ದುಡ್ಡು ಕೊಟ್ಟು ನೀರು ಕುಡಿಯುತ್ತಿರುವ ಹೆಬ್ಬಾಳ್ಕರ್ ಕ್ಷೇತ್ರದ ಜನ. ನೀರಿಗಾಗಿ ಒತ್ತಾಯಿಸಿ ಹಲವಾರು ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಮನವಿ. ಬೆಳಗಾವಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿನಿಧಿಸುವ ಕ್ಷೇತ್ರ.
ವೈ.ಎನ್.ಹೊಸಕೋಟೆಯ ತಾತಯ್ಯನ ಗುಡಿಯ ಬಳಿ ಘಟನೆ. ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯ ತಾತಯ್ಯನ ಗುಡಿ. ನಲ್ಲಿ ನೀರಿಗೆ ಚರಂಡಿ ನೀರು ಸೇರಿದ ಪರಿಣಾಮ ಘಟನೆ . ಗೇಟ್ ವಾಲ್ಗಳ ಮೂಲಕ ನಲ್ಲಿ ನೀರಿಗೆ ಸೇರಿರುವ ಕಲುಷಿತ ನೀರು. ನೀರು ಕುಡಿದು 10ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡ ವಾಂತಿ, ಬೇಧಿ, ಜ್ವರ. ಅಸ್ವಸ್ಥರಿಗೆ ಪಾವಗಡ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ.ತಹಶೀಲ್ದಾರ್, ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ.
500ಕ್ಕೂ ಹೆಚ್ಚು ಮನೆಗಳಿರೋ ದೇವಗಿರಿ ಗ್ರಾಮಕ್ಕೆ ಜಿಲ್ಲಾಡಳಿತ ಕೆವಲ ಎರಡು ಬೋರ್ ವೇಲ್ ವ್ಯವಸ್ಥೆ ಮಾಡಿದೆ. ಪ್ರತಿ ದಿನ ಸಂಜೆ 4 ಗಂಟೆಗೆ ಪ್ರತಿ ಕುಟುಂಬಕ್ಕೆ 10 ಬಿಂದಿಗೆ ನೀರು ನೀಡಲಾಗುತ್ತದೆ. ಆದ್ರೆ ಈ ನೀರು ಈ ಗ್ರಾಮದ ಜನರ ಬಳಕೆಗೆ ಸಾಕಾಗಲ್ಲ ಅಂತಾ ಬೇಸರ ವ್ಯಕ್ತ ಪಡಿಸಿದರು. ಇನ್ನು ಸಮಸ್ಯೆ ಕೇವಲ ದೇವರಿಗಿ ಹಳ್ಳಿಯದೊಂದೆ ಅಲ್ಲ ಜಿಲ್ಲೆಯಲ್ಲಿ 145 ಹಳ್ಳಿಯಲ್ಲಿ ಈ ಸಮಸ್ಯೆ ಇದೆ ಅಂತಾ ಜನರು ಆಕ್ರೋಶ ಹೊರಹಾಕಿದರು.
ದಿನೇ ದಿನೇ ಬಿಸಿಲು ಜಾಸ್ತಿಯಾಗುತ್ತಿದೆ. ಈ ಬಾರಿ ಬೇಸಿಗೆ ತುಸು ಬೇಗನೇ ಆರಂಭವಾಗಿದೆ. ಈ ಮಧ್ಯೆ, ಬೆಂಗಳೂರಲ್ಲಿ ಬೋರ್ ವೆಲ್ ಗಳು ಬತ್ತಿ ಹೋಗುತ್ತಿವೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದ್ರೂ ಸಹ ರಾಜ್ಯದಲ್ಲಿ ಮೇಲಿಂದ ಮೇಲೆ ಕಲುಷಿತ ನೀರು ಸೇವಿಸಿ ಜನ ಸಾವನ್ನಪ್ಪುತ್ತಿರುವ ಪ್ರಕರಣಗಳು ಮರುಕಳಿಸ್ತಾನೆ ಇವೆ. ಅದರಲ್ಲೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲುಷಿತ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು ಶುದ್ಧ ಕುಡಿಯುವ ನೀರಿನ ಘಟಕಗಳೇ ಇಲ್ಲದಂತಾಗಿದೆ .
ಅದು ಬರೋಬ್ಬರಿ ಮೂರು ದಶಕಗಳ ಬಳಿಕ ತುಂಬಿ ತುಳುಕುತ್ತಿದ್ದ ಕೆರೆ. ಮೂವತ್ತು ವರ್ಷಗಳ ಬಳಿಕ ತುಂಬಿದ ಕೆರೆಯಿಂದ ನೂರಾರು ಹಳ್ಳಿಗರ ಜನರಲ್ಲಿ ಮಂದಾಸ ಮೂಡಿತ್ತು. ಜೀವಜಲದಿಂದ ಜೀವನ ಬಂಗಾರವಾಯ್ತು ಅಂದುಕೊಂಡಿದ್ದವರಲ್ಲಿ ಬರಸಿಡಲು ಬಡಿದಂತಾಗಿದೆ. ನೋಡ ನೋಡುತ್ತಿದಂತೆ ಇಡೀ ಕೆರೆಯೇ ಬರಿದಾಗಿದೆ.
ಬರಗಾಲದ ಜಿಲ್ಲೆ ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಬದ್ಧವಾಗಿದೆ. ಆ ಕೆಲಸವನ್ನು ನಾವು ಮಾಡ್ತಾ ಇದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸಮರ್ಪಕ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಶಾಸಕರ ಹಸ್ತಕ್ಷೇಪ ಆರೋಪ ರಾಯಚೂರಿನ ದೇವದುರ್ಗ ಶಾಸಕ ಶಿವನಗೌಡ ನಾಯಕ್ ವಿರುದ್ದ ಜೆಡಿಎಸ್ ಆಕ್ರೋಶ ದೇವದುರ್ಗ ತಾಲೂಕಿನ ಚಿಕ್ಕಹೊನ್ನಕುಣಿ ಬಳಿಯ KBJNL ಕಚೇರಿ ಬಳಿ ಪ್ರತಿಭಟನೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.