ನೆನಪಿರಲಿ ..! ಚಹಾದೊಂದಿಗೆ ಈ ವಸ್ತುಗಳನ್ನು ತಿನ್ನಲೇ ಬಾರದು

ಸಮಯ ಯಾವುದೇ ಆಗಿರಬಹುದು. ಲೀಟರ್ ಗಟ್ಟಲೆ ಚಹಾ ಕುಡಿಯುವವರು ಕೂಡಾ ಇರುತ್ತಾರೆ. ಚಹಾ ಕುಡಿದ ಕೂಡಲೇ  ಆಯಾಸ ಮತ್ತು ಸೋಮಾರಿತನವನ್ನು ದೂರ ಹೋಗುತ್ತದೆ ಎನ್ನುವದು ಬಹಳಷ್ಟು ಜನರ ಅನಿಸಿಕೆ.  

Written by - Ranjitha R K | Last Updated : Dec 17, 2021, 04:45 PM IST
  • ಚಹಾದೊಂದಿಗೆ ಹಸಿ ವಸ್ತುಗಳನ್ನು ಮರೆತು ಕೂಡಾ ತಿನ್ನಬೇಡಿ
  • ಚಹಾದೊಂದಿಗೆ ಮೊಟ್ಟೆಗಳನ್ನು ಸೇವಿಸುವುದು ಅಪಾಯಕಾರಿ.
  • ಸಾಯಂಕಾಲದ ಚಹಾದೊಂದಿಗೆ ರುಚಿಕರವಾದ ತಿಂಡಿ ತಿನ್ನುವುದೆಂದರೆ ಎಲ್ಲರಿಗೂ ಇಷ್ಟ
ನೆನಪಿರಲಿ ..! ಚಹಾದೊಂದಿಗೆ ಈ ವಸ್ತುಗಳನ್ನು ತಿನ್ನಲೇ ಬಾರದು  title=
ಚಹಾದೊಂದಿಗೆ ಹಸಿ ವಸ್ತುಗಳನ್ನು ಮರೆತು ಕೂಡಾ ತಿನ್ನಬೇಡಿ (file photo)

ನವದೆಹಲಿ : ನಮ್ಮಲ್ಲಿ ಹೆಚ್ಚಿನವರು ತಮ್ಮ ದಿನವನ್ನು ಒಂದು ಕಪ್ ಚಹಾ (Tea) ಅಥವಾ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಚಹಾ ಕುಡಿಯಲು ಇಷ್ಟಪಡುವ ಜನರಿಗೆ ಚಹಾ ಕುಡಿಯಲು ಅವಕಾಶ ಬೇಕು. ಸಮಯ ಯಾವುದೇ ಆಗಿರಬಹುದು. ಲೀಟರ್ ಗಟ್ಟಲೆ ಚಹಾ ಕುಡಿಯುವವರು ಕೂಡಾ ಇರುತ್ತಾರೆ. ಚಹಾ ಕುಡಿದ ಕೂಡಲೇ  ಆಯಾಸ ಮತ್ತು ಸೋಮಾರಿತನವನ್ನು ದೂರ ಹೋಗುತ್ತದೆ ಎನ್ನುವದು ಬಹಳಷ್ಟು ಜನರ ಅನಿಸಿಕೆ. ವಾಸ್ತವವಾಗಿ, ಚಹಾದಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸರಿಯಾಗಿ ಇರಿಸಿಕೊಳ್ಳಲು ಸಹಕಾರಿಯಾಗಿದೆ. ಚಹಾವನ್ನು ತಲೆನೋವಿಗೆ ಪರಿಣಾಮಕಾರಿ ಎನ್ನಲಾಗುತ್ತದೆ. ಸಾಯಂಕಾಲದ ಚಹಾದೊಂದಿಗೆ ರುಚಿಕರವಾದ ತಿಂಡಿಗಳನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಚಹಾದೊಂದಿಗೆ ಕೆಲವು ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿ (Bad combination with tea)ಪರಿಗಣಿಸಬಹುದು.  

ಚಹಾದೊಂದಿಗೆ ಈ ವಸ್ತುಗಳನ್ನು ಸೇವಿಸಬೇಡಿ:
1. ಹುಳಿ ವಸ್ತುಗಳು : ಹುಳಿ ಪದಾರ್ಥಗಳನ್ನು ಚಹಾದೊಂದಿಗೆ ಸೇವಿಸಬಾರದು. ಚಹಾ (Tea) ಕುಡಿಯುವಾಗ ಅನೇಕ ಜನರು ಹುಳಿ ಪದಾರ್ಥಗಳನ್ನು ಸೇವಿಸುತ್ತಾರೆ. ಆದರೆ, ಅಂತಹ ವಸ್ತುಗಳನ್ನು ಚಹಾದೊಂದಿಗೆ ಸೇವಿಸುವುದರಿಂದ ಅಸಿಡಿಟಿ, ಜೀರ್ಣಕಾರಿ ಸಮಸ್ಯೆಗಳು (Digestion problems) ಉಂಟಾಗುತ್ತವೆ.

ಇದನ್ನೂ ಓದಿ : Banana Shake: ನೀವೂ ಬಾಳೆಹಣ್ಣಿನ ಶೇಕ್ ಕುಡಿತೀರಾ? ಅದರ ಅಡ್ಡಪರಿಣಾಮಗಳ ಬಗ್ಗೆಯೂ ಇರಲಿ ಎಚ್ಚರ

2 . ಅರಿಶಿನ : ಅರಿಶಿನದಿಂದ (Turmeric) ಮಾಡಿದ ವಸ್ತುಗಳನ್ನು ಚಹಾದೊಂದಿಗೆ ಸೇವಿಸಬಾರದು. ಚಹಾ ಮತ್ತು ಅರಿಶಿನದಲ್ಲಿ ಇರುವ ರಾಸಾಯನಿಕ ಅಂಶಗಳು ಪರಸ್ಪರ ರಿಯಾಕ್ಟ್ ಆಗುತ್ತವೆ.  ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸಬಹುದು.

3. ಹಸಿ ಪದಾರ್ಥಗಳು : ಚಹಾದೊಂದಿಗೆ ಹಸಿ ವಸ್ತುಗಳನ್ನು ತಪ್ಪಿಯೂ ತಿನ್ನಬಾರದು. ಚಹಾದೊಂದಿಗೆ ಸಲಾಡ್ (Salad), ಮೊಳಕೆಯೊಡೆದ ಧಾನ್ಯಗಳಂತಹ ಹಸಿ ವಸ್ತುಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ.  

4. ಕೋಲ್ಡ್ ವಸ್ತುಗಳು  : ಚಹಾ ಕುಡಿದ ತಕ್ಷಣ ಅಥವಾ ಚಹಾದೊಂದಿಗೆ ತಣ್ಣನೆಯ ವಸ್ತುಗಳನ್ನು ಸೇವಿಸಬೇಡಿ. ಟೀ ಕುಡಿದ ತಕ್ಷಣ ತಣ್ಣೀರು, ಐಸ್ ಕ್ರೀಮ್ (Ice cream) ಮುಂತಾದವುಗಳನ್ನು ತಿನ್ನುವುದು ಮತ್ತು ಕುಡಿಯುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ಇದನ್ನೂ ಓದಿ : Sensitive Teeth During Pregnancy: ಗರ್ಭಾವಸ್ಥೆಯಲ್ಲಿ ಹಲ್ಲುನೋವನ್ನು ನಿರ್ಲಕ್ಷಿಸಬೇಡಿ

5. ಬೇಯಿಸಿದ ಮೊಟ್ಟೆ : ಮೊಟ್ಟೆಗಳನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಆದರೆ ಚಹಾದೊಂದಿಗೆ ಮರೆತು  ಕೂಡಾ ಬೇಯಿಸಿದ ಮೊಟ್ಟೆಗಳನ್ನು (Boild egg) ಸೇವಿಸಬಾರದು. ಚಹಾದೊಂದಿಗೆ ಮೊಟ್ಟೆಗಳನ್ನು ಸೇವಿಸುವುದು ಅಪಾಯಕಾರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News