Viral News: ವ್ಯಕ್ತಿಯೊಬ್ಬನ ಮೇಲೆ ಉಕ್ಕಿ ಹರಿದ ಹಾವಿನ ಪ್ರೀತಿ, ಎರಡೇ ವಾರಗಳಲ್ಲಿ 8 ಬಾರಿ ಹೆಡೆ ಹೊಡೆದ ಹಾವು

Shocking Case: ಇಂಟರ್ನೆಟ್ ನಲ್ಲಿ ವಿಚಿತ್ರ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಹಾವಿನ ಉಪಟಳಕ್ಕೆ ಓರ್ವ ಯುವಕ ಸೇರಿದಂತೆ ಇಡೀ ಗ್ರಾಮದ ಜನರೇ ಬೆಚ್ಚಿಬಿದ್ದಿದ್ದಾರೆ.  

Written by - Nitin Tabib | Last Updated : Oct 17, 2022, 09:11 PM IST
  • ಇಲ್ಲಿ ವಿಚಿತ್ರ ಸಂಗತಿ ಎಂದರೆ ಆ ಹಾವು ಇದುವರೆಗೂ ಕೂಡ ಯಾರ ಕೈಗೂ ಸಿಕ್ಕಿಲ್ಲ.
  • ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದರೂ,
  • ಯಾವುದೇ ಅಧಿಕಾರಿಗಳು ತನಿಖೆಗೆ ಮುಂದಾಗಿಲ್ಲ
Viral News: ವ್ಯಕ್ತಿಯೊಬ್ಬನ ಮೇಲೆ ಉಕ್ಕಿ ಹರಿದ ಹಾವಿನ ಪ್ರೀತಿ, ಎರಡೇ ವಾರಗಳಲ್ಲಿ 8 ಬಾರಿ ಹೆಡೆ ಹೊಡೆದ ಹಾವು title=
Viral News

Social Media Trending: 'ಹಾವಿನ ದ್ವೇಷ 12 ವರುಷ' ಎಂಬ ಹಾಡು ನಿಮಗೆ ಗೊತ್ತೇ ಇರಬೇಕು. ಅಷ್ಟೇ ಅಲ್ಲ ಹಾವು ತನ್ನ ಸೇಡು ತೀರಿಸಿಕೊಳ್ಳುತ್ತದೆ ಎಂಬ ಸಂಗತಿಯನ್ನು ನೀವು ಯಾವುದಾದರೊಂದ ಚಲನಚಿತ್ರ ಅಥವಾ ದಾರಾವಾಹಿಗಳಲ್ಲಿ ನೋಡಿರಬಹುದು. ಆದರೆ, ನಿಜ ಜೀವನದಲ್ಲಿ ಇಂತಹ ಯಾವುದೇ ಒಂದು ಘಟನೆ ನಡೆದಿದೆ ಎಂಬುದನ್ನು ಎಲ್ಲಾದರೂ ಕೇಳಿದ್ದೀರಾ? ಹೌದು, ಇಂತಹ ಒಂದು ಶಾಕಿಂಗ್ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ಇರುವ ಗ್ರಾಮವೊಂದರಲ್ಲಿ ಸಂಭವಿಸಿದೆ. ಈ ಗ್ರಾಮದ ನಿವಾಸಿಯಾಗಿರುವ 20 ವರ್ಷದ ಯುವಕನ ಜೊತೆಗೆ ಇಂತಹ ಘಟನೆ ಸಂಭವಿಸಿದೆ. ಯುವಕನನ್ನು ರಜತ್ ಚಾಹರ್ ಎಂದು ಗುರುತಿಸಲಾಗಿದೆ. 

ಯುವಕನ ಮೇಲೆ 8 ಬಾರಿ ದಾಳಿಯಿಟ್ಟ ಹಾವು
ರಜತ್ ಹೇಳುವ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಹಾವೊಂದು ಆತನ ಮೇಲೆ ಹಲವು ಬಾರಿ ದಾಳಿ ನಡೆಸಿದೆ ಎನ್ನಲಾಗಿದೆ. ಒಂಟಿಯಾಗಿ ರಜತ್ ಎಲ್ಲೇ ಕಂಡರೂ ಕೂಡ ಹಾವು ಆತನ ಮೇಲೆ ಕ್ರೂರವಾಗಿ ದಾಳಿ ನಡೆಸುತ್ತದೆ ಎನ್ನಲಾಗಿದೆ. ಹಾವು ಕಪ್ಪು ಬಣ್ಣದ್ದಾಗಿದೆ ಎಂದು ರಜತ್ ಹೇಳಿದ್ದಾನೆ. ಹಲವು ಬಾರಿ ದಾಳಿ ಇಟ್ಟ ಕಾರಣ ರಜತ್ ನಿಧಾನಕ್ಕೆ ತನ್ನ ದೃಷ್ಟಿಯನ್ನು ಕಳೆದುಕೊಳ್ಳಲಾರಂಭಿಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ-Viral Video: ಆತ್ಮಹತ್ಯೆ ಮಾಡಿಕೊಳ್ಳಲು ಎತ್ತರ ಕಟ್ಟಡದ ಕಿಟಕಿ ಏರಿ ಕುಳಿತ ಯುವತಿ...ನಂತರ ನಡೆದಿದ್ದೇನು ನೀವೇ ನೋಡಿ

ಗ್ರಾಮಸ್ಥರಲ್ಲಿ ಭಾರಿ ನಡುಕ
ವರದಿಯ ಪ್ರಕಾರ, ಕಳೆದ 15 ದಿನಗಳಲ್ಲಿ ಕಪ್ಪು ಬಣ್ಣದ ಹಾವೊಂದು ಬಾಲಕನ ಮೇಲೆ 8 ಬಾರಿ ದಾಳಿ ನಡೆಸಿದೆ. ಒಮ್ಮೆ ರಜತ್ ಮಲಗಿದ್ದಾಗ ಹಾವು ಕಚ್ಚಿತ್ತು. ಬಾಲಕ ನೋವಿನಿಂದ ಕೂಗಿಕೊಂಡ ತಕ್ಷಣ ಮನೆಯವರೆಲ್ಲರೂ ಸೇರಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮನೆಯ ಸದಸ್ಯರು ಹಾವಾಡಿಗನನ್ನು ಸಂಪರ್ಕಿಸಿದ್ದಾರೆ, ಆದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯಿಂದ ಇಡೀ ಗ್ರಾಮದ ಜನರೇ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ-Smoking Bird Viral Video: ಬಾಯಿಯಿಂದ ಹೊಗೆ ಬಿಡುವ ಇಂತಹ ಪಕ್ಷಿಯನ್ನು ಎಲ್ಲಾದರೂ ನೋಡಿದ್ದೀರಾ?

ವಿಚಿತ್ರ ಈ ಕಥೆ
ಇಲ್ಲಿ ವಿಚಿತ್ರ ಸಂಗತಿ ಎಂದರೆ ಆ ಹಾವು ಇದುವರೆಗೂ ಕೂಡ ಯಾರ ಕೈಗೂ ಸಿಕ್ಕಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದರೂ, ಯಾವುದೇ ಅಧಿಕಾರಿಗಳು ತನಿಖೆಗೆ ಮುಂದಾಗಿಲ್ಲ ಎನ್ನುತ್ತಾರೆ ಕುಟುಂಬಸ್ಥರು. ಈ ಕಥೆಯ ಬಗ್ಗೆ ತಿಳಿದ ಅನೇಕರು ದಿಗ್ಭ್ರಮೆಗೊಂಡಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News