Expensive Insect : ಆಭರಣ ವ್ಯಾಪಾರಿಯಿಂದ ಮಾತ್ರ ನಿಜವಾದ ವಜ್ರವನ್ನು ಗುರುತಿಸುವುದು ಸಾಧ್ಯವಾಗುತ್ತದೆಯಂತೆ. ಹೀಗೆ ನಮ್ಮ ಹಿರಿಯರು ಹೇಳುತ್ತಲೇ ಇರುತ್ತಾರೆ. ಈ ಮಾತನ್ನು ಇಲ್ಲಿ ಹೇಳಿರುವುದಕ್ಕೂ ಒಂದು ಕಾರಣವಿದೆ. ಈ ಭೂಮಿಯ ಮೇಲೆ ಕೋಟಿ ಬೆಲೆ ಬಾಳುವ ಕೀಟಗಳು ಇವೆಯಂತೆ. ಅತ್ಯಂತ ಅಚ್ಚರಿಯ ಸಂಗತಿ ಎಂದರೆ ಈ ಕೀಟ ಕಸದಲ್ಲಿ ಕಂಡು ಬರುತ್ತದೆ. ಈ ಕೀಟದ ಹೆಸರು ಸ್ಟಾಗ್ ಬೀಟಲ್. ಈ ಕೀಟ ಅತ್ಯಂತ ದುಬಾರಿ. ಈ ಕೀಟವನ್ನು ಮಾರಾಟ ಮಾಡುವ ಮೂಲಕ ರಾತ್ರೋರಾತ್ರಿ ಮಿಲಿಯನೇರ್ ಆಗಿ ಬಿಡಬಹುದು. ಆದರೆ, ಕೆಲವೇ ಜನರು ಮಾತ್ರ ಈ ಕೀಟವನ್ನು ಗುರುತಿಸಲು ಸಮರ್ಥರಾಗಿರುತ್ತಾರೆ.
ಲಕ್ಷಗಳಲ್ಲಿ ಮಾರಾಟವಾಗುತ್ತದೆ ಈ ಕೀಟ :
ಕೆಲವು ವರ್ಷಗಳ ಹಿಂದೆ ಸ್ಟಾಗ್ ಬೀಟಲ್ ಅನ್ನು 89,000 ಡಾಲರ್ ಅಂದರೆ ಅಂದರೆ 74.25 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಇದು ಭೂಮಿಯ ಮೇಲೆ ಇರುವ ಅಪರೂಪದ ಜೀವಿಗಳಲ್ಲಿ ಒಂದಾಗಿದೆ. ಲುಕಾನಿಡೇ ಜಾತಿಗೆ ಸೇರಿದ ಈ ಕೀಟ ಒಟ್ಟು 1200 ಪ್ರಜಾತಿಗಳಲ್ಲಿ ಕಂಡುಬರುತ್ತವೆ. ಸ್ಟ್ಯಾಗ್ ಬೀಟಲ್ ಅಥವಾ ಸ್ಟ್ಯಾಗ್ ಜೀರುಂಡೆ ಕಸದಲ್ಲಿ ವಾಸಿಸಲು ಇಷ್ಟಪಡುತ್ತದೆ. ಈ ಕೀಟವು ಲಾರ್ವಾ ಹಂತದಲ್ಲಿದ್ದಾಗ, ಕೊಳೆಯುತ್ತಿರುವ ಮರವು ಅದರ ನೆಚ್ಚಿನ ಆಹಾರವಾಗಿದೆ. ಈ ಜೀವಿಗಳು ಕೇವಲ 7 ವರ್ಷಗಳವರೆಗೆ ಬದುಕುತ್ತವೆ.
ಇದನ್ನೂ ಓದಿ : ಮೂರು ಸಾವಿರ ವರ್ಷಗಳ ಹಿಂದೆಯೂ QR Code ಬಳಕೆಯಲ್ಲಿತ್ತು ಎಂದರೆ ನಂಬ್ತೀರಾ? ವೈರಲ್ ಆಗುತ್ತಿರುವ ಈ ವಿಗ್ರಹ ಹೌದು ಎನ್ನುತ್ತೆ!
ಈ ಕೀಟಕ್ಕೆ ಇರುತ್ತವೆ ಕೊಂಬು :
ಸ್ಟಾಗ್ ಬೀಟಲ್ ಸಾಮಾನ್ಯವಾಗಿ ಬೆಚ್ಚಗಿನ ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತದೆ. ಇದರ ಗುರುತೆಂದರೆ ಅದರ ತಲೆಯ ಮೇಲ್ಭಾಗದಲ್ಲಿ ಕೊಂಬುಗಳು ಬೆಳೆಯುತ್ತವೆ. ಅದು ಕೆಲವೊಮ್ಮೆ ಐದು ಇಂಚು ಉದ್ದವಿರುತ್ತದೆ. ಈ ಕೀಟಗಳು ವಿಪರೀತ ಚಳಿಯಲ್ಲಿ ಬದುಕುವುದಿಲ್ಲ. ಸ್ಟಾಗ್ ಬೀಟಲ್ ಜಗಳಕ್ಕೆ ಇಳಿದರೆ ಇದು ಸುಮೊ ಕುಸ್ತಿಪಟುಗಳನ್ನು ನೆನಪಿಸುತ್ತವೆ. ಏಕೆಂದರೆ ಎರಡು ಸ್ಟಾಗ್ ಬೀಟಲ್ ಜಗಳವಾಡಲು ಆರಂಭಿಸಿದರೆ ಒಂದನ್ನೊಂದು ಹಿಂದಕ್ಕೆ ತಳ್ಳುತ್ತದೆ.
ಈ ಜೀರುಂಡೆ ಇಷ್ಟು ದುಬಾರಿಯಾಗಲು ಕಾರಣ ? :
ಅಪಾಯಕಾರಿ ಕಾಯಿಲೆಗಳ ಚಿಕಿತ್ಸೆಯಲ್ಲಿ ಇದು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹಲವರು ಹೇಳುತ್ತಾರೆ. ಈ ಕಾರಣದಿಂದಲೇ ಈ ಜೀವಿಯನ್ನು ಬಹಳ ದೊಡ್ಡ ಸಂಖ್ಯೆಯಲ್ಲಿ ಹಿಡಿಯಲಾಗುತ್ತದೆ. ಹಾಗಾಗಿ ಈಗ ಇದು ಅಳಿವಿನ ಅಪಾಯದಲ್ಲಿದೆ. ಜಾಗತಿಕ ಮಟ್ಟದಲ್ಲಿ ಈ ಕೀಟಕ್ಕೆ ಬೇಡಿಕೆ ತುಂಬಾ ಹೆಚ್ಚಿದೆ.ಈ ಕೀಟ ಎಲ್ಲಿಯಾದರೂ ಕಂಡು ಬಂದರೆ ನೀವು ರಾತ್ರೋರಾತ್ರಿ ಶ್ರೀಮಂತರಾಗುವುದಂತೂ ಖಂಡಿತಾ.
ಇದನ್ನೂ ಓದಿ : 'ಈಗ್ ಗೊತ್ತಾಯ್ತು ಅಪ್ಪ ಸರ್ಕಾರಿ ಸ್ಕೂಲಲ್ಲಿ ಯಾಕೆ ಓದಿಸಿದ್ರು ಅಂತಾ...', ವೈರಲ್ ಆಗುತ್ತಿರುವ' ನರ್ಸರಿ-ಕೆಜಿ ಶುಲ್ಕ ವಿವರ ನೀವೂ ನೋಡಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ