ಬೆಂಗಳೂರು: ಕನ್ನಡಿಗರ ಚಿತ್ರ ‘777 ಚಾರ್ಲಿ’ 100 ಡೇಸ್ ಕಂಪ್ಲೀಟ್ ಮಾಡುವತ್ತ ಮುನ್ನುಗ್ಗುತ್ತಿದೆ. ಬೆಟ್ಟದಷ್ಟು ನಿರೀಕ್ಷೆಗಳ ಜೊತೆ ಭರ್ಜರಿ ಎಂಟ್ರಿ ಕೊಟ್ಟಿದ್ದ ‘777 ಚಾರ್ಲಿ’ ಓಟಿಟಿಯಲ್ಲಿ ರಿಲೀಸ್ ಆದರೂ ಥಿಯೇಟರ್ನಲ್ಲಿ ಯಶಸ್ವಿ ಓಟ ಮುಂದುವರಿಸಿದೆ. ಈ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ಕನ್ನಡಿಗರ ಸಿನಿಮಾಗಳ ತಾಕತ್ತು ಈಗ ಜಗತ್ತಿಗೇ ಗೊತ್ತಾಗಿದೆ. ಅದರಲ್ಲೂ ‘777 ಚಾರ್ಲಿ’ ಸಾಧನೆ ಎಲ್ಲರ ಗಮನ ಸೆಳೆಯುವಂತೆ ಮಾಡಿತ್ತು. ಹೀಗೆ ಥಿಯೇಟರ್ನಲ್ಲಿ ಸದ್ದು ಮಾಡಿದ್ದ ‘777 ಚಾರ್ಲಿ’ ಯಶಸ್ವಿಯಾಗಿ 75 ದಿನ ಪೂರೈಸಿದ್ದು, ಇದೀಗ 100 ಡೇಸ್ ಕಡೆಗೆ ಮುನ್ನುಗ್ಗುತ್ತಿದೆ. ಈ ಮೂಲಕ ಸ್ಯಾಂಡಲ್ವುಡ್ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: ಕಿಚ್ಚನ ಬರ್ತ್ ಡೇಗೆ ಸುದೀಪಿಯನ್ಸ್ ಗೆ ಸ್ಪೆಷಲ್ ಗಿಫ್ಟ್.. Zee5 ಒಟಿಟಿಗೆ ಲಗ್ಗೆ ಇಡ್ತಿದ್ದಾನೆ ವಿಕ್ರಾಂತ್ ರೋಣ
75ರ ಸಂಭ್ರಮ
ಕನ್ನಡ ಚಿತ್ರರಂಗದ ಮಟ್ಟಿಗೆ '777 ಚಾರ್ಲಿ' ಎಂದೂ ಮರೆಯಲಾಗದ ಚಿತ್ರ. ಅದ್ರಲ್ಲೂ ‘ಕೆಜಿಎಫ್ ಚಾಪ್ಟರ್ 2’ ನಂತರ ರಿಲೀಸ್ ಆಗಿ ಭರ್ಜರಿ ಯಶಸ್ಸು ಸಾಧಿಸಿದ ಈ ಸಿನಿಮಾ ಜಗತ್ತಿನಾದ್ಯಂತ ಮೋಡಿ ಮಾಡಿತ್ತು. ಉತ್ತರ ಭಾರತ ಸೇರಿದಂತೆ ಜಗತ್ತಿನ ಮೂಲೆ ಮೂಲೆಯಲ್ಲೂ ಈ ಸಿನಿಮಾ ನೋಡಿದವರು ಮನಸಾರೆ ಮೆಚ್ಚಿಕೊಂಡಿದ್ದಾರೆ. ಈ ಹೊತ್ತಲ್ಲೇ ಸಿಹಿ ಸುದ್ದಿ ಹೊರಬಿದ್ದಿದ್ದು, '777 ಚಾರ್ಲಿ' 75 ಡೇಸ್ ಪೂರೈಸಿದೆ.
ಪಾರ್ಟ್-2 ಪಕ್ಕಾ..?
'777 ಚಾರ್ಲಿ' ಒಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರೂ ಥಿಯೇಟರ್ನಲ್ಲಿ ಹವಾ ಕಡಿಮೆಯಾಗಿಲ್ಲ. ದೇಶಾದ್ಯಂತ ಹತ್ತಾರು ಥಿಯೇಟರ್ನಲ್ಲಿ ಇಂದಿಗೂ '777 ಚಾರ್ಲಿ' ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ ಬಾಕ್ಸ್ ಆಫೀಸ್ ಲೆಕ್ಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದು, ಇನ್ನೇನು 100 ದಿನಗಳ ಸಂಭ್ರಮ ಕಾಣಲು ಸಜ್ಜಾಗಿದೆ. ಚಿತ್ರತಂಡ ಕೂಡ ಈ ಸಂತಸವನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದು, '777 ಚಾರ್ಲಿ' ಪಾರ್ಟ್ 2 ಬರೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಹುನಿರೀಕ್ಷಿತ ಕನ್ನಡ ಕಾಮಿಡಿ ಚಿತ್ರ ಪೆಟ್ರೋಮ್ಯಾಕ್ಸ್ ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರ
ಒಟ್ಟಾರೆ ಹೇಳುವುದಾದರೆ '777 ಚಾರ್ಲಿ' ಕನ್ನಡ ಸಿನಿಮಾ ಜಗತ್ತಿನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಹಾಗೇ '777 ಚಾರ್ಲಿ' ಪಾರ್ಟ್ 2 ಯಾವಾಗ ಬರುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಯಾಕಂದ್ರೆ '777 ಚಾರ್ಲಿ' ಕ್ಲೈಮ್ಯಾಕ್ಸ್ ದೊಡ್ಡ ಹಿಂಟ್ ಕೊಟ್ಟಿದ್ದು, '777 ಚಾರ್ಲಿ' ಪಾರ್ಟ್ 1 ನೋಡಿ ಇಷ್ಟಪಟ್ಟಿರುವ ಕೋಟಿ ಕೋಟಿ ಭಾರತೀಯರು ಇದೀಗ ಪಾರ್ಟ್ 2 ಬೇಕು ಅಂತಿದ್ದಾರೆ. ಆದರೆ ಈವರೆಗೂ '777 ಚಾರ್ಲಿ' ಚಿತ್ರತಂಡ ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.