Viral Video: ಬೃಹತ್‌ ಹೆಬ್ಬಾವಿನೊಂದಿಗೆ ಸರಸವಾಡಲು ಹೋದವನಿಗೆ ಏನಾಯ್ತು ನೋಡಿ!

Viral Video: ಹಲವು ಬಾರಿ ಆ ಹೆಬ್ಬಾವು ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ಈ ವೇಳೆ ಆ ವ್ಯಕ್ತಿ ಅದನ್ನು ತನ್ನ ಕೈಗಳಿಂದ ಬಿಗಿಯಾಗಿ ಹಿಡಿಯಲು ಯತ್ನಿಸಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ ಅದು ಆತನಿಂದ ತಪ್ಪಿಸಿಕೊಳ್ಳಲು ಪದೇ ಪದೇ ಪ್ರಯತ್ನಿಸಿದೆ. ಎಸ್ಕೇಪ್‌ ಆಗುವ ವೇಳೆ ಹಬ್ಬಾವು ಆ ವ್ಯಕ್ತಿಗೆ ಕಚ್ಚಲು ಸಹ ಪ್ರಯತ್ನಿಸುವುದನ್ನು ಕಾಣಬಹುದು.

Written by - Puttaraj K Alur | Last Updated : Sep 22, 2024, 05:39 PM IST
  • ಬೃಹತ್‌ ಹೆಬ್ಬಾವಿನೊಂದಿಗೆ ಸರಸವಾಡಲು ಹೋದ ವ್ಯಕ್ತಿ
  • ಹೆಬ್ಬಾವಿನ ಕಡಿತದಿಂದ ಸ್ವಲ್ಪದರಲ್ಲೇ ಪಾರಾದ ವ್ಯಕ್ತಿ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್
Viral Video: ಬೃಹತ್‌ ಹೆಬ್ಬಾವಿನೊಂದಿಗೆ ಸರಸವಾಡಲು ಹೋದವನಿಗೆ ಏನಾಯ್ತು ನೋಡಿ! title=
ವಿಡಿಯೋ ಸಖತ್‌ ವೈರಲ್

Python Viral Video: ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ಸಾವಿರಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಈ ಪೈಕಿ ಪ್ರಾಣಿ-ಪಕ್ಷಿಗಳ ವಿಡಿಯೋಗಳು ಜನರ ಗಮನ ಸೆಳೆಯುತ್ತವೆ. ಕೆಲವು ವಿಡಿಯೋಗಳು ಜನರ ಮೊಗದಲ್ಲಿ ನಗು ತರಿಸಿದರೆ, ಇನ್ನೂ ಕೆಲ ವಿಡಿಯೋಗಳು ಭಯ ಮೂಡಿಸುತ್ತವೆ. ಹಾವುಗಳ ವಿಡಿಯೋಗಳು ಸಹ ಜನರ ಗಮನ ಸೆಳೆಯುತ್ತವೆ. ವಿಷಕಾರಿ ಸರ್ಪಗಳು, ಹೆಬ್ಬಾವುಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತವೆ. 

ಬೃಹತ್‌ ಹೆಬ್ಬಾವಿನೊಂದಿಗೆ ವ್ಯಕ್ತಿಯೊಬ್ಬ ಸರಸವಾಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದೆ. ಈ ಘಟನೆಯ ವೇಳೆ ಸ್ಥಳದಲ್ಲಿದ್ದ ಜನರು ಭಯಭೀತರಾಗಿದ್ದನ್ನು ದೃಶ್ಯಾವಳಿಗಳು ತೋರಿಸುತ್ತವೆ. ವೈರಲ್‌ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಬ್ಬಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಹೆಬ್ಬಾವು ಆತನಿಂದ ಬಿಡಿಸಿಕೊಂಡು ಎಸ್ಕೇಪ್‌ ಆಗಲು ಪ್ರಯತ್ನಿಸಿದೆ. ಈ ವೇಳೆ ಅದನ್ನು ಬಿಗಿಯಾಗಿ ಹಿಡಿಯಲು ಆ ವ್ಯಕ್ತಿ ಪ್ರಯತ್ನಿಸಿದ್ದಾನೆ. 

ಇದನ್ನೂ ಓದಿ: 58 ಜನರ ಜೊತೆ S*X.. 71 ಕೋಟಿ ಲಂಚ.. ಬ್ಯಾಗ್‌ನಲ್ಲಿ ಕಾಂಡೋಮ್‌ ರಾಶಿ..! ʼಸುಂದರಿ ರಾಜಕಾರಣಿʼ ರಹಸ್ಯ ಬಯಲು

ಹಲವು ಬಾರಿ ಆ ಹೆಬ್ಬಾವು ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ಈ ವೇಳೆ ಆ ವ್ಯಕ್ತಿ ಅದನ್ನು ತನ್ನ ಕೈಗಳಿಂದ ಬಿಗಿಯಾಗಿ ಹಿಡಿಯಲು ಯತ್ನಿಸಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ ಅದು ಆತನಿಂದ ತಪ್ಪಿಸಿಕೊಳ್ಳಲು ಪದೇ ಪದೇ ಪ್ರಯತ್ನಿಸಿದೆ. ಎಸ್ಕೇಪ್‌ ಆಗುವ ವೇಳೆ ಹಬ್ಬಾವು ಆ ವ್ಯಕ್ತಿಗೆ ಕಚ್ಚಲು ಸಹ ಪ್ರಯತ್ನಿಸುವುದನ್ನು ಕಾಣಬಹುದು. ಹೆಬ್ಬಾವನ್ನು ಸರಿಯಾಗಿ ಹಿಡಿಯಬೇಕು ಅಂತಾ ವ್ಯಕ್ತಿ ಪ್ರಯತ್ನಿಸುವ ವೇಳೆ ಅದು ಆತನ ಮುಖಕ್ಕೆ ಕಚ್ಚಲು ಬಾಯಿ ತೆರೆದಿದೆ. 

ಬಾಯಿ ತೆರೆದ ಹೆಬ್ಬಾವು ನೇರವಾಗಿ ವ್ಯಕ್ತಿಯ ಮುಖಕ್ಕೆ ಕಚ್ಚಲು ಪ್ರಯತ್ನಿಸಿದೆ. ಈ ವೇಳೆ ಆತ ಅದರಿಂದ ತಪ್ಪಿಸಿಕೊಂಡು ಹೆಬ್ಬಾವಿನ ಬಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ಜೋರಾಗಿ ಚಪ್ಪಾಳೆ ತಟ್ಟಿ ಆ ವ್ಯಕ್ತಿಯನ್ನು ಹುರಿದುಂಬಿಸಿದ್ದಾರೆ. @visualfeastwang ಎಂಬ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾವಿರಾರು ಜನರು ವೀಕ್ಷಿಸಿದ್ದಾರೆ. ಅನೇಕರು ಹಾವಿನೊಂದಿಗೆ ಸರಸವಾಡುವ ಮುನ್ನ ತುಂಬಾ ಎಚ್ಚರಿಕೆ ವಹಿಸಬೇಕು ಅಂತಾ ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: ವರ ಬೇಕಾಗಿದ್ದಾನೆ..! ಮದುವೆಯಾಗದ ನಿಮ್ಮ ಗೆಳೆಯನಿಗೆ ತಿಳಿಸಿ ಇಲ್ಲೋಂದು ಬಂಪರ್‌ ಆಫರ್‌ ಇದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News