ಬೆಂಗಳೂರು : ಏರ್‌ಟೆಲ್ ದೇಶದಲ್ಲಿ 5G ಸೇವೆಯನ್ನು ಪ್ರಾರಂಭಿಸಿದ ಮೊದಲ ಕಂಪನಿಯಾಗಿದೆ. ಏರ್‌ಟೆಲ್ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 5G ವೇಗದ ಇಂಟರ್ನೆಟ್ ಮತ್ತು ಉತ್ತಮ ಆಡಿಯೊ ಕರೆಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ತಮ್ಮ ಫೋನ್‌ನಲ್ಲಿ ಇಂಟರ್ನೆಟ್ 5G ವೇಗದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಯೋಚಿಸುತ್ತಿದ್ದರೆ, ಚಿಂತಿಸಬೇಕಾಗಿಲ್ಲ. ಏರ್‌ಟೆಲ್ ಸಿಮ್‌ನೊಂದಿಗೆ 5G ಸೇವೆಯನ್ನು ಸುಲಭವಾಗಿ ಆಕ್ಟಿವ್ ಮಾಡಿಕೊಳ್ಳಬಹುದು.
ದೆಹಲಿ, ವಾರಣಾಸಿ, ನಾಗ್ಪುರ, ಬೆಂಗಳೂರು, ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ಸಿಲಿಗುರಿ ಸೇರಿದಂತೆ 8 ನಗರಗಳಲ್ಲಿ ಏರ್‌ಟೆಲ್ 5ಜಿ ಸೇವೆಗಳನ್ನು ಆರಂಭಿಸಲಿದೆ. ಈ ನಗರಗಳಲ್ಲಿನ ಏರ್‌ಟೆಲ್ ಗ್ರಾಹಕರು ಇಂಟರ್ನೆಟ್ ವೇಗ ಮತ್ತು ಉತ್ತಮ ಆಡಿಯೊದೊಂದಿಗೆ ಕರೆ ಮಾಡುವ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. 5G ಸೇವೆಯನ್ನು ಫೋನ್ ನಲ್ಲಿ ಆಕ್ಟಿವ್ ಮಾಡಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : WhatsApp ನಲ್ಲಿ ಇನ್ಮುಂದೆ ಯಾರು ಈ ಕೆಲ್ಸಾ ಮಾಡ್ಲಿಕ್ಕಾಗಲ್ಲ, ಬರ್ತಿದೆ ಹೊಸ ವೈಶಿಷ್ಟ್ಯ
ಏರ್‌ಟೆಲ್ ಸಿಮ್‌ನಲ್ಲಿ 5G ನೆಟ್‌ವರ್ಕ್ ಅನ್ನು ಹೇಗೆ ಸಕ್ರಿಯಗೊಳಿಸುವುದು ? :
4G ಏರ್‌ಟೆಲ್ ಸಿಮ್ ಕಾರ್ಡ್‌ನಲ್ಲಿ 5G ನೆಟ್‌ವರ್ಕ್ ಅನ್ನು ಸಕ್ರಿಯಗೊಳಿಸಬೇಕಾದರೆ, ಹೆಚ್ಚೇನೂ ಮಾಡಬೇಕಾಗಿಲ್ಲ. ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಬೇಕು. ಈಗ ಮೊಬೈಲ್ ನೆಟ್ವರ್ಕ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇಲ್ಲಿ 5G ನೆಟ್‌ವರ್ಕ್ ಅನ್ನು ಹೊಂದಿಸಬೇಕಾದ ನೆಟ್‌ವರ್ಕ್ ಆಯ್ಕೆಯನ್ನು ತೋರಿಸಲಾಗುತ್ತದೆ. ಒಮ್ಮೆ 5G ನೆಟ್‌ವರ್ಕ್ ಅನ್ನು ಆಯ್ಕೆ ಮಾಡಿದ ನಂತರ, ಸ್ಕ್ರೀನ್ ಮೇಲ್ಭಾಗದಲ್ಲಿ ನೆಟ್‌ವರ್ಕ್‌ನ ಪಕ್ಕದಲ್ಲಿ 5G ಲೋಗೋ ಕಾಣಿಸುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 5G ನೆಟ್‌ವರ್ಕ್ ಆಕ್ಟಿವ್ ಆಗಿದೆ ಎನ್ನುವುದು ಗೊತ್ತಾಗುತ್ತದೆ.
ಇದನ್ನೂ ಓದಿ : ತಪ್ಪಿ ಯಾವುದೋ ಖಾತೆಗೆ ಹಣ ವರ್ಗಾವಣೆಯಾದರೆ ಮರಳಿ ಪಡೆಯುವುದು ಹೇಗೆ? ಗ್ರಾಹಕರ ಮುಂದಿರುವ ಆಯ್ಕೆಗಳು ಏನು ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.