ವಿಜಯ್ ದೇವರಕೊಂಡ ತಾಯಿಯೂ ಒಬ್ಬ ನಟಿ..! ರಶ್ಮಿಕಾ ಚಿತ್ರದಲ್ಲಿ ನಟಿಸಿದ್ದಾರೆ ಗೊತ್ತೇ?

Vijay Devarakonda : ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ʼಡಿಯರ್ ಕಾಮ್ರೇಡ್ʼ ಚಿತ್ರ. ನಿನ್ನೆ ಅಂದರೆ ಜುಲೈ 26ಕ್ಕೆ ರಿಲೀಸ್ ಆಗಿ 5 ವರ್ಷ ಪೂರೈಸಿದೆ. ಈ ಹಿನ್ನಲೆಯಲ್ಲಿ ಸಿನಿಮಾಗೆ ಸಂಬಂಧಿಸಿದ ಇಂಟ್ರೆಸ್ಟಿಂಗ್ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.. ಎನದು ಸುದ್ದಿ.. ? ಬನ್ನಿ ನೋಡೋಣ.. 

Written by - Krishna N K | Last Updated : Jul 27, 2024, 06:51 PM IST
    • ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ
    • ಮಾಧವಿಯವರು ರಶ್ಮಿಕಾ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ
    • ತೆರೆಮೇಲೆ ಬಂದರೂ ಸಹ ಅವರನ್ನು ಗುರುತಿಸುವಲ್ಲಿ ಪ್ರೇಕ್ಷಕರು ವಿಫಲ
ವಿಜಯ್ ದೇವರಕೊಂಡ ತಾಯಿಯೂ ಒಬ್ಬ ನಟಿ..! ರಶ್ಮಿಕಾ ಚಿತ್ರದಲ್ಲಿ ನಟಿಸಿದ್ದಾರೆ ಗೊತ್ತೇ? title=
Vijay Deverakonda Rashmika marriage

Vijay Devarakonda mother : ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೇಡ್ ಚಿತ್ರಕ್ಕೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ನಿನ್ನೆ ಅಂದರೆ ಜುಲೈ 26ಕ್ಕೆ ಈ ಸಿನಿಮಾ ಬಿಡುಗಡೆಯಾಗಿ ಐದು ವರ್ಷಗಳು ಕಳೆದಿವೆ. ಆದರೆ ಇಷ್ಟು ವರ್ಷಗಳ ನಂತರ ಸಿನಿಮಾದ ಬಗ್ಗೆ ಒಂದು ಕುತೂಹಲಕಾರಿ ವಿಷಯವೊಂದು ಹೊರಬಿದ್ದಿದೆ. ಇದು ಚಿತ್ರದಲ್ಲಿನ ಒಂದು ಅತಿಥಿ ಪಾತ್ರದ ಬಗ್ಗೆ. 

ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಒಬ್ಬರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬೇರೆ ಯಾರೂ ಅಲ್ಲ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ. ವಾಸ್ತವವಾಗಿ, ಅನೇಕ ಜನರಿಗೆ ಇದು ತಿಳಿದಿಲ್ಲ. ಏಕೆಂದರೆ ಅವರ ಪಾತ್ರ ಹೆಚ್ಚು ಸಮಯ ತೆರೆಮೇಲೆ ಉಳಿಯುವುದಿಲ್ಲ.. ಹೀಗಾಗಿ ಮಾಧವಿಯವರನ್ನು ಯಾರು ಗಮನಿಸಿಲ್ಲ.. 

ಇದನ್ನೂ ಓದಿ:ಕೊನೆಗೂ ಕೂಡಿಬಂತಾ ಸಲ್ಮಾನ್‌ ಖಾನ್‌ʼಗೆ ಮದುವೆ ಭಾಗ್ಯ!? 44 ವರ್ಷ ವಯಸ್ಸಿನ ಈ ನಟಿ ಜೊತೆ ಸಲ್ಲು ಮ್ಯಾರೇಜ್‌...!!

ಒಂದು ದೃಶ್ಯದಲ್ಲಿ ವಿಜಯ್ ದೇವರಕೊಂಡ ಅವರ ತಾಯಿ ಕಾಲೇಜು ಉಪನ್ಯಾಸಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಅವರು ಬಂದು ಹೋಗುತ್ತಾರೆ.. ಅದಕ್ಕಾಗಿಯೇ ಎಲ್ಲರೂ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡರೆ, ರಶ್ಮಿಕಾ ಮಂದಣ್ಣ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ್ತಿಯಾಗಿ ನಟಿಸಿದ್ದಾರೆ..

ಚಿತ್ರ ಬಿಡುಗಡೆಯಾಗಿ ಐದು ವರ್ಷ ಪೂರೈಸಿರುವ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರು ಚಿತ್ರದ ಬಗ್ಗೆ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ‘ನಿರೂಪಣೆ ಹೇಳಿದಾಗಿನಿಂದ ಆರಂಭವಾದ ಜರ್ನಿ, ತಿಂಗಳುಗಟ್ಟಲೆ ಕ್ರಿಕೆಟ್ ತರಬೇತಿ, ಹೊಡೆತ, ನೋವು, ಸಿನಿಮಾ ಪ್ರಚಾರದಿಂದ ಈ ಸಿನಿಮಾ ರಿಲೀಸ್ ಆಗುವವರೆಗೆ..’ ಎಂದು ರಶ್ಮಿಕಾ ತಮ್ಮ ಜರ್ನಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.. 

ಇದನ್ನೂ ಓದಿ:ರೀಲ್ಸ್‌ ಸ್ಟಾರ್‌ ಖಾಸಗಿ ಫೋಟೋಸ್‌ ವೈರಲ್‌..! ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿವೆ ಚಿತ್ರಗಳು..

ಮೈತ್ರಿ ಮೂವಿ ಮೇಕರ್ಸ್ ಮತ್ತು ಬಿಗ್ ಬೆನ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸಿದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಆಗ ಈ ಸಿನಿಮಾ ವಿಶ್ವಾದ್ಯಂತ 30 ಕೋಟಿ ಕಲೆಕ್ಷನ್ ಮಾಡಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News