ಬೆಂಗಳೂರು : ಡಿಸೆಂಬರ್ 29 ರಂದು, ಶುಕ್ರ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರ ಮಕರ ರಾಶಿ ಪ್ರವೇಶಿಸುವುದರೊಂದಿಗೆ ಶನಿ ಮತ್ತು ಸೂರ್ಯನೊಂದಿಗೆ ಸಂಯೋಗವಾಗಲಿದೆ. ಇದಾದ ನಂತರ ಶುಕ್ರ ಜನವರಿ 22 ರವರೆಗೆ ಮಕರ ರಾಶಿಯಲ್ಲಿಯೇ ಇರಲಿದೆ. ಶುಕ್ರನ ಈ ಸಂಕ್ರಮಣವು ಕೆಲವು ರಾಶಿಯವರಿಗೆ ಹಾನಿಕಾರಕವಾಗಿ ಪರಿಣಮಿಸಬಹುದು. ಆದರೆ ಐದು ರಾಶಿಯವರ ಪಾಲಿಗೆ ಮಾತ್ರ ಇದು ಅಮೃತ ಘಳಿಗೆಯಾಗಲಿದೆ. ಈ ಐದು ರಾಶಿಯವರು ಈ ಸಂದರ್ಭದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಖಂಡಿತಾ.
ಮೇಷ ರಾಶಿ : ಶುಕ್ರ ಸಂಕ್ರಮಣದಿಂದಾಗಿ ಹಣ ಗಳಿಸುವ ಅವಕಾಶಗಳು ಹೆಚ್ಚಲಿವೆ. ಉದ್ಯೋಗಸ್ಥರಿಗೆ ಕೂಡಾ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರ ಮಾಡುವವರಿಗೆ ಇದು ಅದ್ಭುತ ಸಮಯ. ನೀವು ಮಾಡುವ ಕೆಲಸಗಳಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.
ಇದನ್ನೂ ಓದಿ : 2023 ರಲ್ಲಿ ರೂಪುಗೊಳ್ಳುತ್ತಿರುವ ಗಜಲಕ್ಷ್ಮಿ ರಾಜ ಯೋಗದಿಂದ ಮೂರು ರಾಶಿಯವರ ಕೈ ಹಿಡಿಯುವುದು ಅದೃಷ್ಟ
ಕನ್ಯಾ ರಾಶಿ : ಈ ರಾಶಿಯ ಜನರು ಧಾರ್ಮಿಕ ಕಾರ್ಯಗಳತ್ತ ಒಲವು ತೋರುತ್ತಾರೆ. ಸಂಪತ್ತು ಹೆಚ್ಚಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಹೆಚ್ಚು ಕಾಲ ಕಳೆಯುವುದು ಸಾಧ್ಯವಾಗುತ್ತದೆ. ವೃತ್ತಿ ಮಾತ್ರವಲ್ಲ, ವ್ಯಾಪಾರಸ್ಥರಿಗೂ ಲಾಭವಾಗಲಿದೆ.
ತುಲಾ ರಾಶಿ : ತುಲಾ ರಾಶಿಯವರಿಗೆ ಶುಕ್ರ ಸಂಚಾರವು ಶುಭಕರವಾಗಿರುತ್ತದೆ. ಅವರ ಸೌಕರ್ಯಗಳಲ್ಲಿ ಹೆಚ್ಚಳ ಕಂಡುಬರುತ್ತದೆ. ತಮ್ಮ ವೃತ್ತಿಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ಸಿಗಲಿವೆ. ಮುಂದಿನ ವರ್ಷ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಒಳ್ಳೆಯ ಸುದ್ದಿ ಸಿಗಲಿದೆ. ಹೊಸ ಅವಕಾಶಗಳೂ ಬಾಗಿಲು ತೆರೆಯಬಹುದು. ಜೀವನ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಮಾಧುರ್ಯವಿರುತ್ತದೆ.
ಇದನ್ನೂ ಓದಿ : Lucky Names : ಮದುವೆಯ ನಂತರ ಹೊಳೆಯುತ್ತದೆ ಈ ಹೆಸರಿನವರ ಅದೃಷ್ಟ : ನಿಮ್ಮ ಹೆಸರಿದೆಯಾ? ನೋಡಿ
ಮಕರ ರಾಶಿ : ಶುಕ್ರನು ಮಕರ ರಾಶಿಯನ್ನೇ ಪ್ರವೇಶಿಸುತ್ತಿರುವುದರಿಂದ ಈ ರಾಶಿಯವರು ಭಾರೀ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವೃತ್ತಿಜೀವನದಲ್ಲಿ ಕೆಲವು ಒಳ್ಳೆಯ ಸುದ್ದಿ ಕೇಳಲು ಸಿಗಬಹುದು. ಅನಗತ್ಯ ವೆಚ್ಚಗಳ ಮೇಲೆ ನಿಗಾ ಇರಿಸಿ. ಈ ಅವಧಿಯಲ್ಲಿ ಆರೋಗ್ಯವೂ ಸುಧಾರಿಸುತ್ತದೆ ಮತ್ತು ಹಳೆಯ ದೈಹಿಕ ಸಮಸ್ಯೆಗಳು ದೂರವಾಗುತ್ತವೆ. ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಗೆ ದಾಸವಾಳದ ಹೂವನ್ನು ಅರ್ಪಿಸುವುದನ್ನು ಮರೆಯಬೇಡಿ.
ಮೀನ ರಾಶಿ : ಶುಕ್ರನ ಸಂಚಾರದಿಂದಾಗಿ ಮೀನ ರಾಶಿಯವರು ಸ್ಥಿತಪ್ರಜ್ಞರಾಗಿರುತ್ತಾರೆ. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿದೆ. ಬಹುಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಆ ರೋಗ್ಯವೂ ಚೆನ್ನಾಗಿರುತ್ತದೆ. ಪ್ರತಿ ಗುರುವಾರ ಶಿವ ದೇವಾಲಯದಲ್ಲಿ ಪೂಜೆ ಮಾಡಿಸಿ .
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.