ನವದೆಹಲಿ: ಸೆಂಚುರಿಯನ್ ನಲ್ಲಿ ನಡೆಯುತ್ತಿರುವ ದ್ವೀತಿಯ ಟೆಸ್ಟ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ದಕ್ಷಿಣ ಆಫ್ರಿಕಾ ತಂಡವು 335 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.
ಭಾರತದ ಪರ ರವಿಚಂದ್ರನ್ ಆಶ್ವಿನ್(4) ಹಾಗೂ ಇಶಾಂತ್ ಶರ್ಮಾ(3) ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಗೆ ಕಡಿವಾಣ ಹಾಕಿದರು.ದಕ್ಷಿಣ ಆಫ್ರಿಕಾದ ಪರ ಐಡನ್ ಮಾರ್ಕ್ರಂ 94, ಹಸಿಮ್ ಆಮ್ಲಾ 82, ಫಾಫ್ ದುಫ್ಲೆಸಿಸ್ 63 ರನ್ ಗಳಿಸುವುದರ ಮೂಲಕ ತಂಡವನ್ನು ಸುಸ್ಥಿತಿಗೆ ತಂದರು.
ಇದಕ್ಕೆ ಪ್ರತಿ ತನ್ನ ಮೊದಲನೆಯ ಇನ್ನಿಂಗ್ಸ್ ನ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡವು 28 ರನ್ ರಾಹುಲ್ ಹಾಗೂ ಚೇತೆಶ್ವರ್ ಪೂಜಾರ್ ರವರ ಪ್ರಮುಖ ಎರಡು ವಿಕೆಟ್ ಕಳೆದುಕೊಳ್ಳುವುದರ ಮೂಲಕ ಆರಂಭಿಕ ಆಘಾತವನ್ನು ಅನುಭವಿಸಿದೆ. ಸದ್ಯ ಕ್ರಿಸ್ ನಲ್ಲಿ ಮುರಳಿ ವಿಜಯ್ 46* ಹಾಗೂ ನಾಯಕ ವಿರಾಟ್ ಕೊಹ್ಲಿ 51 * ರನ್ ಗಳ ನೆರವಿನಿಂದ 107 ರನ್ ಗಳಿಸಿದೆ,