Darshan Talks Anout Fans Admiration: ಕರುನಾಡಲ್ಲಿ ಲಕ್ಷ ಲಕ್ಷ ಫ್ಯಾನ್ ಫಾಲೋಯಿಂಗ್ ಇರೋ ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಅಭಿಮಾನಿಗಳ ಅತಿರೇಕದ ಅಭಿಮಾನದ ಬಗ್ಗೆ ಮುಕ್ತವಾಗಿಯೇ ಹೇಳಿಕೊಂಡಿದ್ದರು. ಅವರ ಜೀವದ ಬಗ್ಗೆ ಕಳಕಳಿಯಿಂದಲೆ ಮನದ ಮಾತುಗಳನ್ನೂ ವ್ಯಕ್ತಪಡಿಸಿ, ಅಭಿಮಾನ ಅಂತ ಜೀವ ಕಳೆದುಕೊಳ್ಳುವುದು ಎಷ್ಟು ಸರಿ? ಈ ಪ್ರಶ್ನೆಗಳನ್ನ ಕೇಳುತ್ತಲೇ ಅಭಿಮಾನಿಗಳಲ್ಲಿ ಈ ರೀತಿ ಅಭಿಮಾನ ಬೇಡ್ವೇ ಬೇಡ. ಜೀವ ಕಳೆದುಕೊಳ್ಳುವ ಅಭಿಮಾನ ಮೊದಲೇ ಬೇಡ ಅಂತ ಕೇಳಿಕೊಂಡಿರುವ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ನಟ ದರ್ಶನ್ ಬದುಕಿನ ಒಂದಷ್ಟು ಸತ್ಯಗಳನ್ನೂ ಹೇಳಿಕೊಳ್ಳುತ್ತಾ, ಅಭಿಮಾನ ಅನ್ನೋದು ಒಂದು ಹಂತಕ್ಕೆ ಇದ್ರೇನೆ ಚೆಂದ. ಅದು ಜಾಸ್ತಿ ಆದ್ರೇ ಏನೇನೋ ಆಗುತ್ತದೆ. ಅದರ ಪರಿಣಾಮವನ್ನ ಮನೆಯವರು ಅನುಭವಿಸಬೇಕಾಗುತ್ತದೆ. ಮಗನ ಸಾವಿನಿಂದ ಮನೆಯ ಮಂದಿ ಆಯಾ ಹೀರೋಗಳನ್ನ ಜೀವನ ಪೂರ್ತಿ ಶಪಿಸಬೇಕಾಗುತ್ತದೆ. ಅಷ್ಟೊಂದು ಅತಿರೇಕದ ಅಭಿಮಾನ ಯಾಕೆ? ಈ ಒಂದು ಪ್ರಶ್ನೆಯನ್ನ ಕೇಳಿಕೊಳ್ಳುತ್ತದೆ. ತುಂಬಾನೆ ಸ್ಪೀಡ್ ಆಗಿಯೇ ನಮ್ಮ ಕಾರ್ಗಳು ಹೋಗ್ತಾನೇ ಇರುತ್ತವೆ. ಅವುಗಳನ್ನ ಬೆನ್ನಟ್ಟಿ ಬರೋದೇಕೆ? ಬಂದು ಜೀವ ಕಳೆದುಕೊಳ್ಳೋದು ಯಾಕೆ? ಅಭಿಮಾನ ಮನದಲ್ಲಿಯೇ ಇದ್ರೆ ಒಳ್ಳೆಯದು. ಜೀವನ ಇದ್ರೆ ನನ್ನ ಮತ್ತೆ ನೋಡಬಹುದು. ಹಾಗೆ ನೀವು ಹಿಂದೆ ಬಂದು ಜೀವನ ಕಳೆದುಕೊಳ್ಳೋದು ಎಷ್ಟು ಸರಿ? ಎಂದು ಅಭಿಮಾನಿಗಳಿಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ಈ ಪೋಟೋದಲ್ಲಿರುವ ಬಾಲಕ ಯಾರೆಂದು ಗುರುತಿಸಬಲ್ಲಿರಾ? ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಈತ!
ದರ್ಶನ್ ಅಭಿಮಾನಿಗಳ ಇರಲಿ, ಆದರೆ ಜೀವ ಕಳೆದು ಕೊಳ್ಳುವ ಅಭಿಮಾನ ನಮಗೆ ಬೇಕೇ? ಹೀಗೆ ಪ್ರಶ್ನಿಸುತ್ತಾ, ಮನೆಯಲ್ಲಿ ಅಪ್ಪ ಇರ್ತಾರೆ, ಅಮ್ಮ ಇರ್ತಾರೆ. ನಿಮ್ಮ ಜೀವ ಹೋದ್ರೆ ಏನು ಪ್ರಯೋಜನ. ಜೀವನ ಪೂರ್ತಿ ಅವರೆಲ್ಲ ನಮಂತವನ್ನ ಶಪಿಸೋದೇ ಆಗುತ್ತದೆ. ದಯವಿಟ್ಟು ಕನ್ನಡದ ಎಲ್ಲ ನಾಯಕರ ಅಭಿಮಾನಿಗಳಲ್ಲಿ ಒಂದೇ ವಿನಂತಿ ಇದೆ. ಯಾರೂ ಜೀವ ಕಳೆದುಕೊಳ್ಳುವ ಅತಿರೇಕದ ಅಭಿಮಾನ ತೋರ ಬೇಡಿ, ಇದರಿಂದ ಎಲ್ಲರಿಗೂ ನೋವಾಗುತ್ತದೆ ಅಂತಲೇ ಹೇಳಿಕೊಂಡಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ದುರಂತ ಸಾವಿನಿಂದ ದರ್ಶನ್ ಈ ಒಂದು ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.
ಅಂದ್ಹಾಗೆ ಈ ಒಂದು ಮಾತುಗಳನ್ನ ನಟ ದರ್ಶನ್ ರೇಲ್ವೆ ಗ್ರೌಂಡ್ಸ್ನಲ್ಲಿ ನಡೆದಿದ್ದ ರಾಬರ್ಟ್ ಪ್ರೀ-ರಿಲೀಸ್ ಇವೆಂಟ್ನ ವೇದಿಕೆಯಲ್ಲಿಯೇ ತಮ್ಮ ಮನದ ನೋವು ಹೇಳಿಕೊಂಡಿದ್ದಾರೆ. ಒಂದು ರೀತಿ ಇದು ಫಿಲ್ಟರ್ಲೆಸ್ ಸ್ಪೀಚ್ ಆಗಿತ್ತು. ಇದನ್ನ ಕೇಳಿದ ಅದೆಷ್ಟೋ ಜನ ತುಂಬಾನೆ ಖುಷಿಪಟ್ಟಿದ್ದರು. ಆದರೆ ಇದು ವಿಶೇಷವಾಗಿ ದರ್ಶನ್ ತಮ್ಮ ಅಭಿಮಾನಿಗಳಿಗೆ ಹೇಳಿದ ಮಾತಷ್ಟೇ ಆಗಿರಲಿಲ್ಲ. ಕನ್ನಡದ ಎಲ್ಲ ಹೀರೋಗಳ ಅಭಿಮಾನಿಗಳಿಗೂ ಈ ಮೂಲಕ ಬುದ್ದಿ ಮಾತು ಹೇಳಿದ್ದರು ಅಂತಲೇ ಹೇಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.