IPL 2025 MS Dhoni Latest News: ಐಪಿಎಲ್ 2024 ಮುಕ್ತಾಯಗೊಂಡಾಗಿನಿಂದಲೂ, ಮಹೇಂದ್ರ ಸಿಂಗ್ ಧೋನಿಯ ಭವಿಷ್ಯದ ಬಗ್ಗೆ ತಿಲೀದುಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ರಾಂಚಿಯಲ್ಲಿ ಧೋನಿ ತಮ್ಮ ಕುಟುಂಬದೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಿಂದ ದೂರವಿರುವ ಧೋನಿಯನ್ನು, ಐಪಿಎಲ್ ಬಗ್ಗೆ ಊಹಾಪೋಹಗಳಿಗೆ ಉತ್ತರ ನೀಡುವಂತೆ ಅಭಿಮಾನಿಗಳನ್ನು ಒತ್ತಾಯಿಸಿದ್ದಾರೆ.
Rohit Sharma: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ವೇಳೆ ರುತುರಾಜ್ ಗಾಯಕ್ವಾಡ್ ನೀಡಿದ ಕ್ಯಾಚ್ ಕೈಬಿಟ್ಟರು. ಆದರೆ, ಈ ಹಂತದಲ್ಲಿ ರೋಹಿತ್ ಪ್ಯಾಂಟ್ ಕೂಡ ಸ್ವಲ್ಪ ಜಾರಿತು. ಇದೀಗ ಆ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
MS Dhoni Sister: ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಆಡಲು ಸಿದ್ಧರಾಗಿದ್ದಾರೆ. ಕಳೆದ ವರ್ಷ ಅಂದರೆ 2023ರಲ್ಲಿ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿತ್ತು. ಈ ಸೀಸನ್ಲ್ಲಿಯೂ ಚೆನ್ನೈ ತನ್ನ ಪ್ರಬಲ ಪ್ರದರ್ಶನವನ್ನು ಮುಂದುವರಿಸಲು ಪ್ರಯತ್ನಿಸುತ್ತದೆ.
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಕುರಿತು ಹೇಳಿಕೆ ನೀಡಿರುವ ಕ್ರಿಕೆಟ್ ವಿಶ್ಲೇಷಕ ಹರ್ಷಾ ಭೋಗ್ಲೆ, ಧೋನಿ ಕಾಲ ಅಂತ್ಯವಾಗಿದ್ದು, ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ-20 ವರ್ಲ್ಡ್ ಕಪ್ ಟೂರ್ನಿಯಲ್ಲಿ ಆಡದೆ ಇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಯೂಗೊವ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತದ ಅತ್ಯಂತ ಮೆಚ್ಚುಗೆ ಪಡೆದ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶೇಷ ವೆಂದರೆ ಅವರು ಭಾರತದ ನಾಯಕ ವಿರಾಟ್ ಕೊಹ್ಲಿ ಅವರನ್ನು ಸಹಿತ ಹಿಂದಿಕ್ಕಿದ್ದಾರೆ.
ವಿರಾಟ್ ಕೊಹ್ಲಿ ಅದ್ಬುತ ನಾಯಕ ಆದರೆ ಒತ್ತಡ ಪರಿಸ್ಥಿತಿ ನಿಭಾಯಿಸಲು ಭಾರತ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಅಗತ್ಯವೆಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು, ಅದರಲ್ಲೂ ಅವರ ಕೀಪಿಂಗ್ ವಿಷಯ ಬಂದಾಗಲಂತೂ ಯಾರೂ ಕೂಡ ಅವರ ಸರಿಸಮನಾಗಿ ನಿಲ್ಲಲಾರರು.ಇದಕ್ಕೆ ಪೂರಕ ಎನ್ನುವಂತೆ ಈಗ ಐಸಿಸಿ ಕೂಡ ಟ್ವೀಟ್ ಮಾಡಿದೆ.
ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಸಹ ಆಟಗಾರರು ಎನ್ನುವುದು ಎಲ್ಲರಿಗೂ ಮತ್ತು ಇಡೀ ಜಗತ್ತಿಗೂ ತಿಳಿದಿರುವ ವಿಷಯ. ದರೆ ಈಗ ನಾವು ಇಲ್ಲಿ ಹೇಳ ಹೊರಟಿರುವ ವಿಷಯ ಇದಲ್ಲ. ಬದಲಾಗಿ ಇವರಿಬ್ಬರ ಪತ್ನಿಯರು ಶಾಲೆಯೊಂದರಲ್ಲಿ ಸಹಪಾಠಿಗಳು ಎನ್ನುವುದನ್ನು ನಾವು ಹೇಳುತ್ತಿದ್ದೇವೆ.
ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರದಂದು ಆಸ್ಟ್ರೇಲಿಯಾದ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 10,000 ರನ್ ಗಳ ಕ್ಲಬ್ ಗೆ ಸೇರಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರರಾಗಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ನಾಯಕತ್ವವನ್ನು ತೊರೆದದ್ದು ಮುಂಬರುವ ವಿಶ್ವಕಪ್ ಗೆ ಹೊಸ ನಾಯಕ ಸಜ್ಜಾಗಲು ಸಮಯ ಬೇಕು ಆ ಕಾರಣಕ್ಕಾಗಿ ನಾಯಕತ್ವದ ಹುದ್ದೆಯಿಂದ ಕೆಳಗಿಳಿದಿದ್ದು ಎಂದು ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಪ್ರಿಲ್ 2 ರಂದು ರಾಷ್ಟ್ರಪತಿ ಭವನದಲ್ಲಿ ದೇಶದ ಮೂರನೆಯ ಅತ್ಯುನ್ನತ ಗೌರವ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಏಪ್ರಿಲ್ 2 ಧೋನಿಗೆ ಬಹಳ ವಿಶೇಷವಾಗಿದೆ. ಈ ದಿನ ಅವರು ಭಾರತ ತಂಡಕ್ಕಾಗಿ ವಿಶ್ವಕಪ್ ಗೆದ್ದಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.