ನಾಯಕತ್ವದಿಂದ ಕೆಳಗಿಳಿದ ನಂತರ ವಿರಾಟ್ ಕೊಹ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ: ಬಾಲ್ಯದ ಕೋಚ್ ಹೇಳಿಕೆ

ಇಲ್ಲಿ ಪಾರದರ್ಶಕತೆ ಇಲ್ಲ ಎಂದು ವಿರಾಟ್ ಕೊಹ್ಲಿ ಆಪ್ತ ರಾಜ್‌ಕುಮಾರ್ ಶರ್ಮಾ ಬಿಸಿಸಿಐ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ.

Written by - Puttaraj K Alur | Last Updated : Dec 12, 2021, 07:54 AM IST
  • ಬಿಸಿಸಿಐ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ ಬಾಲ್ಯದ ಕೋಚ್
  • ಕೊಹ್ಲಿ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಹೇಳಿದ ರಾಜ್ ಕುಮಾರ್ ಶರ್ಮಾ
  • ಸೌರವ್ ಗಂಗೂಲಿ ಹೇಳಿಕೆಯಿಂದ & ಬಿಸಿಸಿಐ ನಡೆಯಿಂದ ನನಗೆ ಶಾಕ್ ಆಗಿದೆ ಎಂದ ಶರ್ಮಾ
ನಾಯಕತ್ವದಿಂದ ಕೆಳಗಿಳಿದ ನಂತರ ವಿರಾಟ್ ಕೊಹ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ: ಬಾಲ್ಯದ ಕೋಚ್ ಹೇಳಿಕೆ title=
ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ

ನವದೆಹಲಿ: 2021ರ ಐಸಿಸಿ ಟಿ-20 ವಿಶ್ವಕಪ್(T20 World Cup 2021) ಬಳಿಕ ವಿರಾಟ್ ಕೊಹ್ಲಿ ಭಾರತ ಟಿ-20 ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರು. ಇದೀಗ ಬಿಸಿಸಿಐ ಎರಡೂ ಮಾದರಿಯಲ್ಲಿ ಒಬ್ಬರೇ ನಾಯಕ ಇರಬೇಕೆಂಬ ಕಾರಣ ನೀಡಿ ಏಕದಿನ ನಾಯಕತ್ವದಿಂದಲೂ ಕೊಹ್ಲಿಯನ್ನು ಕೆಳಗಿಳಿಸಿದೆ. ಇದೀಗ ಎರಡೂ ಸೀಮಿತ ಓವರ್‌ಗಳ ನಾಯಕತ್ವವನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ(Rohit Sharma)ಗೆ ವಹಿಸಲಾಗಿದೆ. 

ವಿರಾಟ್‌ನ ಬಾಲ್ಯದ ಕೋಚ್‌ಗೆ ಅಚ್ಚರಿ!

Virat-Kohli-2.jpg

ಬಿಸಿಸಿಐ(BCCI)ನ ಈ ನಿರ್ಧಾರದಿಂದ ಕ್ರಿಕೆಟ್ ತಜ್ಞರು ಹಾಗೂ ಅಭಿಮಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದು, ವಿರಾಟ್ ಕೊಹ್ಲಿ(Virat Kohli)ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಶರ್ಮಾ(Rajkumar Sharma)ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ತಮ್ಮ ಸ್ವಂತ ಇಚ್ಛೆಯ ಮೇರೆಗೆ ಟಿ-20 ನಾಯಕತ್ವವನ್ನು ತೊರೆದಿದ್ದರು. ಏಕದಿನ ಪಂದ್ಯಗಳಲ್ಲಿ ಅವರು ತಂಡವನ್ನು ಉತ್ತಮವಾಗಿಯೇ ಮುನ್ನೆಡೆಸುತ್ತಿದ್ದರು. ಅವರನ್ನು ಏಕೆ ಏಕದಿನ ಪಂದ್ಯಗಳ ನಾಯಕತ್ವದಿಂದ ಕೆಳಗಿಳಿಸಲಾಯಿತು ಎಂದು ಆಯ್ಕೆದಾರರ ವಿರುದ್ಧ ಕೊಹ್ಲಿ ಬಾಲ್ಯದ ಕೋಚ್ ಗರಂ ಆಗಿದ್ದಾರೆ.  

ಇದನ್ನೂ ಓದಿ: Ravi Shastri : 2019 ರ ವಿಶ್ವಕಪ್ ಸೋಲಿನ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗ ಪಡಿಸಿದ ರವಿಶಾಸ್ತ್ರಿ 

‘ಕೊಹ್ಲಿ ಫೋನ್ ಸ್ವಿಚ್ ಆಫ್ ಆಗಿತ್ತು’

ಏಕದಿನ ಕ್ರಿಕೆಟ್‌ನ ನಾಯಕತ್ವದಿಂದ ಕೆಳಗಿಳಿದ ನಂತರ ವಿರಾಟ್ ಕೊಹ್ಲಿ(Virat kohli Captaincy)ಯೊಂದಿಗೆ ಇದುವರೆಗೆ ಮಾತನಾಡಿಲ್ಲ ಎಂದು ರಾಜ್‌ಕುಮಾರ್ ಶರ್ಮಾ ಹೇಳಿಕೊಂಡಿದ್ದಾರೆ.  ಕಾರಣಾಂತರಗಳಿಂದ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಅವರ ಜೊತೆಗೆ ಈ ಬಗ್ಗೆ ಮಾತನಾಡಲು ಸಾಧ್ಯವಾಗಿಲ್ಲವೆಂದು ಅವರು ತಿಳಿಸಿದ್ದಾರೆ.  

Virat-Kohli-3.jpg

ಗಂಗೂಲಿ ಹೇಳಿಕೆಯಿಂದ ಶಾಕ್ ಆದ ರಾಜ್‌ಕುಮಾರ್!

ಟಿ-20 ನಾಯಕತ್ವವನ್ನು ಬಿಟ್ಟುಕೊಡದಂತೆ ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಹೇಳಿದ್ದರು. ಈ ಬಗ್ಗೆ ಮಾತನಾಡಿರುವ ರಾಜ್‌ಕುಮಾರ್ ಶರ್ಮಾ, ‘ಗಂಗೂಲಿ ಅವರ ಈ ಹೇಳಿಕೆಯಿಂದ ನನಗೆ ಶಾಕ್ ಆಗಿದೆ, ಏಕೆಂದರೆ ಸುತ್ತಮುತ್ತ ನಡೆಯುತ್ತಿರುವ ವಿಷಯಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ ಎಂಬುದನ್ನು ಗಮನಿಸಬೇಕು. ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿರುವುದು ಸರಿಯಲ್ಲವೆಂದು’ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಇಶಾಂತ್ ಶರ್ಮಾಗೆ ದಕ್ಷಿಣ ಆಫ್ರಿಕಾದ ಪ್ರವಾಸವು ಕೊನೆಯ ಸರಣಿಯಾಗಲಿದೆಯೇ?

ಬಿಸಿಸಿಐನ ಪಾರದರ್ಶಕತೆಯ ಪ್ರಶ್ನೆ

Virat-Kohli-4.jpg

ಇಲ್ಲಿ ಪಾರದರ್ಶಕತೆ ಇಲ್ಲ ಎಂದು ವಿರಾಟ್ ಕೊಹ್ಲಿ ಆಪ್ತ ರಾಜ್‌ಕುಮಾರ್ ಶರ್ಮಾ ಬಿಸಿಸಿಐ(BCCI) ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಏಕೆ ಹೀಗಾಯಿತು ಎಂದು ಇಲ್ಲಿಯವರೆಗೂ ನನಗೆ ಅರ್ಥವಾಗುತ್ತಿಲ್ಲ. ವಿರಾಟ್ ಏಕದಿನ ಮಾದರಿಯಲ್ಲಿ ಯಶಸ್ವಿ ನಾಯಕ. ಅವರು ತಂಡವನ್ನು ಉತ್ತಮವಾಗಿಯೇ ಮುನ್ನೆಡೆಸುತ್ತಿದ್ದರು ಅಂತಾ ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News