ಶಾಲೆಗಳು ಮತ್ತೆ ತೆರೆಯುವವರೆಗೆ ವಿದ್ಯಾರ್ಥಿಗಳಿಂದ ಶುಲ್ಕ ತೆಗೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರದ ಆದೇಶದ ನಂತರ ಕೋಪಗೊಂಡ ಖಾಸಗಿ ಶಾಲೆಗಳು ಆನ್ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿವೆ.
ಸೆಪ್ಟೆಂಬರ್ 5 ರಿಂದ ಶಾಲೆಗಳನ್ನು ತೆರೆಯಲು ಆಂಧ್ರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಸರ್ಕಾರ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಸಹ ಮಾಡುತ್ತಿದೆ. ಆದರೆ ಆ ಸಂದರ್ಭ ಕರೋನಾ ಪರಿಸ್ಥಿತಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ದೇಶಾದ್ಯಂತ ಜಿಮ್ ಕೇಂದ್ರಗಳನ್ನು ಪುನರಾರಂಭಿಸಬೇಕೆಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕನ್ನಡಿಗರೂ ಆಗಿರುವ ಬಿ.ವಿ.ಶ್ರೀನಿವಾಸ್ ಅವರು ಪ್ರಧಾನಿ ಮೋದಿ ಅವರಿಗೆ ಆಗ್ರಹಿಸಿದ್ದಾರೆ.
ಈಗ ಪ್ರತಿದಿನ 35 ಸಾವಿರಕ್ಕೂ ಹೆಚ್ಚು ಜನರಲ್ಲಿ ಕರೋನಾ ಸೋಂಕು ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಬಹುದು ಎಂದು ಕೋವಿಡ್ -19 ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
COVID-19 ಮೇಲೆ ನಿಗಾವಹಿಸಲು ನಿರ್ಧರಿಸಿರುವ ಮೇಘಾಲಯ ಸರ್ಕಾರ ಜುಲೈ 24 ರಿಂದ 31 ರವರೆಗೆ ರಾಜ್ಯಕ್ಕೆ ಎಲ್ಲಾ ಎಂಟ್ರಿ ಪಾಯಿಂಟ್ ಗಳನ್ನು ಮುಚ್ಚಲು ನಿರ್ಧರಿಸಿದೆ, ಗುರುವಾರ ಕೊರೊನಾ ಸಂಖ್ಯೆ 354 ಕ್ಕೆ ಏರಿದ ಹಿನ್ನಲೆಯಲ್ಲಿ ಸರ್ಕಾರ ಕ್ರಮ ಬಂದಿದೆ.
ಕೊರೊನಾ ಪ್ರಕೊಪದ ಹಿನ್ನೆಲೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಕೆಲೆವೆಡೆ ಲಾಕ್ ಡೌನ್ ತೆರೆವುಗೊಳಿಸಲಾದರೆ, ಇನ್ನೂ ಹಲವೆಡೆ ಎರಡನೇ-ಮೂರನೇ ಬಾರಿಗೆ ಲಾಕ್ ಡೌನ್ ಮುಂದುವರೆಸಲಾಗುತ್ತಿದೆ.
ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳು 8.5 ಲಕ್ಷಕ್ಕೆ ತಲುಪಿದೆ. ಏತನ್ಮಧ್ಯೆ ಮುಂಬರುವ ದಿನಗಳಲ್ಲಿ ಬೆಂಗಳೂರು ಮತ್ತು ಪುಣೆ ಸೇರಿದಂತೆ ಹಲವಾರು ನಗರಗಳ ಅಧಿಕಾರಿಗಳು ವಿವಿಧ ಅವಧಿಗಳಿಗೆ ಲಾಕ್ಡೌನ್ ಅನ್ನು ಮತ್ತೆ ಅನ್ವಯಿಸಲು ತಯಾರಿ ನಡೆಸುತ್ತಿದ್ದಾರೆ.
ಖಾಸಗಿ ಶಾಲೆಗಳ ಮೂರು ತಿಂಗಳ (ಏಪ್ರಿಲ್ 1 ರಿಂದ ಜೂನ್ ವರೆಗೆ) ಶುಲ್ಕವನ್ನು ಮನ್ನಾ ಮಾಡುವಂತೆ ಮತ್ತು ನಿಯಮಿತ ಶಾಲೆ ಪ್ರಾರಂಭವಾಗುವವರೆಗೆ ಶುಲ್ಕವನ್ನು ನಿಯಂತ್ರಿಸುವಂತೆ ಒತ್ತಾಯಿಸಿ 8 ರಾಜ್ಯಗಳ ಪೋಷಕರು ಒಟ್ಟಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಬಿಹಾರದಲ್ಲಿ ಬುಧವಾರ ಕೊರೊನಾ ಪ್ರಕರಣಗಳ ಸಂಖ್ಯೆ 13,000 ಕ್ಕೆ ಏರಿದ್ದರಿಂದ, ಪಾಟ್ನಾ ಜಿಲ್ಲಾಡಳಿತವು ಶುಕ್ರವಾರದಿಂದ ಒಂದು ವಾರ ನಗರದಲ್ಲಿ ಸಂಪೂರ್ಣ ಲಾಕ್ಡೌನ್ ವಿಧಿಸಲು ನಿರ್ಧರಿಸಿತು.
ಈ ಕುರಿತಾದ ಅರ್ಜಿಯ ವಿಚಾರಣೆಯ ವೇಳೆ ಸರ್ವೋಚ್ಛ ನ್ಯಾಯಾಲಯ ಆಟೋಮೊಬೈಲ್ ಡೀಲರ್ ಅಸೋಸಿಯೇಷನ್ ಗೆ ತಪರಾಕಿ ಹಾಕಿದೆ. ಈ ಸಂದರ್ಭದಲ್ಲಿ ಇದುವರೆಗೂ ಕೂಡ BS-4 ವಾಹನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.