ಬೆಂಗಳೂರು: ಇಂದು ನಟ ದರ್ಶನ್ (Darshan) ಅವರಿಗೆ 45ನೇ ಹುಟ್ಟುಹಬ್ಬದ ಸಂಭ್ರಮ. ಕೋವಿಡ್ ಮುಂಚೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದರೆ, ಕಳೆದೆರಡು ವರ್ಷಗಳಿಂದ ಅಭಿಮಾನಿಗಳ ಜೊತೆ ಹುಟ್ಟುಹಬ್ಬ (Darshan birthday) ಆಚರಿಸಲು 'ಡಿ ಬಾಸ್' ಗೆ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: Bappi Lahiri Dies: ಕಿಶೋರ್ ಕುಮಾರ್ ಅವರ ಹತ್ತಿರದ ಸಂಬಂಧಿ ಬಪ್ಪಿ ಲಾಹಿರಿ!
ಈ ವರ್ಷ ಕೊರೊನಾ (Corona) ಕಾಟವಿಲ್ಲದೆ ಬರ್ತ್‌ಡೇ ಆಚರಣೆ ಮಾಡಬೇಕೆಂದು ಕೊಂಡಿದ್ದ ದಚ್ಚು ಅಭಿಮಾನಿಗಳಿಗೆ ನಿರಾಸೆ ಮೂಡಿದೆ. ಈ ವರ್ಷ ಕೂಡಾ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸುತ್ತಿಲ್ಲ.
ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ನೀವು ಹಬ್ಬದ ತರಹ ಆಚರಿಸ್ತೀರಾ. ಹುಟ್ಟುಹಬ್ಬ ಮಾಡಬೇಕೆಂದು ನನಗೂ ಆಸೆ ಇತ್ತು.ಆದರೆ, ಈ ಬಾರಿಯೂ ಆಚರಿಸುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ನಿಧನ ಎಂದು ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದು ಅವರ ಫ್ಯಾನ್ಸ್ ನಿರಾಸೆಗೆ ಕಾರಣವಾಗಿದೆ.
ನಟ ದರ್ಶನ್ ತೂಗುದೀಪ 1990 ರ ದಶಕದ ಮಧ್ಯಭಾಗದಲ್ಲಿ ಸೋಪ್ ಒಪೆರಾಗಳು ಮತ್ತು ಸಣ್ಣ ಚಲನಚಿತ್ರಗಳಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 2001 ರ ಕನ್ನಡ ಚಲನಚಿತ್ರ ಮೆಜೆಸ್ಟಿಕ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಇದು ದರ್ಶನ್ ಅವರು ಹೀರೋ ಆಗಿ ನಟಿಸಿದ ಮೊದಲ ಚಿತ್ರ.
ಇದನ್ನೂ ಓದಿ: ಕನ್ನಡದ ಹಿರಿಯ ಸಾಹಿತಿ, ಚೆಂಬೆಳಕಿನ ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿ ಇನ್ನಿಲ್ಲ
ಅವರ ಕರಿಯ (2003) ಚಿತ್ರ ವಾಣಿಜ್ಯಿಕವಾಗಿ ಯಶಸ್ಸು ಕಂಡ ಚಿತ್ರಗಳಲ್ಲಿ ಒಂದಾಗಿದೆ. 19 ನೇ ಶತಮಾನದ ಯೋಧ ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಅವರ ಅಭಿನಯವು ಅವರ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು (Karnataka State Film Award) ಗೆದ್ದುಕೊಟ್ಟಿತು.
ನಮ್ಮ ಪ್ರೀತಿಯ ರಾಮು (2005), ಕಲಾಸಿಪಾಳ್ಯ (2005), ಗಜ (2008), ನವಗ್ರಹ (2008), ಸಾರಥಿ (2011), ಬುಲ್ಬುಲ್ (2013), ಯಜಮಾನ (2019) ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.