Viral Video : ಹುಡುಗಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೊರಟದ್ದು ರೈಡ್ ಗೆ ! ಆದರೆ ಮಾರ್ಗ ಮಧ್ಯೆ ಮಾಡಿದ್ದು ...

Viral Video : ರೊಯ್ಯನೆ ಸದ್ದು ಮಾಡಿಕೊಂಡು ರಾಕೆಟ್ ಸ್ಪೀಡ್ ನಲ್ಲಿ ಬೈಕ್ ಓಡಿಸುವ ಅನೇಕರನ್ನು ನೀವು ಕೂಡಾ ನೋಡಿರಬಹುದು. ಇಲ್ಲಿ ನಾವು ಹೇಳುತ್ತಿರುವುದು ಕೂಡಾ ಅಂಥದ್ದೇ ಬೈಕ್ ರೈಡರ್ ಬಗ್ಗೆ.

Written by - Ranjitha R K | Last Updated : Jul 12, 2023, 12:31 PM IST
  • ರೈಡ್ ಗೆ ಹೋರಾಟ ಹುಡುಗ ಹುಡುಗಿ
  • ಬೈಕ್ ನಲ್ಲಿ ಫುಲ್ ಜಾಲಿ ರೈಡ್
  • ಮುಂದೆ ಆದದ್ದು ಮಾತ್ರ ?
Viral Video : ಹುಡುಗಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೊರಟದ್ದು ರೈಡ್ ಗೆ ! ಆದರೆ ಮಾರ್ಗ ಮಧ್ಯೆ ಮಾಡಿದ್ದು ... title=

ನವದೆಹಲಿ : ಹುಡುಗರಾಗಲೀ ಹುಡುಗಿಯರಾಗಲೀ ಕೆಲವರಿಗೆ ಬೈಕ್ ಶೋಕಿ ಹೆಚ್ಚು. ಬೈಕ್ ನಲ್ಲಿ ಕುಳಿತುಕೊಂಡು ಸವಾರಿ ಹೊರಟರೆ ಮತ್ತೆ ಅವರನ್ನು ಹಿಡಿಯುವವರೇ ಇಲ್ಲ. ಹೀಗೆ ರೊಯ್ಯನೆ ಸದ್ದು ಮಾಡಿಕೊಂಡು ರಾಕೆಟ್ ಸ್ಪೀಡ್ ನಲ್ಲಿ ಬೈಕ್ ಓಡಿಸುವ ಅನೇಕರನ್ನು ನೀವು ಕೂಡಾ ನೋಡಿರಬಹುದು. ಇಲ್ಲಿ ನಾವು ಹೇಳುತ್ತಿರುವುದು ಕೂಡಾ ಅಂಥದ್ದೇ ಬೈಕ್ ರೈಡರ್ ಬಗ್ಗೆ. ಇಲ್ಲಿ ಆ ರೈಡರ್ ಹಿಂದೆ ಹುಡುಗಿ ಕೂಡಾ ಇದ್ದಾಳೆ ಅನ್ನುವುದು ಗಮನಿಸಬೇಕಾದ ಅಂಶ. 

ಹುಡುಗ ತನ್ನ ಬೈಕ್ ನ ಹಿಂದೆ ಮುದ್ದಾದ ಹುಡುಗಿಯನ್ನು ಕೂರಿಸಿಕೊಂಡು ರೈಡ್ ಗೆ ಹೊರಟಿರುವುದನ್ನು ಈ ವಿಡಿಯೋದಲ್ಲಿ ಗಮನಿಸಬಹುದು. ಮೊದಲು ಇದೊಂದು ಸಾಮಾನ್ಯ ವಿಡಿಯೋದಂತೆ ಕಾಣುತ್ತದೆ. ಆದರೆ ನಂತರ ಆ ಹುಡುಗನ ಕರಾಮತ್ತು ಕಾಣುತ್ತದೆ. ತನ್ನ ಬಳಿ ಬೈಕ್ ಇದೆ ಎನ್ನುವ ಕಾರಣಕ್ಕೆ ಹಾದಿ ಬೀದಿ ಎಲ್ಲವೂ ತನ್ನದೇ ಅನ್ನುವ ಹಾಗೆ ಬೈಕ್ ಓಡಿಸಲು ಆರಂಭಿಸುತ್ತಾನೆ ಆ ಯುವಕ.  

ಇದನ್ನೂ ಓದಿ : ನಡುರಸ್ತೆಯಲ್ಲಿ ಕಂಬದಂತೆ ನೆಟ್ಟಗೆ ನಿಂತ ನಾಗರಹಾವು..! ವಿಸ್ಮಯಕಾರಿ ವಿಡಿಯೋ ವೈರಲ್‌

ಹಿಂದೆ ಕುಳಿತಿರುವ ಹುಡುಗಿಯೂ ಆರಂಭದಲ್ಲಿ ಈ ಕೆಟ್ಟ ಸಾಹಸವನ್ನು ಎಂಜಾಯ್ ಮಾಡುವಂತೆ ತೋರುತ್ತದೆ. ಆದರೆ ಇದ್ದಕ್ಕಿದ್ದಂತೆಯೇ ಹುಡುಗನಿಗೆ ಬ್ಯಾಲೆನ್ಸ್ ತಪ್ಪುತ್ತದೆ. ವ್ಹೀಲಿಂಗ್ ಮಾಡುತ್ತಿದ್ದಾಗ ಹುಡುಗನ  ಬ್ಯಾಲೆನ್ಸ್ ಬಿಗಡಾಯಿಸುತ್ತದೆ. ತಕ್ಷಣ ಹುಡುಗಿ ಮಾರ್ಗ ಮಧ್ಯೆ ಬೀಳುತ್ತಾಳೆ. ಆ ಹುಡುಗಿ ಬಿದ್ದ ಪರಿ ನೋಡಿದರೆ ಆಕೆಗೆ ಏಳು ಲೋಕ ಕಂಡಿದ್ದು ಮಾತ್ರ ಸುಳ್ಳಲ್ಲ. ಈ ವಿಡಿಯೋದಲ್ಲಿ ಬೈಕ್ ಸವಾರಿ ಮಾಡುತ್ತಿರುವ ಇಬ್ಬರೂ ಕೂಡಾ ಹೆಲ್ಮೆಟ್ ಧರಿಸಿಲ್ಲ ಎನ್ನುವುದು ಮತ್ತೊಂದು ಪ್ರಮುಖ ಅಂಶ.

 

ಇದನ್ನೂ ಓದಿ : Viral News: ಆರತಕ್ಷತೆ ವೇಳೆ ಮಾವನಿಂದ 3 ಕಂಡೀಷನ್, ‘ನಿನ್ನ ಮಗಳೇ ಬೇಡ’ವೆಂದು ಎಸ್ಕೇಪ್ ಆದ ವರ!

ದೆಹಲಿ ಪೊಲೀಸರು ಜಾಗೃತಿ ಮೂಡಿಸುವ ಸಲುವಾಗಿ ಈ ವಿಡಿಯೋವನ್ನು  ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಎಚ್ಚರಿಕೆಯ ವೀಡಿಯೋದಲ್ಲಿ ಹಿನ್ನಲೆಯಲ್ಲಿ ದೆಹಲಿ ಪೊಲೀಸರು 'ಜಬ್ ವಿ ಮೆಟ್' ಚಿತ್ರದ ಹಾಡನ್ನು ಕೂಡಾ ಸೇರಿಸಿದ್ದಾರೆ.  JAB WE MET with an accident due to reckless driving ಎನ್ನುವ ಶೀರ್ಷಿಕೆಯನ್ನು ಕೂಡಾ ನೀಡಿದ್ದಾರೆ. 

ಈ ವಿಡಿಯೋ ವೈರಲ್ ಆಗುತ್ತಿದ್ದು,  ಇಲ್ಲಿಯವರೆಗೆ ಸಾವಿರಾರು ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ. ಅಲ್ಲದೆ ಈ ವಿಡಿಯೋ ಬಗ್ಗೆ ಜನ ಹಲವಾರು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

 

Trending News