Viral Video : ಮದುವೆ ಮಂಟಪದಲ್ಲಿ ವರ ಹೇಳಿದ ಈ ಮಾತಿಗೆ ನಾಚಿ ನೀರಾದ ವಧು .!

Wedding Viral Video : ಇಲ್ಲಿ ಕುಟುಂಬದವರು ಕೇಳಿದ ಪ್ರಶ್ನೆಗೆ ವರ ಒಂಚೂರೂ ತಡವರಿಸದೆ ಉತ್ತರಿಸಿ ಬಿಡುತ್ತಾನೆ. ಆದರೆ, ವಧು ಮಾತ್ರ ವರ ಎಲ್ಲೆರೆದುರು ಈ ರೀತಿಯ ಮಾತುಗಳನ್ನಾಡಿರುವುದಕ್ಕೆ ನಾಚಿ ಕೊಳ್ಳುತ್ತಾಳೆ. 

Written by - Ranjitha R K | Last Updated : Dec 28, 2022, 03:47 PM IST
  • ಮದುವೆ ಎಂದರೆ ಅಲ್ಲಿ ಸಂತೋಷ, ಸಂಭ್ರಮ ಮನೆ ಮಾಡಿರುತ್ತದೆ
  • ಮದುವೆ ಮನೆಯಲ್ಲಿ ವಧು ವರರ ಕಾಲೆಳೆಯಲು ಕುಟುಂಬದವರು ಕಾಯುತ್ತಿರುತ್ತಾರೆ.
  • ವೈರಲ್ ಆಗುತ್ತಿದೆ ವಧು ವರರ ವಿಡಿಯೋ
 Viral Video : ಮದುವೆ ಮಂಟಪದಲ್ಲಿ ವರ ಹೇಳಿದ ಈ ಮಾತಿಗೆ ನಾಚಿ ನೀರಾದ ವಧು .!  title=

Wedding Viral Video : ಮದುವೆ ಎಂದರೆ ಅಲ್ಲಿ ಸಂತೋಷ, ಸಂಭ್ರಮ, ನಗು ಮನೆ ಮಾಡಿರುತ್ತದೆ.  ಏನಾದರೊಂದು ತಮಾಷೆ ನಡೆಯುತ್ತಲೇ ಇರುತ್ತದೆ. ಇನ್ನು ಮದುವೆ ಮನೆಯಲ್ಲಿ ವಧು ವರರ ಕಾಲೆಳೆಯಲು ಕುಟುಂಬದವರು ಕೂಡಾ ಕಾಯುತ್ತಿರುತ್ತಾರೆ. ಕೆಲವೊಂದು ಮದುವೆಗಳಲ್ಲಿ ವಧು ವರರಿಗೆ ಪ್ರಶ್ನೆಗಳನ್ನು ಕೇಳುವುದು ಕೂಡಾ ಇದೆ. ಇಲ್ಲಿ ಕುಟುಂಬದವರು  ಕೇಳುವ ಪ್ರಶ್ನೆಗೆ ವಧು ಅಥವಾ ವರ ಕೊಡುವ ಉತ್ತರದ ಆಮೇಲೆ ಅಲ್ಲಿ ಸಂಭ್ರಮ ಇನ್ನಷ್ಟು ಕಳೆ ಕಟ್ಟುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದೆ. 

ವರನ ಮಾತಿಗೆ ನಾಚಿ ನೀರಾದ ವಧು : 
ಮದುವೆಯ ಈ ವೀಡಿಯೊ ನೋಡುವಾಗ ಮದುವೆಯ ಎಲ್ಲಾ ಶಾಸ್ತ್ರಗಳು ಮುಗಿದಿರುವಂತೆ ಕಾಣುತ್ತದೆ. ಮದುವೆ ಶಾಸ್ತ್ರಗಳೆಲ್ಲಾ ಮುಗಿದ ಮೇಲೆ ಇಲ್ಲಿ ವಧು-ವರರನ್ನು ಕೂರಿಸಿಕೊಂಡು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇಲ್ಲಿ ಕುಟುಂಬದವರು ಕೇಳಿದ ಪ್ರಶ್ನೆಗೆ ವರ ಒಂಚೂರೂ ತಡವರಿಸದೆ ಉತ್ತರಿಸಿ ಬಿಡುತ್ತಾನೆ. ಆದರೆ, ವಧು ಮಾತ್ರ ವರ ಎಲ್ಲೆರೆದುರು ಈ ರೀತಿಯ ಮಾತುಗಳನ್ನಾಡಿರುವುದಕ್ಕೆ ನಾಚಿ ಕೊಳ್ಳುತ್ತಾಳೆ. 

ಇದನ್ನೂ ಓದಿ : Viral Video: ಅತ್ತಿಗೆಯ ಕೈ ಹಿಡಿದು ಡ್ಯಾನ್ಸ್ ಮಾಡಿದ ಮೈದುನ, ಮುಂದೇನಾಯ್ತು ಗೊತ್ತಾ?

ವರನ ಬಳಿ ಇಲ್ಲಿ ಮದುವೆಯ ಬಗ್ಗೆ ಏನನ್ನಾದರೂ ಹೇಳುವಂತೆ ಕೇಳುತ್ತಾರೆ. ಆಗ ವರ ತಕ್ಷಣ,  21ರಲ್ಲಿ ಮದುವೆ ಮತ್ತು 22ರಲ್ಲಿ ಮಗು ಎನ್ನುವಂತೆ ಮಾತನಾಡುತ್ತಾನೆ. ಮನೆ ಮಂದಿ ಮುಂದೆ ಮಗುವಿನ ಬಗ್ಗೆ ಮಾತನಾಡಿರುವುದೇ ತಡ ವಧು ನಾಚಿಕೊಂಡು ಮುಖ ಮುಚ್ಚಿಕೊಳ್ಳುತ್ತಾಳೆ.  

 

 
 
 
 

 
 
 
 
 
 
 
 
 
 
 

A post shared by Dhiraj (@dh.iraj1305)

ಇದನ್ನೂ ಓದಿ : IViral Video: ಮದುವೆ ಶಾಸ್ತ್ರದ ವೇಳೆಯೇ ಲಿಪ್‌ಲಾಕ್‌ ಮಾಡಿದ ನವ ಜೋಡಿ..!

ವಧು ಮತ್ತು ವರನ ಈ ವಿಶಿಷ್ಟ ವೀಡಿಯೊಗೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಎಂದಿನಂತೆ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. dh.iraj1305 ಹೆಸರಿನ Instagram ಖಾತೆಯಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಮೂರು ಲಕ್ಷಕ್ಕೂ ಹೆಚ್ಚು ಲೈಕ್‌ಗಳ ಜೊತೆಗೆ, ವೀಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News