ನವದೆಹಲಿ: ಕ್ಯಾನ್ಬೆರಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡವು ಆಸಿಸ್ ವಿರುದ್ಧ 11 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ.
ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಮುರಿಯಲು ಕೊಹ್ಲಿಗೆ ಕೇವಲ 23 ರನ್ ಗಳಷ್ಟೇ ಬಾಕಿ...!
ಟಾಸ್ ಗೆದ್ದು ಆಸ್ಟ್ರೇಲಿಯಾ ತಂಡವು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದು ಕೊಂಡಿತು.ಭಾರತದ ಪರವಾಗಿ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಕನ್ನಡಿಗ ಕೆ.ಎಲ್ ರಾಹುಲ್ 51 ರನ್ ಗಳಿಸಿದರು.ಇನ್ನೊಂದೆಡೆಗೆ ರವಿಂದ್ರ ಜಡೇಜಾ ಕೊನೆಯಲ್ಲಿ ಕೇವಲ 23 ಎಸೆತಗಳಲ್ಲಿ 44 ರನ್ ಗಳಿಸಿದ್ದರಿಂದಾಗಿ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
ಸಚಿನ್ ತೆಂಡೂಲ್ಕರ್ ಅವರ 17 ವರ್ಷಗಳ ದಾಖಲೆ ಮುರಿದ ವಿರಾಟ್ ಕೊಹ್ಲಿ
🙋♂️ T20I debut to remember for Natarajan
🏏 Crucial knocks from Rahul and Jadeja
🔄 Chahal a vital concussion subAnd plenty of crazy moments!
Read the report from the first #AUSvIND T20I 👇
— ICC (@ICC) December 4, 2020
ಇದಾದ ನಂತರ 162 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಉತ್ತಮ ಆರಂಭವನ್ನೇ ಕಂಡಿತು, ಆರಂಭಿಕ ಆಟಗಾರರಾದ ಡಿಆರ್ಕಿ ಶಾರ್ಟ್ 34 ಹಾಗೂ ಆರನ್ ಫಿಂಚ್ 35 ರನ್ ಗಳನ್ನು ಗಳಿಸಿದರು.ಇನ್ನೇನೂ ಆಸ್ಟ್ರೇಲಿಯಾ ಗೆಲುವಿನ ಹಾದಿಗೆ ಮರಳಿತು ಎನ್ನುವಷ್ಟರಲ್ಲಿ ಚಹಾಲ್ ಹಾಗೂ ಟಿ.ನಟರಾಜನ್ ಅವರ ಮಾರಕ ಬೌಲಿಂಗ್ ನಿಂದಾಗಿ ಆಸಿಸ್ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆ ಮೂಲಕ ಈಗ ಭಾರತ ತಂಡವು ತನ್ನ ಟಿ20 ಅಭಿಯಾನವನ್ನು ಗೆಲುವಿನ ಮೂಲಕ ಆರಂಭಿಸಿದೆ.