ವಾಷಿಂಗ್ಟನ್: ಜಗತ್ತಿಗೇ ಕಂಟಕವಾಗಿ ಕಾಡುತ್ತಿರುವ ಚೀನಾದ ವುಹಾನ್‌ನಲ್ಲಿ ಹೊರಹೊಮ್ಮಿದ ಕರೋನವೈರಸ್ ಕೋವಿಡ್ 19 (Covid-19) ಸಾಂಕ್ರಾಮಿಕ ರೋಗದಿಂದಾಗಿ ಅಮೆರಿಕದಲ್ಲಿ 590,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು 25,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿದೆ. ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಲಕ್ಷಕ್ಕೂ ಹೆಚ್ಚು ಜನರನ್ನು ಈ ವೈರಸ್ ಬಲಿತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೊರೋನಾವೈರಸ್ ಕೋವಿಡ್-19 ಹರಡುವಿಕೆಯನ್ನು ನಿಗ್ರಹಿಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಪಾತ್ರದ ಬಗ್ಗೆ ಪರಿಶೀಲನೆ ನಡೆಸುವವರೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಗಾಗಿ ತಮ್ಮ ದೇಶದಿಂದ ನೀಡಲಾಗುತ್ತಿದ್ದ ದೇಣಿಗೆಯನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಡಬ್ಲ್ಯುಎಚ್‌ಒ ಬಗ್ಗೆ ಬಹಿರಂಗವಾಗಿ ಟೀಕಿಸುತ್ತಿರುವ ಡೊನಾಲ್ಡ್ ಟ್ರಂಪ್ ಕೊರೊನಾವೈರಸ್ (Coronavirus)ನ ಅಪಾಯಗಳ ಬಗ್ಗೆ ಅರಿವಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎಂದು ಮಂಗಳವಾರ (ಎಪ್ರಿಲ್ 14) ರಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಜೊತೆಗೆ ನಾನು ವಿಶ್ವ ಆರೋಗ್ಯ ಸಂಸ್ಥೆಯ ಹಣವನ್ನು ನಿಲ್ಲಿಸುವಂತೆ ನನ್ನ ಆಡಳಿತಕ್ಕೆ ಸೂಚಿಸುತ್ತಿದ್ದೇನೆ ಎಂದು ತಿಳಿಸಿರುವ ಟ್ರಂಪ್ ನಾವು ಜಾಗತಿಕ ಆರೋಗ್ಯವನ್ನು ಮರುನಿರ್ದೇಶಿಸುತ್ತೇವೆ ಮತ್ತು ಇತರರೊಂದಿಗೆ ನೇರವಾಗಿ ಕೆಲಸ ಮಾಡುತ್ತೇವೆ. ನಾವು ಕಳುಹಿಸುವ ಎಲ್ಲಾ ಸಹಾಯವನ್ನು ಅತ್ಯಂತ ಶಕ್ತಿಶಾಲಿ ಪತ್ರಗಳಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.
COVID-19 ಚಿಕಿತ್ಸೆಗಾಗಿ ಭಾರತದ ಸಹಾಯವನ್ನು ಮರೆಯಲಾಗುವುದಿಲ್ಲ: ಡೊನಾಲ್ಡ್ ಟ್ರಂಪ್
ವಿಶ್ವ ಆರೋಗ್ಯ ಸಂಸ್ಥೆ ತನ್ನ ಮೂಲ ಕರ್ತವ್ಯದಲ್ಲಿ ವಿಫಲವಾಗಿದೆ ಮತ್ತು ಅದರ ಹೊಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಡೊನಾಲ್ಡ್ ಟ್ರಂಪ್ (Donald Trump), ನೆಲದ ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ನಿರ್ಣಯಿಸಲು ಮತ್ತು ಚೀನಾದ ಪಾರದರ್ಶಕತೆಯ ಕೊರತೆಯನ್ನು ತಿಳಿಸಲು ವೈದ್ಯಕೀಯ ತಜ್ಞರನ್ನು ಚೀನಾಕ್ಕೆ ಕಳುಹಿಸುವ ತನ್ನ ಕೆಲಸವನ್ನು WHO ಮಾಡಿದ್ದರೆ ವಿಶ್ವದಾದ್ಯಂತ ಇಂದು ಕಡಿಮೆ ಸಾವು ಸಂಭವಿಸುತ್ತಿತ್ತು. ಇದರೊಂದಿಗೆ ಸಾವಿರಾರು ಜನರ ಪ್ರಾಣ ಉಳಿಸಬಹುದಿತ್ತು. ಜೊತೆಗೆ ಜಾಗತಿಕ ಆರ್ಥಿಕ ಸ್ಥಿತಿಯೂ ಹದಗೆಡುತ್ತಿರಲಿಲ್ಲ ಎಂದರು.
COVID-19 ಉಲ್ಬಣ: ಅಮೆರಿಕನ್ನರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಿಶ್ವ ಆರೋಗ್ಯ ಸಂಸ್ಥೆ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಬದಲಿಗೆ ಸ್ವಇಚ್ಛೆಯಿಂದ ಮೌಲ್ಯವನ್ನು ಎದುರಿಸಲು ಚೀನಾದ ಆಶ್ವಾಸನೆಗಳನ್ನು ತೆಗೆದುಕೊಂಡಿದ್ದು ಮಾತ್ರವಲ್ಲದೆ ಚೀನಾ (China) ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿತು. ಚೀನಾದ ಜೊತೆ ಸೇರಿ WHO ತೋರಿದ ಉದಾಸೀನತೆ ಇಂದು ಇಡೀ ವಿಶ್ವಕ್ಕೆ ಕಂಟಕ ಪ್ರಾಯವಾಗಿದೆ ಎಂದು ಟ್ರಂಪ್ ಟೀಕಾ ಪ್ರಹಾರ ನಡೆಸಿದ್ದಾರೆ.
ಗಮನಾರ್ಹವಾಗಿ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆ (WHO) ಯ ಅತಿದೊಡ್ಡ ಮತ್ತು ಏಕೈಕ ಫಂಡರ್ ಆಗಿದೆ, ಇದು 2019ರಲ್ಲಿ $400 ಮಿಲಿಯನ್ ಒದಗಿಸುಸಿದ್ದು ಜಾಗತಿಕ ಆರೋಗ್ಯ ಸಂಸ್ಥೆಯ ಒಟ್ಟು ಬಜೆಟ್ನ ಸುಮಾರು 15% ಆಗಿದೆ.