ಫೆಬ್ರವರಿ ಅಂತ್ಯದೊಳಗೆ ಈ ಕೆಲಸ ಮಾಡಿ ಮುಗಿಸದಿದ್ದರೆ ನಿಂತೇ ಹೋಗುತ್ತದೆ ಪಿಂಚಣಿ

ನಿಗದಿತ ಗಡುವಿನ ಪ್ರಕಾರ, ಈ ತಿಂಗಳು ಅಂದರೆ ಫೆಬ್ರವರಿ 28 ರೊಳಗೆ,  ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯ.

Written by - Ranjitha R K | Last Updated : Feb 7, 2022, 12:41 PM IST
  • ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕ
  • ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿಯೂ ಸಲ್ಲಿಸಬಹುದು
  • ಪಿಂಚಣಿದಾರರು ಪ್ರತಿ ವರ್ಷ ಪ್ರಮಾಣ ಪತ್ರ ಸಲ್ಲಿಸಬೇಕು
ಫೆಬ್ರವರಿ ಅಂತ್ಯದೊಳಗೆ  ಈ ಕೆಲಸ ಮಾಡಿ ಮುಗಿಸದಿದ್ದರೆ ನಿಂತೇ ಹೋಗುತ್ತದೆ ಪಿಂಚಣಿ  title=
ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕ (file photo)

ನವದೆಹಲಿ : ನಿಗದಿತ ಗಡುವಿನ ಪ್ರಕಾರ, ಈ ತಿಂಗಳು ಅಂದರೆ ಫೆಬ್ರವರಿ 28 ರೊಳಗೆ,  ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು (Jeevan Pramaan Patra) ಸಲ್ಲಿಸುವುದು ಕಡ್ಡಾಯವಾಗಿದೆ. ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸದೇ ಹೋದರೆ, ಪಿಂಚಣಿ ನಿಂತು ಹೋಗುತ್ತದೆ. ಜೀವಿತ ಪ್ರಮಾಣಪತ್ರವನ್ನು (Life Certificate) ಸಲ್ಲಿಸಿದ ನಂತರವೇ , ಪಿಂಚಣಿಯನ್ನು ಮುಂದುವರಿಸಲಾಗುತ್ತದೆ. 

ಕೇಂದ್ರ ಸರ್ಕಾರವು ಜೀವಿತ ಪ್ರಮಾಣಪತ್ರವನ್ನು (Pensioners Life Certificate) ಸಲ್ಲಿಸಲು ಕೊನೆಯ ದಿನಾಂಕವನ್ನು  ಫೆಬ್ರವರಿ 28, ರವರೆಗೆ ವಿಸ್ತರಿಸಿದೆ. ಈ ಹಿಂದೆ ಪ್ರತಿ ವರ್ಷ ನವೆಂಬರ್ 30ರೊಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿತ್ತು.  ಆದರೆ ಕರೋನಾ ಹಿನ್ನೆಲೆಯಲ್ಲಿ ಈ ಗಡುವನ್ನು  ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿದೆ.  

ಇದನ್ನೂ ಓದಿ : PAN Card: 18 ವರ್ಷದೊಳಗಿನವರೂ ಪ್ಯಾನ್ ಕಾರ್ಡ್ ಪಡೆಯಬಹುದು! ಇಲ್ಲಿದೆ ಸುಲಭವಾದ ಪ್ರಕ್ರಿಯೆ

 ಜೀವನ ಪ್ರಮಾಣಪತ್ರವನ್ನು  ಪೋರ್ಟಲ್‌ನಲ್ಲಿಯೂ ಸಲ್ಲಿಸಬಹುದು :
 ಜೀವನ ಪ್ರಮಾಣಪತ್ರವನ್ನು  https://jeevanpramaan.gov.in/ ಪೋರ್ಟಲ್ ನಲ್ಲಿ  ಸಲ್ಲಿಸಬಹುದು. ಇದಕ್ಕಾಗಿ, ನೀವು ಮೊದಲು ಪೋರ್ಟಲ್‌ನಿಂದ ಜೀವನ್ ಪ್ರಮಾಣ್ ಅಪ್ಲಿಕೇಶನ್ (Jeevan Praman App) ಫಿಂಗರ್‌ಪ್ರಿಂಟ್ ಡಿವೈಸ್ ಇರಬೇಕು.  ಇದಾದ ನಂತರ, ಸ್ಮಾರ್ಟ್‌ಫೋನ್ ಮೂಲಕ ಇಮೇಲ್ ಐಡಿ ಮತ್ತು ಅಪ್ಲಿಕೇಶನ್‌ನಲ್ಲಿ ತಿಳಿಸಲಾದ ವಿಧಾನಗಳ ಮೂಲಕ ಮನೆಯಲ್ಲಿ ಕುಳಿತು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು.

ಜೀವಿತ ಪ್ರಮಾಣ ಪತ್ರವನ್ನು ಹೀಗೆ ಸಲ್ಲಿಸಬಹುದು :
ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(IBA) ಅಡಿಯಲ್ಲಿ ಬರುವ  12 ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆಯನ್ನು ಬಳಸಿಕೊಂಡು, ಪಿಂಚಣಿದಾರರು  ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಈ ಬ್ಯಾಂಕುಗಳಲ್ಲಿ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (BoB), ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, UCO ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸೇರಿವೆ.

ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಪ್ರಮಾಣಪತ್ರ ಜನರೇಟ್ ಮಾಡಬಹುದು : 
ಕೇಂದ್ರ ಸರ್ಕಾರದ ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ  ಜೀವನ ಪ್ರಮಾಣಪತ್ರವನ್ನು ಡಿಜಿಟಲ್ ರೂಪದಲ್ಲಿ ಜನರೇಟ್ ಮಾಡಬಹುದು. ಇದಕ್ಕಾಗಿ, ಜೀವನ ಪ್ರಮಾಣ್  ವೆಬ್‌ಸೈಟ್ https://jeevanpramaan.gov.in/ ಗೆ ಹೋಗಿ, ಆಧಾರ್ ಆಧಾರಿತ ದೃಢೀಕರಣದ ಮೂಲಕ ಡಿಜಿಟಲ್ ಪ್ರಮಾಣಪತ್ರವನ್ನು ಜನರೇಟ್ ಮಾಡಬಹುದು. ಸರ್ಕಾರಿ ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿಗಳ ಡೋರ್ ಸ್ಟೆಪ್ ಬ್ಯಾಂಕಿಂಗ್ (Door Step Banking) ಸೇವೆಯ ಮೂಲಕ, ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಬುಕ್ ಮಾಡಬಹುದು. ಇಲ್ಲಿ ಪೋಸ್ಟ್‌ಮ್ಯಾನ್ ಅಥವಾ ಏಜೆಂಟ್ ಮನೆಗೆ ಬರುವ ಮೊದಲು ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಂಚಣಿ ಸಂಖ್ಯೆ, ಪಿಂಚಣಿ ಖಾತೆಯಂತಹ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

ಇದನ್ನೂ ಓದಿ : 7th Pay Commission:ಸರ್ಕಾರಿ ನೌಕರರಿಗೆ ಡಬಲ್ ಬೋನಸ್, ವೇತನ ಹೆಚ್ಚಳದ ಜೊತೆ ಸಿಗಲಿದೆ ಈ ಪ್ರಯೋಜನ

ಪಿಂಚಣಿದಾರರು ಪ್ರತಿ ವರ್ಷ ಪ್ರಮಾಣ ಪತ್ರ ನೀಡಬೇಕು :
ಪಿಂಚಣಿದಾರರು ತಮ್ಮ ಬ್ಯಾಂಕ್ ಶಾಖೆಗೆ ಹೋಗಿ ಪ್ರತಿ ವರ್ಷ ನವೆಂಬರ್ 30 ರೊಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಅವರ ಮರಣದ ನಂತರ, ಕುಟುಂಬದ ಸದಸ್ಯರು, ಅನುಚಿತ ವಿಧಾನಗಳ ಮೂಲಕ  ಪಿಂಚಣಿ ಪಡೆಯುವುದನ್ನು ತಡೆಯಲು ಈ ಪ್ರಮಾಣಪತ್ರವನ್ನು ಸಲ್ಲಿಸುವುದು ಅನಿವಾರ್ಯವಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News