ಕೋಲ್ಕತ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಪ್ರತಿದಿನ ಶಾಕ್ ಮೇಲೆ ಶಾಕ್ ಎದುರಾಗಲಾರಂಭಿಸಿದೆ. ಶಾಸಕ ಅರಿಂದಂ ಭಟ್ಟಾಚಾರ್ಯ ಪಕ್ಷಕ್ಕೆ ರಾಜಿನಾಮೆ ಕೊಟ್ಟು, ಬಿಜೆಪಿ ಸೇರಿದ ಬೆನ್ನಲ್ಲೇ ಇದೀಗ ರಾಜ್ಯದ ಅರಣ್ಯ ಸಚಿವರೂ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಅರಣ್ಯ ಸಚಿವ ರಾಜಿಬ್ ಬ್ಯಾನರ್ಜಿ ಶುಕ್ರವಾರದಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamta Banerjee)ಗೆ ಪತ್ರ ಬರೆದಿರುವ ಅವರು, 'ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಇದು ಒಂದು ದೊಡ್ಡ ಸ್ಥಾನ ಮತ್ತು ಅವಕಾಶವಾಗಿತ್ತು. ಈ ಅವಕಾಶವನ್ನು ಕೊಟ್ಟಿದ್ದಕ್ಕೆ ನಾನು ಪಕ್ಷಕ್ಕೆ ಕೃತಜ್ಞನಾಗಿದ್ದೇನೆ. ಇದೀಗ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ದಯಮಾಡಿ ಸ್ವೀಕರಿಸಿ' ಎಂದು ಕೇಳಿಕೊಂಡಿದ್ದಾರೆ.
Congress: ಕಾಂಗ್ರೆಸ್ನಲ್ಲಿ ಸದ್ಯಕ್ಕಿಲ್ಲ ಎಲೆಕ್ಷನ್: ಹಾಗಾದ್ರೆ ನೂತನ ಅಧ್ಯಕ್ಷರ ಆಯ್ಕೆ ಯಾವಾಗ?
ಜನವರಿ 30 ಮತ್ತು 31ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳ ಪ್ರವಾಸ ಕೈಗೊಳ್ಳಲಿದ್ದು, ಅಷ್ಟರೊಳಗೆ ರಾಜಿಬ್ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು, ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬುಧವಾರದಂದು ಶಾಸಕ ಅರಿಂದಂ ಭಟ್ಟಾಚಾರ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದರು.
Government Alert - ಇನ್ಮುಂದೆ ಮಂತ್ರಿಗಳು ಹಾಗೂ ಅಧಿಕಾರಿಗಳ ವಿರುದ್ಧ ಟೀಕೆ ಮಾಡಿದ್ರೆ ಹುಷಾರ್...!
ಕಳೆದ ಬಾರಿ ಅಮಿತ್ ಷಾ ಅವರು ಪಶ್ಚಿಮ ಬಂಗಾಳ ಪ್ರವಾಸಕ್ಕೆ ತೆರಳಿದಾಗ, ಟಿಎಂಸಿಯ ಪ್ರಮುಖ ನಾಯಕ ಸುವೇಂದು ಅಧಿಕಾರಿ ಸೇರಿ ಆರು ಶಾಸಕರು ಮತ್ತು ಓರ್ವ ಸಂಸದ ಬಿಜೆಪಿ ಸೇರಿದ್ದರು. ಅದಾದ ನಂತರ ಸುಮಾರು 15 ಟಿಎಂಸಿ ಶಾಸಕರು ಮತ್ತು ಸಂಸದರು, ಮೂರು ಎಡಪಕ್ಷಗಳ ಶಾಸಕರು ಮತ್ತು ಮೂರು ಕಾಂಗ್ರೆಸ್ ಶಾಸಕರು ಪಕ್ಷ ತೊರೆದಿದ್ದಾರೆ. ಈ ಬಾರಿ ಅಮಿತ್ ಷಾ ಅವರು ರಾಜ್ಯಕ್ಕೆ ತೆರಳಿದಾಗ ಭಾರಿ ಸಂಖ್ಯೆಯ ನಾಯಕರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಖಾತೆ ನಿರ್ಬಂಧಿಸಿದ್ದಕ್ಕೆ ಟ್ವಿಟ್ಟರ್ ಮೇಲೆ ಸಂಸದೀಯ ಸಮಿತಿ ಗರಂ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.