Flipkart Jingle Days Sale 2021: ಕೇವಲ 16 ಸಾವಿರಕ್ಕೆ ಖರೀದಿಸಿ 50 ಇಂಚಿನ ಸ್ಮಾರ್ಟ್ ಟಿವಿ!

50 ಇಂಚಿನ ಡಿಸ್ಪ್ಲೇ ಹೊಂದಿರುವ iFFALCON ಸ್ಮಾರ್ಟ್ ಟಿವಿಯ ಬೆಲೆ ಮಾರುಕಟ್ಟೆಯಲ್ಲಿ 58,990 ರೂ. ಆಗಿದೆ. ಆದರೆ Flipkartನಲ್ಲಿ ಈ ಟಿವಿ ಶೇ.50ರಷ್ಟು ರಿಯಾಯಿತಿ ಸಿಗುತ್ತಿದೆ.

Written by - Puttaraj K Alur | Last Updated : Dec 26, 2021, 03:55 PM IST
  • Flipkartನಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ರಿಯಾಯತಿ ಸಿಗುತ್ತಿದೆ
  • ಡಿ.29ರವರೆಗೆ ನಡೆಯಲಿರುವ ಟಿವಿ ಜಿಂಗಲ್ ಡೇಸ್ ಮಾರಾಟದಲ್ಲಿ ಸ್ಮಾರ್ಟ್ ಟಿವಿ ಖರೀದಿಸಿ
  • ಕೇವಲ 16 ಸಾವಿರ ರೂ.ಗೆ ಖರೀದಿಸಿರಿ 50 ಇಂಚಿನ ಸ್ಮಾರ್ಟ್ ಟಿವಿ
Flipkart Jingle Days Sale 2021: ಕೇವಲ 16 ಸಾವಿರಕ್ಕೆ ಖರೀದಿಸಿ 50 ಇಂಚಿನ ಸ್ಮಾರ್ಟ್ ಟಿವಿ! title=
Flipkart ಟಿವಿ ಜಿಂಗಲ್ ಡೇಸ್ ಮಾರಾಟ

ನವದೆಹಲಿ: ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್(Flipkart) ಪ್ರಸ್ತುತ ತನ್ನ ಗ್ರಾಹಕರಿಗೆ ಅನೇಕ ಕೊಡುಗೆಗಳನ್ನು ನೀಡುತ್ತಿದೆ. ಈಗ ವಿವಿಧ ರೀತಿಯ ಉತ್ಪನ್ನಗಳನ್ನು ದೊಡ್ಡ ರಿಯಾಯಿತಿಯಲ್ಲಿ ನೀವು ಖರೀದಿಸಬಹುದು. ಡಿ.25ರಿಂದ ಪ್ರಾರಂಭವಾಗಿರುವ ‘ಟಿವಿ ಜಿಂಗಲ್ ಡೇಸ್ ಮಾರಾಟ’(Flipkart Jingle Days Sale 2021)ದಲ್ಲಿ ಬಜೆಟ್ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳುಳ್ಳ ಸ್ಮಾರ್ಟ್ ಟೀವಿ(Smart TV)ಗಳು ಸಿಗುತ್ತಿವೆ. 

ಈ ವಿಶೇಷ ಆಫರ್ ಸೇಲ್ ನಲ್ಲಿ ನೀವು ಕೆಲವು ದಿನಗಳವರೆಗೆ ಎಲ್ಲಾ ರೀತಿಯ ಸ್ಮಾರ್ಟ್ ಟಿವಿಗಳಲ್ಲಿ ದೊಡ್ಡ ರಿಯಾಯಿತಿ(Big Discount) ಪಡೆಯುತ್ತೀರಿ. ಇಂದು ನಾವು ನಿಮಗೆ iFFALCON ಕಂಪನಿಯ 50 ಇಂಚಿನ ಸ್ಮಾರ್ಟ್ ಟಿವಿ ಡೀಲ್ ಕುರಿತು ತಿಳಿಸಲಿದ್ದೇವೆ. ಈ ಟಿವಿಯ ಮೂಲ ಬೆಲೆ 58,990 ರೂ. ಇದ್ದು, ಆಫರ್ ನಲ್ಲಿ ಇದು ನಿಮಗೆ ಕೇವಲ 16,549 ರೂ.ಗೆ ಲಭ್ಯವಿದೆ. ನಿಮ್ಮ ಬಜೆಟ್ ಗೆ ತಕ್ಕುದಾದ ಈ ಸ್ಮಾರ್ಟ್ ಟಿವಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.  

ಇದನ್ನೂ ಓದಿ: Paytm ಬಳಕೆದಾರರೆ ಎಚ್ಚರ! ಬಳಕೆದಾರರಿಗೆ ಈ ರೀತಿ ಲಕ್ಷಾಂತರ ರೂಪಾಯಿಗಳ ಪಂಗನಾಮ ಹಾಕಲಾಗುತ್ತಿದೆ

50 ಇಂಚಿನ ಸ್ಮಾರ್ಟ್ ಟಿವಿ 16 ಸಾವಿರಕ್ಕೆ ಖರೀದಿಸಿ

50 ಇಂಚಿನ ಡಿಸ್ಪ್ಲೇ ಹೊಂದಿರುವ iFFALCON ಸ್ಮಾರ್ಟ್ ಟಿವಿ(IFFALCON Smart Tv)ಯ ಬೆಲೆ ಮಾರುಕಟ್ಟೆಯಲ್ಲಿ 58,990 ರೂ. ಆಗಿದೆ. ಆದರೆ Flipkartನಲ್ಲಿ ಈ ಟಿವಿ ಶೇ.50ರಷ್ಟು ರಿಯಾಯಿತಿ ಸಿಗುತ್ತಿದೆ. ಹೀಗಾಗಿ ಇದನ್ನು ನೀವು ಕೇವಲ 28,999 ರೂ. ಮನೆಗೆ ಕೊಂಡೊಯ್ಯಬಹುದು. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಈ ಸ್ಮಾರ್ಟ್ ಟಿವಿಗೆ ಖರೀದಿಸಿದರೆ ಶೇ.5ರಷ್ಟು ಅಂದರೆ 1,450 ರೂ. ಹೆಚ್ಚುವರಿ ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ. ಆಗ  ಈ ಟಿವಿಯ ಬೆಲೆ 27,549 ರೂ. ಆಗುತ್ತದೆ.   

ವಿನಿಮಯ ಕೊಡುಗೆಯನ್ನು ಆನಂದಿಸಿ

ಫ್ಲಿಪ್‌ಕಾರ್ಟ್  ಈ ಡೀಲ್‌ನಲ್ಲಿ ನಿಮಗೆ ಎಕ್ಸ್‌ ಚೇಂಜ್ ಆಫರ್(Exchange Offers) ಸಹ ನೀಡುತ್ತಿದೆ. ನಿಮ್ಮ ಹಳೆಯ ಟಿವಿಗೆ ಬದಲಾಗಿ ನೀವು iFFALCONನ ಈ 50 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಿದರೆ 11 ಸಾವಿರ ರೂ.ವರೆಗೆ ರಿಯಾಯಿತಿ ಪಡೆಯಬಹುದು. ಈ ಎಕ್ಸ್‌ ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಪಡೆದುಕೊಂಡರೆ iFFALCON Ultra HD (4K) LED Smart Android TVಯನ್ನು 58,990 ರೂ. ಬದಲಿಗೆ ಕೇವಲ 16,549 ರೂ.ಗೆ ಖರೀದಿಸಬಹುದು.   

ಇದನ್ನೂ ಓದಿ: ಈ ಅದ್ಭುತ ವೈಶಿಷ್ಟ್ಯಗಳು 2022ರಲ್ಲಿ WhatsAppನಲ್ಲಿ ಬರಬಹುದು..!

iFFALCON ಸ್ಮಾರ್ಟ್ ಟಿವಿ ವೈಶಿಷ್ಟ್ಯಗಳು

iFFALCON Ultra HD (4K) LED ಸ್ಮಾರ್ಟ್ Android TVಯು Android ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ 50 ಇಂಚಿನ ಸ್ಮಾರ್ಟ್ ಟಿವಿ 3,840 x 2,160 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು ಅಲ್ಟ್ರಾ HD (4K) ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರಲ್ಲಿ ನೀವು 60Hzನ ರಿಫ್ರೆಶ್ ರೇಟ್ ಮತ್ತು 24Wನ ಸೌಂಡ್ ಔಟ್‌ಪುಟ್ ಅನ್ನು ಸಹ ಪಡೆಯುತ್ತೀರಿ. ಈ ಸ್ಮಾರ್ಟ್ ಟಿವಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಯೂಟ್ಯೂಬ್‌ನಂತಹ ಅಪ್ಲಿಕೇಶನ್‌ಗಳನ್ನು ಸಹ ಬೆಂಬಲಿಸುತ್ತದೆ. ಫ್ಲಿಪ್‌ಕಾರ್ಟ್‌ನ ಈ ಟಿವಿ ಜಿಂಗಲ್ ಡೇಸ್ ಮಾರಾಟವು ಡಿ.29ರವರೆಗೆ ಲೈವ್ ಆಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News