ನವದೆಹಲಿ : ಟೆಲಿಕಾಮ್ ಕ್ಷೇತ್ರದಲ್ಲಿ ಸಹಜವಾಗಿ ರಿಚಾರ್ಚ್ ಆಫರ್ ಗಳಲ್ಲಿ ಪೈಪೋಟಿ ಇರುವುದು ಸಹಜ. ಏರ್ ಟೆಲ್, ರಿಲಯನ್ಸ್, ಜಿಯೋ, ಮತ್ತು ವೊಡಾಫೋನ್-ಐಡಿಯಾ ನಂತಹ ಕಂಪನಿಗಳು ತಮ್ಮ ಗ್ರಾಹಕ ಸ್ನೇಹಿ ರಿಚಾರ್ಚ್ ಆಫರ್ ಗಳನ್ನು ನೀಡುತ್ತಿದ್ದು, ಆ ಕುರಿತಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ.
ಗ್ರಾಹಕರಿಗೆ ಕೈಗೆಟುಕುವ ರೀಚಾರ್ಜ್ ಪ್ಲಾನ್(Recharge Plans) ಗಳನ್ನು ನೀಡುತ್ತಿದ್ದು, ಅವುಗಳ ಅವಧಿ 1 ವರ್ಷದವರೆಗೆ ಇರಲಿದೆ. ತಿಂಗಳಿಗೆ 125 ರೂ. ಗಳಿಗಿಂತ ಕಡಿಮೆ ಹೊಂದಿರುವ ರೀಚಾರ್ಚ್ ಇದಾಗಿದ್ದು. ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಇದನ್ನೂ ಓದಿ : Bank Holidays : ಬ್ಯಾಂಕ್ ಗ್ರಾಹಕರೇ ಗಮನಿಸಿ : 7 ದಿನ ಬ್ಯಾಂಕ್ ರಜೆ! ಇಲ್ಲಿದೆ ಫುಲ್ ಲಿಸ್ಟ್
Jio ಆಫರ್ :
ಜಿಯೋ(Jio) ತನ್ನ ಗ್ರಾಹಕರಿಗೆ 1,299 ರೂ.ಗಳ ರೀಚಾರ್ಜ್ ಯೋಜನೆಯನ್ನು ಒದಗಿಸುತ್ತಿದ್ದು, ಈ ರೀಚಾರ್ಜ್ ಯೋಜನೆ 336 ದಿನಗಳ ಅಂದರೇ ಒಂದು ವರ್ಷದ ಮಾನ್ಯತೆಯನ್ನು ಹೊಂದಿದೆ. ತಿಂಗಳ ಲೆಕ್ಕಾಚಾರದಲ್ಲಿ ಈ ರೀಚಾರ್ಜ್ ಯೋಜನೆಯ ವೆಚ್ಚ ಕೇವಲ 118 ರೂಪಾಯಿಗಳಾಗಿರಲಿದೆ. ಇಡೀ ವರ್ಷಕ್ಕೆ 24 ಜಿಬಿ ಡಾಟಾವನ್ನು ಇ ರೀಚಾರ್ಚ್ ನಿಂದ ಗ್ರಾಹಕರು ಪಡೆಯುತ್ತಾರೆ. ಡಾಟಾ ಮಿತಿಯ ಅವಧಿ ಮುಗಿದ ನಂತರ ಇಂಟರ್ ನೆಟ್ ಸ್ಪೀಡ್ 64 ಕೆಬಿಪಿಎಸ್ ಗೆ ಇಳಿಯಲಿದೆ.
ಇದನ್ನೂ ಓದಿ : Gold-Siliver Rate : ಇಲ್ಲಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ : ಪ್ರತಿ 10 ಗ್ರಾಂ ಬಂಗಾರಗೆ 48,100 ರೂ..!
ಇನ್ನು, ಜೀಯೋ ನೀಡುತ್ತಿರುವ ಈ ಭರ್ಜರಿ ಆಫರ್(Offer) ನಲ್ಲಿ 3,600 ಮೆಸೇಜ್, 336 ದಿನಗಳವರೆಗೆ ಬಳಸಬಹುದಾಗಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಜಿಯೋ ಸಾವನ್, ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋ ಆಪ್ ಚಂದಾದಾರಿಕೆ ಸಹ ಲಭ್ಯವಿದೆ.
ಇದನ್ನೂ ಓದಿ : SBI ಗ್ರಾಹಕರಿಗೊಂದು ಪ್ರಮುಖ ಸುದ್ದಿ; ಆನ್ ಲೈನ್ ನಲ್ಲಿಯೇ ಬದಲಾಯಿಸಿಕೊಳ್ಳಬಹುದು branch
Airtel ಆಫರ್ :
ಏರ್ ಟೆಲ್(Airtel) ಕೇವಲ 1,498 ರೂಗಳಿಗೆ ಪೂರ್ಣ ವರ್ಷದ ಮಾನ್ಯತೆ ಹೊಂದಿರುವ ರೀಚಾರ್ಚಜ್ ಆಫರ್ ನನ್ನು ನೀಡುತ್ತಿದೆ. ಅಂದರೆ, ಗ್ರಾಹಕರು ತಿಂಗಳಿಗೆ ಕೇವಲ 124.8 ರೂ. ಪಾವತಿಸಿದಂತಾಗುತ್ತದೆ. ಏರ್ ಟೆಲ್ ನ ಈ ಯೋಜನೆಯಲ್ಲಿ ಗ್ರಾಹಕರಿಗೆ 3,600 ಮೆಸೇಜ್ ಗಳನ್ನು ನೀಡಲಾಗಿದ್ದು, ಇದು ಒಂದು ವರ್ಷದ ಸಂಪೂರ್ಣ ಮಾನ್ಯತೆಯನ್ನು ಹೊಂದಿದೆ.
ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರೆ ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ..!
ಪೂರ್ಣ ವರ್ಷಕ್ಕೆ 24 ಜಿಬಿ ಡಾಟಾ(Data)ವನ್ನು ಈ ರೀಚಾರ್ಜ್ ಆಫರ್ ನೀಡುತ್ತಿದ್ದು, ಈ ರೀಚಾರ್ಜ್ ಯೋಜನೆಯಡಿಯಲ್ಲಿ, ಬಳಕೆದಾರರು ವರ್ಷವಿಡೀ ಯಾವುದೇ ನೆಟ್ ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಬಹುದು. ಉಚಿತ ಹೆಲೋಟೂನ್ಸ್, ಏರ್ಟೆಲ್ ಎಕ್ಸ್ ಸ್ಟ್ರೀಮ್ ಆಯಪ್ ಪ್ರೀಮಿಯಂ ಮತ್ತು ಅನಿಯಮಿತ ಡೌನ್ ಲೋಡ್ ಜೊತೆಗೆ ವಿಂಕ್ ಮ್ಯೂಸಿಕ್ ನ ಚಂದಾದಾರಿಕೆಯೂ ಕೂಡ ಲಭ್ಯವಿದೆ.
ಇದನ್ನೂ ಓದಿ : Aadhaar Card : 'ಆಧಾರ್ ಕಾರ್ಡ್'ನಲ್ಲಿ ವಿಳಾಸವನ್ನು ಸುಲಭವಾಗಿ ನವೀಕರಿಸಬಹುದು; ಹೇಗೆ ಇಲ್ಲಿದೆ
Vi ಆಫರ್ :
ವೊಡಾಫೋನ್ ಐಡಿಯಾ(Vodafone Idea)ದಲ್ಲಿ ವರ್ಷಪೂರ್ತಿ ರೀಚಾರ್ಜ್ ಯೋಜನೆ ಬೆಲೆ ಕೇವಲ 1,499 ರೂ. ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ, ಅಂದರೆ ಇದರ ಬೆಲೆ ತಿಂಗಳಿಗೆ ಕೇವಲ 124.91 ರೂ. ವೊಡಾಫೋನ್ ಐಡಿಯಾದಈ ಯೋಜನೆಯು ವರ್ಷಕ್ಕೆ 3,600 ಸಂದೇಶಗಳನ್ನು ಮತ್ತು 24 ಜಿಬಿ ಡೇಟಾವನ್ನು ಒದಗಿಸುತ್ತದೆ. ಇದರ ಅಡಿಯಲ್ಲಿ, ಬಳಕೆದಾರರು ಯಾವುದೇ ನೆಟ್ ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.