ಅಗ್ಗದ ಬೆಲೆಯಲ್ಲಿ 5G ಸ್ಮಾರ್ಟ್ ಫೋನ್ ಲಾಂಚ್ ಮಾಡಲಿರುವ Samsung

ಕಂಪನಿಯು ಈ ವಾರ 5G Smartphone ಅನ್ನು ಅಗ್ಗದ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ ಎಂದು Samsung ತಿಳಿಸಿದೆ. Samsung Galaxy A42 5G ಸ್ಮಾರ್ಟ್‌ಫೋನ್‌ನ ಬೆಲೆ 400 ಡಾಲರ್ ಅಂದರೆ, ಸುಮಾರು 29,183 ರೂ. ಇರಲಿದೆ  ಎಂದು ಕಂಪನಿ ಹೇಳಿದೆ.  

Written by - Ranjitha R K | Last Updated : Mar 8, 2021, 05:06 PM IST
  • Samsungನಿಂದ ಮುಂದಿನ ದಿನಗಳಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ
  • ಈ ವಾರ Samsungನಿಂದ ಅಗ್ಗದ ಬೆಲೆಯ Smartphone ಬಿಡುಗಡೆ
  • Samsung Galaxy A42 5G ಸ್ಮಾರ್ಟ್‌ಫೋನ್‌ನ ಬೆಲೆ 29,183 ರೂ. ಇರಲಿದೆ
ಅಗ್ಗದ ಬೆಲೆಯಲ್ಲಿ 5G ಸ್ಮಾರ್ಟ್ ಫೋನ್ ಲಾಂಚ್ ಮಾಡಲಿರುವ Samsung  title=
Samsung Galaxy A42 5G ಸ್ಮಾರ್ಟ್‌ಫೋನ್‌ (file photo)

ನವದೆಹಲಿ : ಕೊರಿಯಾದ ಮೊಬೈಲ್ ತಯಾರಕ ಸ್ಯಾಮ್‌ಸಂಗ್  (Samsung) ಮುಂದಿನ ದಿನಗಳಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳನ್ನು (Smartphone) ಬಿಡುಗಡೆ ಮಾಡಲಿದೆ. ಭಾರತದಲ್ಲಿ 5 ಜಿ ನೆಟ್‌ವರ್ಕ್ ಪ್ರಾರಂಭವಾಗುವ ಮೊದಲೇ ಅನೇಕ ಹೊಸ 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಕಂಪನಿ ಸಿದ್ದತೆ ನಡೆಸಿದೆ.  ಸ್ಯಾಮ್‌ಸಂಗ್ ಈ ವಾರ ಹೊಸ Samsung Galaxy A42 5G  ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಹೊಸ ಫೋನ್‌ನ ವೈಶಿಷ್ಟ್ಯಗಳು ಮತ್ತು ಬೆಲೆ ಎಷ್ಟಿರಲಿದೆ ಎಂಬ ಮಾಹಿತಿ ಇಲ್ಲಿದೆ. 

ಈ ವಾರ ಫೋನ್ ಲಾಂಚ್ :
ಕಂಪನಿಯು ಈ ವಾರ 5G Smartphone ಅನ್ನು ಅಗ್ಗದ ಬೆಲೆಯಲ್ಲಿ ಬಿಡುಗಡೆ ಮಾಡಲಿದೆ ಎಂದು Samsung ತಿಳಿಸಿದೆ. ಮೊದಲನೆಯದಾಗಿ, ಈ ಫೋನ್ ಅನ್ನು ದಕ್ಷಿಣ ಕೊರಿಯಾದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಇದರ ನಂತರ, ವಿಶ್ವದ ಇತರ ದೇಶಗಳಲ್ಲಿಯೂ ಇದನ್ನು ಲಾಂಚ್ ಮಾಡಲಾಗುವುದು.

ಇದನ್ನೂ ಓದಿ : International Women's Day: ಮಹಿಳೆಯರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ Google, ಫೇಸ್‌ಬುಕ್‌

Samsung Galaxy A42 5G ಸ್ಮಾರ್ಟ್‌ಫೋನ್‌ನ ಬೆಲೆ 400 ಡಾಲರ್ ಅಂದರೆ, ಸುಮಾರು 29,183 ರೂ. ಇರಲಿದೆ  ಎಂದು ಕಂಪನಿ ಹೇಳಿದೆ.  ಇದು ದಕ್ಷಿಣ ಕೊರಿಯಾದ 5G ಸ್ಮಾರ್ಟ್‌ಫೋನ್‌ನ ಇತರ ಮಾದರಿಗಳಲ್ಲಿ ಅಗ್ಗವಾಗಿದೆ. ಫೋನ್ (Phone) ಈ ವಾರ ಶುಕ್ರವಾರ ಬಿಡುಗಡೆಯಾಗಲಿದೆ. Samsung Galaxy A42 5G ಫೋನ್ ಅನ್ನು ಕಳೆದ ವರ್ಷ ಯುರೋಪ್ ಮತ್ತು ಆಗ್ನೇಯ ಏಷ್ಯಾದ ಆಯ್ದ ಮಾರುಕಟ್ಟೆಗಳಿಗೆ (Market) ಬಿಡುಗಡೆ ಮಾಡಲಾಗಿತ್ತು.  

Samsung Galaxy A42 5Gಯ  ವೈಶಿಷ್ಟ್ಯಗಳು:
ಈ ಹೊಸ ಸ್ಮಾರ್ಟ್‌ಫೋನ್ 6.6 ಇಂಚಿನ ಡಿಸ್ಪ್ಲೇ ಹೊಂದಿದೆ. ಕ್ವಾಡ್ ಕ್ಯಾಮೆರಾ (camera) ಸೆಟಪ್ ಹೊಂದಿರುವ 48 ಎಂಪಿ ಮೈನ್ ಕ್ಯಾಮೆರಾ ಮತ್ತು ಉತ್ತಮ ಸೆಲ್ಫಿಗಾಗಿ 20 ಎಂಪಿ ಫ್ರಂಟ್ ಕ್ಯಾಮೆರಾ ಇರುತ್ತದೆ. ಸ್ಮಾರ್ಟ್ ಫೋನ್ 8 ಎಂಪಿ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 5 ಎಂಪಿ ಡೆಪ್ತ್ ಸೆನ್ಸಾರ್ ಮತ್ತು 5 ಎಂಪಿ ಮೈಕ್ರೋ ಲೆನ್ಸ್ ಹೊಂದಿದೆ.

ಇದನ್ನೂ ಓದಿ WhatsApp Scam - ಎಚ್ಚರ! WhatsApp ನಲ್ಲಿ ನಿಮಗೂ ಈ ಸಂದೇಶ ಬಂದಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ

ಯೋನ್ಹಾಪ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಫೋನ್ 5,000 ಎಮ್ಎಹೆಚ್ ಬ್ಯಾಟರಿಯನ್ನು (Battery) ಹೊಂದಿದ್ದು, ಇದು 4 ಜಿಬಿ  RAM ಮತ್ತು 128 ಜಿಬಿ ಇಂಟರ್ ನೆಲ್ ಸ್ಟೋರೇಜ್ (Storage) ಹೊಂದಿದೆ. ಇದನ್ನು ಮೈಕ್ರೊ ಎಸ್ಡಿ ಕಾರ್ಡ್ ನೊಂದಿಗೆ  1 ಟೆರಾಬೈಟ್ ವರೆಗೆ ವಿಸ್ತರಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News