ಹೊಸ ರೂಪದಲ್ಲಿ ಚೀನಾಗೆ ಪುನಃ ಲಗ್ಗೆ ಇಟ್ಟ Coronavirus 2.0, ಇಡೀ ವಿಶ್ವಕ್ಕೆ ಎಚ್ಚರಿಕೆಯ ಕರಗಂಟೆ

ಚೀನಾ ದೇಶ ಕರೋನಾ ವೈರಸ್ ಅನ್ನು ಜಗತ್ತಿಗೆ ಪಸರಿಸಿದೆ ಅಥವಾ ಇಲ್ಲವೋ ಎಂಬುದು ಸದ್ಯದ ದೊಡ್ಡ ಪ್ರಶ್ನೆಯಾಗಿದೆ. ಆದರೆ ಕರೋನಾ ವೈರಸ್ ಮಾತ್ರ ಚೀನಾ ದೇಶದ ಬೆನ್ನು ಬಿಡುತ್ತಿಲ್ಲ ಎಂಬುದು ಮಾತ್ರ ನಿಜ.

Last Updated : Apr 12, 2020, 10:19 PM IST
ಹೊಸ ರೂಪದಲ್ಲಿ ಚೀನಾಗೆ ಪುನಃ ಲಗ್ಗೆ ಇಟ್ಟ Coronavirus 2.0, ಇಡೀ ವಿಶ್ವಕ್ಕೆ ಎಚ್ಚರಿಕೆಯ ಕರಗಂಟೆ title=

ನವದೆಹಲಿ: ಕರೋನಾ ವೈರಸ್ ಕುರಿತ ವಿಶ್ವಾದ್ಯಂತ ಪ್ರಕಟಗೊಳ್ಳುತ್ತಿರುವ ವರದಿಗಳು ಚೀನಾ, ವಿಶ್ವದ ಇತರೆ ದೇಶಗಳ ಜೊತೆಗೆ ದೊಡ್ಡ ಆಟವನ್ನು ಆಡಿದೆ ಎಂಬುದನ್ನು ಸಾರುತ್ತಿವೆ. ಕರೋನಾ ವೈರಸ್ ಬಗ್ಗೆ ಚೀನಾ ನಿಖರವಾದ ಮಾಹಿತಿಯನ್ನು ನೀಡುತ್ತಿಲ್ಲ. ಆದರೆ, ಇದರ ಅರ್ಥ ಚೀನಾಗೆ ಶಿಕ್ಷೆಯಾಗುತ್ತಿಲ್ಲ ಎಂದು ಅಲ್ಲ. ಏಕೆಂದರೆ ಚೀನಾದಿಂದ ಬಂದ ಹೊಸ ವರದಿಯೊಂದರ ಪ್ರಕಾರ. ಚೀನಾದಲ್ಲಿ ಕರೋನಾ ಭಾಗ ಎರಡು ಆರಂಭಗೊಂಡಿದ್ದು, ಇದು ಅಲ್ಲಿನ ಜನರಲ್ಲಿ ಭಾರಿ ಭೀತಿ ಹುಟ್ಟಿಸಿದೆ. ಒಂದೆಡೆ ಚೀನಾದಲ್ಲಿ ಲಾಕ್‌ಡೌನ್ ಅಂತ್ಯದ ಸಂಭ್ರಮ ಮನೆಮಾಡಿದ್ದರೆ, ಇನ್ನೊಂದೆಡೆ ಅಲ್ಲಿನ ಹುಬೈ ಪ್ರಾಂತ್ಯದಲ್ಲಿ ಕರೋನಾ ಅಬ್ಬರ ಮತ್ತೊಮ್ಮೆ ಮರುಕಳಿಸಿದೆ.

ಚೀನಾ, ಜಗತ್ತಿನಲ್ಲಿ ಕರೋನಾ ವೈರಸ್ ಅನ್ನು ಪಸರಿಸಿದೆಯೋ ಅಥವಾ ಇಲ್ಲವೋ ಎಂಬುದು ಸದ್ಯದ ಒಂದು ಪ್ರಶ್ನೆಯಾಗಿದೆ, ಆದರೆ ಕರೋನಾ ವೈರಸ್ ಮಾತ್ರ ಚೀನಾ ದೇಶದ ಬೆನ್ನು ಬಿಡುತ್ತಿಲ್ಲ ಎಂಬುದೂ ನಿಜ. ಏಕೆಂದರೆ ಕರೋನಾ ವೈರಸ್ ಭೀತಿ ಇದೀಗ ಚೀನಾದಲ್ಲಿ ಮರುಕಳಿಸಿದೆ. ಚೀನಾದಿಂದ ಬಂದ ಒಂದು ವರದಿಯ ಪ್ರಕಾರ, ಒಂದೇ ದಿನದಲ್ಲಿ 100 ಹೊಸ ಕರೋನಾ ವೈರಸ್ ಪ್ರಕರಣಗಳು ಚೀನಾದಲ್ಲಿ ಪತ್ತೆಯಾಗಿವೆ. ಈ 100 ಪ್ರಕರಣಗಳಲ್ಲಿ 63 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ ಆದರೆ, ಕೊರೊನಾದ ಲಕ್ಷಣಗಳು ಮಾತ್ರ ಅವರಲ್ಲಿ ಕಂಡುಬಂದಿಲ್ಲ ಮತ್ತು ಇದು ಇದೀಗ ಇಡೀ ಜಗತ್ತಿಗೆ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಇದರರ್ಥ ಚೀನಾದಲ್ಲಿ ಕರೋನಾ ವೈರಸ್‌ ಸಂಪೂರ್ಣ ಹೊಸ ರೂಪ ಹೊರಹೊಮ್ಮಿದೆ

ಈ ಬಾರಿ ಕರೋನಾ ವೈರಸ್ ತನ್ನ ರೋಗಲಕ್ಷಣಗಳನ್ನು ಮರೆಮಾಡುತ್ತಿದೆ. ಇದೀಗ ಈ ಸೋಂಕಿಗೆ ಗುರಿಯಾದ ವ್ಯಕ್ತಿ  ಶೀತವಾಗಲಿ, ಕೆಮ್ಮಿನಿಂದಾಗಲಿ ಅಥವಾ ಜ್ವರದಿಂಗಾಗಲಿ ಬಳಲುತ್ತಿಲ್ಲ. ಆದರೂ ಕೂಡ ಆತನ ಕೊರೊನಾ ವೈರಸ್ ಟೆಸ್ಟ್ ಪಾಸಿಟಿವ್ ಆಗಿದೆ. ಚೀನಾ ಮಾತ್ರವಲ್ಲ, ದಕ್ಷಿಣ ಕೊರಿಯಾ ಕೂಡ ಕೊರೊನಾ ವೈರಸ್ ಅನ್ನು  ಸಂಪೂರ್ಣವಾಗಿ ನಿವಾರಿಸಿದೆ ಎಂದು ಹೇಳಲಾಗುತ್ತದೆ, ಆದರೆ ಅಲ್ಲಿಯೂ ಕೂಡ ಟೆಸ್ಟ್ ಗೆ ಮೊದಲು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದ ರೋಗಿಗಳು ಇದೀಗ ಮತ್ತೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದೇ ರೀತಿ ಜಪಾನ್ ನಲ್ಲಿಯೂ ಕೂಡ ಹೊಸ ಪರಕರಣಗಳು ಕಂಡುಬರುತ್ತಿವೆ ಹಾಗೂ ಕರೋನಾ ವೈರಸ್ ಕುರಿತ ಈ ವರದಿಗಳು ನಿಜವಾಗಿಯೂ ಕೂಡ ಭಯ ಹುಟ್ಟಿಸುತ್ತಿವೆ.

ಇದೇ ಕಾರಣದಿಂದ ಕೊರೊನಾ ವೈರಸ್ ನ ಗಂಭೀರತೆಯನ್ನು ಅರ್ಥಮಾಡಿಕೊಳ್ಳಲು ನಾವು ಪದೇ ಪದೇ ನಿಮಗೆ ಮನವಿ ಮಾಡುತ್ತಿದ್ದೇವೆ. ಈ ವೈರಸ್ ಸೋಂಕನ್ನು ಲಘುವಾಗಿ ಪರಿಗಣಿಸಬೇಡಿ. ಲಾಕ್ ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಈ ವೈರಸ್ ನ ಸರಪಳಿಯನ್ನು ನಾವು ಮುರಿಯಲು ಸಾಧ್ಯ. ಇದಕ್ಕಾಗಿ ಸರ್ಕಾರ ಹಾಕಿರುವ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಬೇಡಿ. ಆಗ ಮಾತ್ರ ನಾವು ಒಗ್ಗಟ್ಟಿನಿಂದ ಕೊರೊನಾ ವೈರಸ್ ಅನ್ನು ಸೋಲಿಸಲು ಸಾಧ್ಯ.

Trending News