೀನ ರಾಶಿಯಲ್ಲಿ ವಕ್ರನಡೆ ಅನುಸರಿಸಿದ್ದಾನೆ. ನವೆಂಬರ್  24ರವರೆಗೆ ಆತ ಅದೇ ಸ್ಥಿತಿಯಲ್ಲಿ ಮುಂದುವರೆಯಲಿದ್ದಾನೆ. ಬೃಹಸ್ಪತಿಯ ಈ ವಕ್ರ ನಡೆ ಯಾವ ರಾಶಿಯ ಜಾತಕದವರ ಮೇಲೆ ವಿಶೇಷ ಪ್ರಭಾವ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Sep 13, 2022, 08:14 PM IST
  • ದೇವ ಗುರು ಬೃಹಸ್ಪತಿ ತನ್ನ ಸ್ವರಾಶಿಯಾಗಿರುವ ಮೀನ ರಾಶಿಯಲ್ಲಿ ವಕ್ರನಡೆಯನ್ನು ಅನುಸರಿಸಿದ್ದಾನೆ.
  • 24 ನವೆಂಬರ್ ವರೆಗೆ ಅದೇ ಸ್ಥಿತಿಯಲ್ಲಿ ಮುಂದುವರೆಯಲಿದ್ದಾನೆ.
  • ಹಾಗೆ ನೋಡಿದರೆ ಗುರುವಿನ ಈ ವಕ್ರ ನಡೆಯ ಪ್ರಭಾವ ಎಲ್ಲಾ ರಾಶಿಗಳ ಜನರ ಜೀವನದ ಬೀಳುತ್ತದೆ
Jupiter Retrograde 2022: 12 ವರ್ಷಗಳ ಬಳಿಕ ಈ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ, ಈ ಜನರಿಗೆ ಲಾಭವೇ ಲಾಭ title=
Jupiter Retrograde 2022

Jupiter Vakri In Pisces: ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾವಧಿಯ ಬಳಿಕ ತನ್ನ ಸ್ಥಾನವನ್ನು ಪರಿವರ್ತಿಸುತ್ತದೆ. ಗ್ರಹಗಳ ಈ ಸ್ಥಾನ ಪಲ್ಲಟ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಕಳೆದ ಕೆಲ ದಿನಗಳ ಹಿಂದೆ 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇವ ಗುರು ಬೃಹಸ್ಪತಿ ತನ್ನ ಸ್ವರಾಶಿಯಾಗಿರುವ ಮೀನ ರಾಶಿಯಲ್ಲಿ ವಕ್ರನಡೆಯನ್ನು ಅನುಸರಿಸಿದ್ದಾನೆ. 24 ನವೆಂಬರ್ ವರೆಗೆ ಅದೇ ಸ್ಥಿತಿಯಲ್ಲಿ ಮುಂದುವರೆಯಲಿದ್ದಾನೆ. ಹಾಗೆ ನೋಡಿದರೆ ಗುರುವಿನ ಈ ವಕ್ರ ನಡೆಯ ಪ್ರಭಾವ ಎಲ್ಲಾ ರಾಶಿಗಳ ಜನರ ಜೀವನದ ಬೀಳುತ್ತದೆ ಆದರೆ, ಮೂರು ರಾಶಿಗಳ ಜನರ ಜೀವನದ ಮೇಲೆ ಇದರ ವಿಶೇಷ ಪ್ರಭಾವ ಗೋಚರಿಸಲಿದೆ. ಈ ಅವಧಿಯಲ್ಲಿ  ಮೂರು ರಾಶಿಗಳ ಜಾತಕದವರ ವ್ಯಾಪಾರ ಹಾಗೂ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಸಿಗಲಿದೆ.

ವೃಷಭ ರಾಶಿ- ಮೀನ ರಾಶಿಯಲ್ಲಿ ಗುರುವಿನ ವಕ್ರ ನಡೆಯಿಂದ ವೃಷಭ ರಾಶಿಯ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಈ ರಾಶಿಯ 11ನೇ ಭಾವದಲ್ಲಿ ಗುರುವಿನ ವಕ್ರ ನಡೆ ಆರಂಭಗೊಂಡಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಆದಾಯ ಹಾಗೂ ಲಾಭದ ಮನೆ ಎಂದು ಭಾವಿಸಲಾಗುತ್ತದೆ. ಗುರು ವಕ್ರಿಯಾಗುವುದರಿಂದ ವೃಷಭ ರಾಶಿಯ ಆದಾಯದಲ್ಲಿ ವೃದ್ಧಿಯ ಸಾಧ್ಯತೆಗಳಿವೆ. ಹೊಸ ಮೂಲಗಳಿಂದ ಆದಾಯ ಹರಿದುಬರಲಿದೆ. ಈ ಅವಧಿಯಲ್ಲಿ ವ್ಯಾಪಾರದಲ್ಲಿ ನಿಮಗೆ ಉತ್ತಮ ಧನಲಾಭ ಆಗುವ ಸಾಧ್ಯತೆ ಇದೆ. ಹಲವು ಅತ್ಯಾವಶ್ಯಕ ಡೀಲ್ ಗಳು ಕುದುರುವ ಸಾಧ್ಯತೆ ಇದೆ. ವಾಹನ ಹಾಗೂ ಆಸ್ತಿ ಖರೀದಿಗೆ ಈ ಸಮಯ ತಂಬಾ ಉತ್ತಮವಾಗಿರಲಿದೆ. ಗುರು ನಿಮ್ಮ ಜಾತಕದ 8ನೇ ಸ್ಥಾನದ ಅಧಿಪತಿಯಾಗಿದ್ದಾನೆ. ಹೀಗಾಗಿ ಸಂಶೋಧನೆಗೆ ಸಂಬಂಧಿಸಿದ ಜನರ ಪಾಲಿಗೆ ಈ ಸಮಯ ಉತ್ತಮವಾಗಿರಲಿದೆ. ಹಳೆ ವ್ಯಾಧಿಯಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಕ್ಷೀರ ಸ್ಪಟಿಕ ರತ್ನ ಧಾರಣೆ ನಿಮಗೆ ಸಾಕಷ್ಟು ಲಾಭ ತರಲಿದೆ.

ಮಿಥುನ ರಾಶಿ- ಈ ರಾಶಿಯ ಜನರಿಗೆ ಗುರು ವಕ್ರಿ ಅವಧಿಯಲ್ಲಿ ಕೆಲಸ ಕಾರ್ಯಗಳು ಹಾಗೂ ವ್ಯಾಪಾರದಲ್ಲಿ ನಿರೀಕ್ಷೆಗೆ ತಕ್ಕಂತೆ ಯಶಸ್ಸು ಸಿಗಲಿದೆ. ಗುರು ನಿಮ್ಮ ಜಾತಕದ ದಶಮ ಭಾವದಲ್ಲಿ ವಕ್ರನಡೆ ಅನುಸರಿಸಿದ್ದಾನೆ. ಈ ಭಾವವನ್ನು ನೌಕರಿ, ವ್ಯಾಪಾರ ಹಾಗೂ ಕಾರ್ಯಕ್ಷೇತ್ರದ ಭಾವ ಎಂದು ಭಾವಿಸಲಾಗುತ್ತದೆ. ಈ ಅವಧಿಯಲ್ಲಿ ಹೊಸ ನೌಕರಿಯ ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ಪ್ರಮೋಶನ್ ಹಾಗೂ ವೇತನ ವೃದ್ಧಿಯ ಸಾಧ್ಯತೆಗಳು ಗೋಚರಿಸುತ್ತಿವೆ. ವ್ಯಾಪಾರದಲ್ಲಿ ಹೊಸ ಆರ್ಡರ್ ಧನಲಾಭವನ್ನು ತಂದು ಕೊಡಲಿದೆ. ಹೊಸ ವ್ಯಾಪಾರ ಸಂಬಂಧಗಳು ಕುದುರಲಿವೆ. ವ್ಯಾಪಾರದಲ್ಲಿ ವಿಸ್ತಾರದ ಸಾಧ್ಯತೆ ಇದೆ. ಉತ್ತಮ ಧನಲಾಭವಾಗುವ ಸಾಧ್ಯತೆ ಇದೆ. ಕೋರ್ಟ್-ಕಚೇರಿ ಪ್ರಕರಣಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ರಾಶಿಯ ಜಾತಕದವರಿಗೆ ಪಚ್ಚೆ ರತ್ನ ಧಾರಣೆ ಲಾಭ ತರಲಿದೆ.

ಕರ್ಕ ರಾಶಿ- ಗುರು ವಕ್ರಿಯಾಗುವುದರಿಂದ ಆಕಸ್ಮಿಕ ಧನ ಲಾಭದ ಸಾಧ್ಯತೆಗಳು ಕಂಡುಬರುತ್ತಿವೆ. ಗುರುಗ್ರಹ ನಿಮ್ಮ ಚಾತಕದ ನವಮ ಭಾವದಲ್ಲಿ ವಕ್ರನಾಗಿದ್ದಾನೆ. ಇದನ್ನು ನಿಮ್ಮ ಜಾತಕದ ಭಾಗ್ಯ ಹಾಗೂ ವಿದೇಶ ಯಾತ್ರೆಯ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಕೆಲಸದ ನಿಮಿತ್ತ ಸಣ್ಣ ಪುಟ್ಟ ಯಾತ್ರೆಗಳು ಸಂಭವಿಸುವ ಸಾಧ್ಯತೆ ಇದೆ ಮತ್ತು ಈ ಯಾತ್ರೆ ನಿಮಗೆ ಲಾಭ ತರಲಿದೆ. ವಿದೇಶಕ್ಕೆ ಸಂಬಂಧಿಸಿದ ವ್ಯಾಪಾರಗಳನ್ನೂ ನಡೆಸುವ ಜನರಿಗೆ ಈ ಸಮಯ ಅನುಕೂಲಕರವಾಗಲಿದೆ.

ಇದನ್ನೂ ಓದಿ-Mangal Gochar 2022: ಶೀಘ್ರದಲ್ಲಿಯೇ ಮಿಥುನ ರಾಶಿಗೆ ಮಂಗಳನ ಪ್ರವೇಶ, ಈ 3 ರಾಶಿಗಳ ಜನರಿಗೆ ಭಾರಿ ಲಾಭ

ಗುರು ನಿಮ್ಮ ಜಾತಕದ 6ನೇ ಭಾವದ ಅಧಿಪತಿ. ಇದನ್ನು ರೋಗ, ಕೋರ್ಟ್-ಕಚೇರಿ ಹಾಗೂ ಶತ್ರುವಿನ ಭಾವ ಎಂದು ಭಾವಿಸಲಾಗುತ್ತದೆ. ಗುರುವಿನ ಮೀನ ರಾಶಿಯಲ್ಲಿನ ವಕ್ರನಡೆ ಸಾಹಸ ಹಾಗೂ ಶೌರ್ಯದಲ್ಲಿ ಹೆಚ್ಚಳ ಮಾಡಲಿದೆ. ಗುಪ್ತ ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಇದಲ್ಲದೆ, ನಿಮ್ಮ ರಾಶಿಯ ಅಧಿಪತಿಯಾಗಿರುವ ಚಂದ್ರನ ಜೊತೆಗೆ ಗುರಿವಿನ ಸ್ನೇಹಭಾವದ ಸಂಬಂಧವಿದೆ. ಹೀಗಾಗಿ ಗುರುವಿನ ಈ ವಕ್ರನಡೆ ನಿಮ್ಮ ಪಾಲಿಗೆ ಶುಭಫಲದಾಯಿ ಸಾಬೀತಾಗಲಿದೆ. 

ಇದನ್ನೂ ಓದಿ-Pitru Paksha 2022: ನಿಮ್ಮಿಂದ ಶ್ರಾದ್ಧ ನೆರವೇರಿಸಲು ಆಗುತ್ತಿಲ್ಲ ಎಂದಾದಲ್ಲಿ ಈ ಉಪಾಯಗಳನ್ನು ಅನುಸರಿಸಿ ಅಗಲಿದವರನ್ನು ಸಂತೋಷಪಡಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News