ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಈ ಗೆಲುವಿನ ಮುಖ್ಯ ರುವಾರಿಯಾಗಿದ್ದಾರೆ.
ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಹದಿನಾರನೇ ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯವನ್ನ ಆರ್.ಸಿ.ಬಿ ತಂಡ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರಂಭಿಸಿದೆ.
SRH vs RR, IPL 2023: ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ತಂಡದ ವಿರುದ್ಧ ಹೈದರಾಬಾದ್ ಸೋಲು ಕಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ಮಿಂಚಿದ ರಾಜಸ್ಥಾನ 5 ವಿಕೆಟ್ ನಷ್ಟಕ್ಕೆ 203 ರನ್ ಕಲೆ ಹಾಕಿತು.
Abhishek Sharma Best Catch: ಸ್ಯಾಮ್ಸನ್ ಡೀಪ್-ಮಿಡ್ ವಿಕೆಟ್’ನ ಮೇಲೆ ಬಲವಾಗಿ ಹೊಡೆದಾಗ ಬಾಲ್ ಬೌಂಡರಿ ದಾಟುವತ್ತ ಮುನ್ನಡೆಯಿತು. ಆದರೆ ಅಲ್ಲಿಯೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಷೇಕ್ ಶಾಂತವಾಗಿ ಕ್ಯಾಚ್ ಹಿಡಿದರು. ಈ ಸಂದರ್ಭದಲ್ಲಿ ಕೊಂಚ ಸಹನೆ ತಪ್ಪಿದರೂ ಸಹ ಅವರ ಕಾಲು ಬೌಂಡರಿ ದಾಟುತ್ತಿತ್ತು.
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ನ 16 ನೇ ಸೀಸನ್ ನ ಉದ್ಘಾಟನಾ ಸಮಾರಂಭವು ಸಾಕಷ್ಟು ಅಬ್ಬರದಿಂದ ಕೂಡಿತ್ತು ಎನ್ನಬಹುದು. ಆದರೆ ಈ ಪಂದ್ಯದಲ್ಲಿ ಚೆನ್ನೈ ಸೋಲು ಕಂಡಿದೆ. ಇದೀಗ ಈ ಸೋಲಿಗೆ ಕನ್ನಡ ಖ್ಯಾತ ನಟಿ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.
ಬೆಂಗಳೂರಲ್ಲಿ ಇಂದಿನಿಂದ 5 ದಿನಗಳ ಕಾಲ IPL ಫೀವರ್. RCB-ಮುಂಬೈ ಇಂಡಿಯನ್ಸ್ ನಡುವಿನ ಕ್ರಿಕೆಟ್ ಕದನಕ್ಕೆ ಕೌಂಟ್ಡೌನ್. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ-ಮುಂಬೈ ವಾರ್ . ಈಗಾಗಲೇ ಪಂದ್ಯಕ್ಕೆ ಟಿಕೆಟ್ಗಳು ಸಂಪೂರ್ಣ ಸೋಲ್ಡ್ ಔಟ್. ಮುಂಬೈ ಮಣಿಸಲು ಫಾಫ್ ಡು ಪ್ಲೆಸಿಸ್ ಹುಡ್ಗರ ತಯಾರಿ.
RCB vs MI, IPL 2023: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಮ್ಯಾಕ್ಸ್ವೆಲ್ ಆಟದ ಮೇಲೆ RCB ಭವಿಷ್ಯ ನಿಂತಿದೆ. ಫಿನಿಷರ್ ಡಿಕೆ ಮೇಲೆ ನೀರಿಕ್ಷೆ ಹೆಚ್ಚಿದೆ. ಬೌಲಿಂಗ್ ವಿಭಾಗದಲ್ಲೂ ಸಹ RCB ಸಮತೋಲದಿಂದ ಕೂಡಿದೆ.
ನಿನ್ನೆಯಿಂದ ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ 'ನಮ್ಮ ಮೆಟ್ರೋ' ಖುಷಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಬೆಂಗಳೂರಿನಲ್ಲಿ ರಾತ್ರಿ ಪಂದ್ಯಾವಳಿ ವೀಕ್ಷಣೆಗೆ ಬರುವವರಿಗೆ ಅನುಕೂಲಕ್ಕಾಗಿ ಮೆಟ್ರೋ ರೈಲು ಸಂಚಾರವನ್ನು ತಡರಾತ್ರಿ 1.30 ಗಂಟೆವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿದೆ.
Oldest Players In History Of IPL: ಇಮ್ರಾನ್ ತಾಹಿರ್ ಎಂಬವರು IPL 2023 ರಲ್ಲಿ ಕಾಮೆಂಟರಿ ಬಾಕ್ಸ್’ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. 42 ವರ್ಷದವರಾಗಿದ್ದಾಗ ತಾಹಿರ್ ಚೆನ್ನೈ ತಂಡದ ಭಾಗವಾಗಿದ್ದರು. ಅದ್ಭುತ ಬೌಲಿಂಗ್’ನಿಂದ ಪಂದ್ಯದ ಸ್ಥಿತಿಯನ್ನೇ ಬದಲಿಸುತ್ತಿದ್ದರು.
Lucknow Supergiants vs Delhi Capitals highlights: ಲಕ್ನೋ ನಿಗದಿತ 20 ಓವರ್ಗ’ಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು, ನಂತರ ಬ್ಯಾಟಿಂಗ್ ನಡೆಸಿದ ದೆಹಲಿ ತಂಡವು 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. 4 ಓವರ್ಗಳಲ್ಲಿ 14 ರನ್ ನೀಡಿ 5 ವಿಕೆಟ್ ಕಬಳಿಸಿದ ವೇಗಿ ಮಾರ್ಕ್ ವುಡ್ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.
Lucknow Super Giants vs Delhi Capitals, IPL 2023: ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ 6 ವಿಕೆಟ್ ನಷ್ಟಕ್ಕೆ193 ರನ್ ಕಲೆ ಹಾಕಿತು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ನಷ್ಟಕ್ಕೆ 143 ರನ್ ಕಲೆ ಹಾಕಿ ಹೀನಾಯ ಸೋಲು ಕಂಡಿದೆ.
PBKS vs KKR: ಮೊದಲ ಬಾರಿಗೆ ಕೋಲ್ಕತ್ತಾ ತಂಡ 10 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿ ಈ ಆಟಗಾರನಿಗೆ ಅವಕಾಶ ನೀಡಿತ್ತು. ಆದರೆ ಈ ಆಟಗಾರನು ಭರವಸೆಯನ್ನು ಹುಸಿಗೊಳಿಸಿದ್ದಾನೆ. ಆತ ಬೇರೆ ಯಾರೂ ಅಲ್ಲ ಶಾರ್ದೂಲ್ ಠಾಕೂರ್. ಶಾರ್ದೂಲ್ ಠಾಕೂರ್ ಮೊದಲ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವಾಗ ನಾಲ್ಕು ಓವರ್ಗಳನ್ನು ಬೌಲ್ ಮಾಡಿದರು.
Gujarat Titans vs Chennai Super Kings, IPL 2023: ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಚೆನ್ನೈ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 178 ರನ್ ಗಳಿಸಿತು. ಬಳಿಕ ಗುಜರಾತ್ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪಿತು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿ ೨೦೨೩ ರ ಆವೃತ್ತಿ ಮೊದಲ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ವಿರುದ್ಧ ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
IPL ಚುಟುಕು ಕ್ರಿಕೆಟ್ ಟೂರ್ನಿಯ ʻಸುಲ್ತಾನ್ʼ ಇಂಡಿಯನ್ ಪ್ರೀಮಿಯರ್ ಲೀಗ್, ಐಪಿಎಲ್ ಪಂದ್ಯಾವಳಿ ಇಂದಿನಿಂದ ಅಹ್ಮದಾಬಾದ್ನಲ್ಲಿ ಅದ್ಧೂರಿ ಚಾಲನೆ ದೊರೆಯಲಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ತವರು ಮೈದಾನದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ಧೋನಿ ಸಾರಥ್ಯದ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
CSK Vs GT History : ಇನ್ನೇನು ಕೆಲವೇ ಕ್ಷಣಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೊದಲ ಪಂದ್ಯ ಆರಂಭವಾಗಲಿದೆ. ಮತ್ತೊಮ್ಮೆ ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಎದುರು ಬದುರಾಗಲಿದ್ದಾರೆ.
GT vs CSK 2023:ಸಿಎಸ್ಕೆ ಮತ್ತು ಜಿಟಿ ಈ ಹಿಂದೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿಲ್ಲ. ಐಪಿಎಲ್ 2022 ರಲ್ಲಿ ಎರಡು ತಂಡಗಳು ಎದುರು ಬದುರಾಗಿತ್ತು. ಎರಡೂ ಪಂದ್ಯಗಳಲ್ಲಿ ಜಿಟಿ ಜಯ ಗಳಿಸಿತ್ತು.
Indian Cricketer Career Stats: ಕಳೆದ ವರ್ಷ ರವಿ ಅವರಿಗೆ ಖಂಡಿತವಾಗಿಯೂ ಅವಕಾಶಗಳು ಬಂದಿದ್ದವು. ಆದರೆ ಅವರು ಈಗ ತಂಡದ ಭಾಗವಾಗಲು ಸಾಧ್ಯವಾಗುತ್ತಿಲ್ಲ. ಐಪಿಎಲ್’ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಒಂದೊಮ್ಮೆ ಸ್ಥಾನ ಪಡೆದಿದ್ದರು. 6 ಅಕ್ಟೋಬರ್ 2022 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗಾಗಿ ತಮ್ಮ ಮೊದಲ ಮತ್ತು ಕೊನೆಯ ODI ಆಡಿದರು.
Indian Premier League 2023: ಎಲ್ ಎಸ್ ಜಿಗೆ ಈ ಬಾರಿ ಐಪಿಎಲ್ ಪ್ಲೇಆಫ್ ತಲುಪಲು ಕಡಿಮೆ ಅವಕಾಶವಿದೆ ಎಂಬ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್ ಅವರ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ಬಿಷ್ಣೋಯ್ ಹೇಳಿದ್ದಾರೆ. ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಅವಕಾಶ ಲಖನೌಗೆ ಶೇ 100ರಷ್ಟು ಇದೆ ಎಂದರು.
KEI Industries Limited Partnership with RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಧಿಕೃತ ಜರ್ಸಿಯ ಹಿಂಭಾಗದಲ್ಲಿ ಕೆಇಐ ಇಂಡಸ್ಟ್ರೀಸ್ ಲೋಗೋ ಇರಲಿದೆ. ಅಲ್ಲದೇ ತನ್ನ ಬ್ರ್ಯಾಂಡ್ ಪ್ರಚಾರದ ಉದ್ದೇಶಗಳಿಗೆ ಆರ್ ಸಿ ಬಿ ತಂಡದ ಲೋಗೋ ಮತ್ತು ಆಟಗಾರರ ಚಿತ್ರಗಳನ್ನ ಬಳಸಿಕೊಳ್ಳುವ ಹಕ್ಕನ್ನ ಕೆಇಐ ಪಡೆದುಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.