David Warner On Covid-19 Situation In India:'ಭಾರತದಲ್ಲಿ ವಾಸಿಸುವುದು ಒಂದು ಭಯಾನಕ ಅನುಭವ'

David Warner On Covid-19 Situation In India - Coronavirusನ ಎರಡನೆಯ ಅಲೆಯ ಹೆಚ್ಚಾಗುತ್ತಿರುವ ಪ್ರಕೋಪದ ನಡುವೆ, IPL ಅನ್ನು ಮಧ್ಯದಲ್ಲಿಯೇ ಸ್ಥಗಿತಗೊಳಿಸಲಾಗಿತ್ತು. ಏತನ್ಮಧ್ಯೆ SRH ತಂಡದ ಆರಂಭಿಕ ಆಟಗಾರ David Warner ಬಹಿರಂಗ ಹೇಳಿಕೆಯೊಂದನ್ನು ನೀಡಿದ್ದಾರೆ. 

Written by - Nitin Tabib | Last Updated : Jun 2, 2021, 08:48 PM IST
  • ಡೇವಿಡ್ ವಾರ್ನರ್ ಬಹಿರಂಗ ಹೇಳಿಕೆ.
  • ಭಾರತದಲ್ಲಿನ ಪರಿಸ್ಥಿತಿ ನೋವು ತರುವಂತದ್ದಾಗಿತ್ತು.
  • ಕೊರೊನಾದಿಂದ ಸ್ಥಗಿತಗೊಂಡಿತ್ತು IPL.
David Warner On Covid-19 Situation In India:'ಭಾರತದಲ್ಲಿ ವಾಸಿಸುವುದು ಒಂದು ಭಯಾನಕ ಅನುಭವ' title=
David Warner On Covid-19 Situation In India (File Photo)

ನವದೆಹಲಿ:  David Warner On Covid-19 Situation In India - Coronavirusನ ಎರಡನೆಯ ಅಲೆಯ ಹೆಚ್ಚಾಗುತ್ತಿರುವ ಪ್ರಕೋಪದ ನಡುವೆ, IPL ಅನ್ನು ಮಧ್ಯದಲ್ಲಿಯೇ ಸ್ಥಗಿತಗೊಳಿಸಲಾಗಿತ್ತು. ವಿಶ್ವದ ಅತಿ ದೊಡ್ಡ ಲೀಗ್ ನಲ್ಲಿ ಒಂದಾಗಿರುವ ಈ ಲೀಗ್ ನಲ್ಲಿ ಸತತವಾಗಿ ಆಟಗಾರರು ಹಾಗೂ ಸಿಬ್ಬಂದಿಗಳು ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದರು. ಈ ಹಿನ್ನೆಲೆ ದೊಡ್ಡ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಏತನ್ಮಧ್ಯೆ SRH ತಂಡದ ಆರಂಭಿಕ ಆಟಗಾರ David Warner ಬಹಿರಂಗ ಹೇಳಿಕೆಯೊಂದನ್ನು ನೀಡಿದ್ದಾರೆ. 

ವಾರ್ನರ್ ಬಹಿರಂಗಪಡಿಸಿದ್ದೇನು?
ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾಗಿರುವ ಡೇವಿಡ್ ವಾರ್ನರ್, IPL ಅವಧಿಯಲ್ಲಿ ಭಾರತದಲ್ಲಿ ಜನರು ಆಕ್ಸಿಜನ್ ಗಾಗಿ ನಡೆಸುತ್ತಿರುವ ಪರದಾಟ, ಸಂಘರ್ಷ ನೋಡುವುದು ಭಯಾನಕ ಹಾಗೂ ನೋವು ಉಂಟು ಮಾಡುವುದಾಗಿತ್ತು.  "ನನ್ನ ಅನಿಸಿಕೆಯ ಪ್ರಕಾರ ಮನೆಯಲ್ಲಿ ಎಲ್ಲರೂ ತಮ್ಮ ಟಿವಿ ಮೇಲೆ ಆಕ್ಸಿಜನ್ ಗೆ ಸಂಬಂಧಿಸಿದಂತೆ ಭಾರತದಲ್ಲಿನ ಪರಿಸ್ಥಿತಿ ಗಮನಿಸಿದ್ದಾರೆ. ಜನರು ತಮ್ಮ ಕುಟುಂಬ ಸದಸ್ಯರ ಅಂತಿಮ ಸಂಸ್ಕಾರಕ್ಕಾಗಿ ಲೈನ್ ನಲ್ಲಿ ನಿಲ್ಲುತ್ತಿದ್ದರು" ಎಂದು ವಾರ್ನರ್ ಹೇಳಿದ್ದಾರೆ. IPL ನಲ್ಲಿ ಕೊರೊನಾ ಪ್ರಕರಣಗಳು ಬೆಳೆಕಿಗೆ ಬಂದ ಹಿನ್ನೆಲೆ ಮೇ 4 ರಂದು ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು.

ಇದನ್ನೂ ಓದಿ-ICC ODI World Cup:ಜಾಗತಿಕ ಕ್ರಿಕೆಟ್ ಸಂಸ್ಥೆಯಿಂದ ಇಲ್ಲೊಂದು ಮಹತ್ವದ ಪ್ರಕಟಣೆ

ಭಾರತದ ಪರಿಸ್ಥಿತಿ ಪೀಡೆ ನೀಡುತ್ತದೆ
"ಭಾರತದಲ್ಲಿನ ಪರಿಸ್ಥಿತಿ ಭಯಾನಕವಾಗಿತ್ತು ಹಾಗೂ ಮಾನವತೆಯ ರೂಪದಲ್ಲಿ ಅದನ್ನು ನೋಡುವುದು ಪೀಡೆಯುಂಟು ಮಾಡುವಂತಿತ್ತು.  IPL ಸ್ಥಗಿತಗೊಳಿಸುವ ನಿರ್ಣಯ ಒಂದು ಉತ್ತಮ ನಿರ್ಣಯವಾಗಿತ್ತು ಎಂಬುದು ನನ್ನ ಅನಿಸಿಕೆ. ಬಬಲ್ ನಲ್ಲಿರುವುದು ಒಂದು ಸವಾಲಿನ ಸಂಗತಿಯಾಗಿದೆ. ಭಾರತದಲ್ಲಿ ಎಲ್ಲರೂ ಕ್ರಿಕೆಟ್ ಅನ್ನು ಪ್ರೀತಿಸುತ್ತಾರೆ ಎಂಬುದು ನಮಗೆ ತಿಳಿದ ಸಂಗತಿಯಾಗಿದೆ" ಎಂದು ವಾರ್ನರ್ ಹೇಳಿದ್ದಾರೆ. ಟೂರ್ನಿಯ ಮಧ್ಯದಲ್ಲಿಯೇ ಡೇವಿಡ್ ವಾರ್ನರ್ ಅವರನ್ನು ಸನ್ ರಿಸರ್ಸ್ ಹೈದ್ರಾಬಾದ್ ತಂಡದ ನಾಯಕತ್ವ ಸ್ಥಾನದಿಂದ ಕೈಬಿಡಲಾಗಿತ್ತು ಮಾಟ್ಟು ಅವರ ಜಾಗದಲ್ಲಿ ಕೆನ್ ವಿಲಿಯಂಸನ್ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿತ್ತು. "ಇದು ತುಂಬಾ ಸವಾಲಿನಿಂದ ಕೂಡಿತ್ತು ಮತ್ತು ನಾವು ಆದಷ್ಟು ಬೇಗ ಭಾರತದಿಂದ ಹೊರಹೋಗಲು ಬಯಸಿದ್ದೆವು. ನಾವು ಮಾಲ್ಡೀವ್ಸ್ ನಲ್ಲಿದ್ದೆವು ಮತ್ತು ಅಲ್ಲಿ ಇತರರೂ ಕೂಡ ಇದೆ ಕಾರಣದ ಹಿನ್ನೆಲೆ ಉಳಿದುಕೊಂಡಿದ್ದರು" ಎಂದು ವಾರ್ನರ್ ಹೇಳಿದ್ದಾರೆ.

ಇದನ್ನೂ ಓದಿ-IPL 2021: ಉಳಿದ ಪಂದ್ಯಗಳು UAE ನಲ್ಲಿಯೇ ನಡೆಯಲಿವೆ, ಮುದ್ರೆಯೋತ್ತಿದ BCCI

IPL 2021 ಸ್ಥಗಿತಗೊಂಡಿತ್ತು
ಮೇ 4 ರಂದು IPL 2021 ಅನ್ನು ಸ್ಥಗಿತಗೊಳಿಸಲಾಗಿತ್ತು. ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಕರಣಗಳ ಹಿನ್ನೆಲೆ IPL ಸ್ಥಗಿತಗೊಳಿಸಲಾಗಿತ್ತು. ತಂಡಗಳ ಬಯೋ ಬಬಲ್ ನಲ್ಲಿ ಆಟಗಾರರು ಹಾಗೂ ಸಿಬ್ಬಂದಿ ಸದಸ್ಯರು ಸತತವಾಗಿ ಮಹಾಮಾರಿಯಿಂದ ಸೋಂಕಿತರಾಗುತ್ತಿದ್ದರು. ಭಾರತದಲ್ಲಿಯೂ ಕೂಡ ಕೊರೊನಾದಿಂದ ಸೋಂಕಿತರಾಗಿರುವವರ ಸಂಖ್ಯೆ 4 ಲಕ್ಷ ದಾಟಿದೆ ಆದರೆ, ಇದೀಗ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಸತತ ಇಳಿಕೆಯಾಗುತ್ತಿದ್ದು ಎರಡು ಲಕ್ಷಕ್ಕೆ ತಲುಪಿದೆ. IPL ನ ಉಳಿದ ಪಂದ್ಯಗಳನ್ನು UAEನಲ್ಲಿ ನಡೆಸಲು ನಿರ್ಧರಿಸಲಾಗಿದೆ. 

ಇದನ್ನೂ ಓದಿ- ಜಾಗತಿಕ ಕ್ರಿಕೆಟ್ ಗೆ ಭಾರತದ ಅಗತ್ಯವಿದೆ- ರಿಚರ್ಡ್ ಹ್ಯಾಡ್ಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News