Virar Video: ಕೆಲವೊಂದು ವಿಚಾರಗಳನ್ನು ಬಣ್ಣಿಸುವಾಗ ವಯಸ್ಸಿಗೂ, ವಿಚಾರಕ್ಕೂ ತಾಳೆ ಹಾಕಬಾರದು ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ದೊಡ್ಡವರು ಮಾಡಲಾಗದ್ದನ್ನು ಚಿಕ್ಕ ಮಕ್ಕಳು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುತ್ತಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿರುವ ಈ ವಿಡಿಯೋ ಇದಕ್ಕೆ ಕನ್ನಡಿ ಹಿಡಿದಂತಿದೆ. ಇಲ್ಲೊಬ್ಬ ಪುಟ್ಟ ಬಾಲಕನ ಸಮಯ ಪ್ರಜ್ಞೆಯಿಂದಾಗಿ 66 ಜನರ ಪ್ರಾಣ ಉಳಿದಿದೆ.
ಹೌದು, ಪರಿಸ್ಥಿತಿ ಎಷ್ಟೇ ಕೆಟ್ಟದ್ದಾಗಿರಲಿ ಸಮಯ ಪ್ರಜ್ಞೆ ಎಂಬುದು ಬಹಳ ಮುಖ್ಯ. ಏಪ್ರಿಲ್ 26 ರಂದು ಏಳನೇ ತರಗತಿಯ ವಿದ್ಯಾರ್ಥಿಯ (Seventh Standrad Student) ಇದೇ ಸಮಯ ಪ್ರಜ್ಞೆಯಿಂದ 66 ಮಂದಿಯ ಜೀವ ಉಳಿದಿದೆ. ಮಿಚಿಗನ್‌ನ ಕಾರ್ಟರ್ ಮಿಡಲ್ ಸ್ಕೂಲ್‌ನ 7 ನೇ ತರಗತಿಯ ಡೈಲನ್ ರೀವ್ಸ್ ಎಂಬಾತನೆ ಆ ಸಾಹಸಿ ಬಾಲಕ.
ಇದನ್ನೂ ಓದಿ- Karnataka Assembly Elections: ಮೈಸೂರಿನಲ್ಲಿ ಪ್ರಧಾನಿ ನರೇಂದ್ರಮೋದಿ ರ‍್ಯಾಲಿಯಲ್ಲಿ ಭದ್ರತಾ ಲೋಪ- ವಿಡಿಯೋ ವೈರಲ್
ವಾಸ್ತವವಾಗಿ, ವಾರೆನ್ ಕನ್ಸಾಲಿಡೇಟೆಡ್ ಸ್ಕೂಲ್ಸ್ (Warren Consolidated Schools) ಸುಮಾರು 53 ಸೆಕೆಂಡ್ ಗಳ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ಘಟನೆ ಕಳೆದ ಬುಧವಾರ (26 ಏಪ್ರಿಲ್ 2023) ದಂದು ನಡೆದಿದ್ದು, ಈ ವಿಡಿಯೋದಲ್ಲಿ ಬಸ್ ಚಾಲಕ ಡ್ರೈವಿಂಗ್ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಪ್ರಜ್ಞಾಹೀನನಾಗಿ ಬೀಳುತ್ತಾನೆ. ಸಿಸಿಟಿವಿ ಯಲ್ಲಿ ಈ ದೃಶ್ಯವನ್ನು ವೀಕ್ಷಿಸಿದ ಬಾಲಕ ಡೈಲನ್ ರೀವ್ಸ್ ತಕ್ಷಣ ಡ್ರೈವರ್ ಬಳಿ ಬಂದು ಬ್ರೇಕ್ ಹಾಕಿದ್ದಾನೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಬರ್ನೆಟ್ ರೋಡ್ ಬಳಿಯ ಮೆಸೋನಿಕ್ ಬೌಲೆವಾರ್ಡ್‌ನಲ್ಲಿ ಈ ಬಾಲಕ ಬಸ್ ಗೆ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ.
ವಾರೆನ್ ಕನ್ಸಾಲಿಡೇಟೆಡ್ ಸ್ಕೂಲ್ಸ್ ಬಿಡುಗಡೆ ಮಾಡಿದ ವೀಡಿಯೋದಲ್ಲಿ ಡೈಲನ್ ರೀವ್ಸ್ (Dylan Reeves) ಬರ್ನೆಟ್ ರೋಡ್ ಬಳಿಯ ಮೆಸೋನಿಕ್ ಬೌಲೆವಾರ್ಡ್‌ನಲ್ಲಿ ಬಸ್ ಅನ್ನು ಸುರಕ್ಷಿತವಾಗಿ ನಿಲ್ಲಿಸುವುದನ್ನು ಕಾಣಬಹುದಾಗಿದೆ. ಈ ವೈರಲ್ ವಿಡಿಯೋವನ್ನು (Viral Video) ನೀವೂ ಒಮ್ಮೆ ನೋಡಿ...
ಇದನ್ನೂ ಓದಿ- Video Viral: ಖ್ಯಾತ ವೀಣಾ ಗಾಯಕಿ ಶ್ರೀವಾಣಿಯ ವೀಣೆಯಲ್ಲಿ ಮೂಡಿತು ಕಾಂತಾರ ಸಿನಿಮಾ ಹಾಡು: ವಿಡಿಯೋ ವೈರಲ್
ಬ್ರೇಕ್ ಹಾಕಿ ಬಸ್ ಅನ್ನು ನಿಲ್ಲಿಸಿದ ಬಳಿಕ "ಯಾರಾದರೂ 911ಗೆ ಕರೆ ಮಾಡಿ" ಎಂದು ಬಾಲಕ ಕಿರುಚಿದ್ದಾನೆ. ಈ ಸಂದರ್ಭದಲ್ಲಿ ಬಸ್ ನಲ್ಲಿದ್ದ 66 ಮಂದಿ ಪ್ರಯಾಣಿಕರೂ ಕೂಡ ಗಾಬರಿಯಾಗಿದ್ದರು ಎಂದು ಫಾಕ್ಸ್ 2 ಡೆಟ್ರಾಯಿಟ್ ವರದಿ ಮಾಡಿದೆ.
ಇನ್ನು ಬಾಲಕನ ಡೈಲನ್ ರೀವ್ಸ್ ನ ಈ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಸ್ ಚಾಲಕರ ಒಕ್ಕೂಟದ ಅಧ್ಯಕ್ಷ ರಾಬರ್ಟ್ ಲಿವರ್ನೋಯಿಸ್, ಬಸ್ ಚಾಲಕ ತೊಂದರೆಯಲ್ಲಿದ್ದದ್ದನ್ನು ಕಂಡು ಏಳನೇ ತರಗತಿಯ ಡೈಲನ್ ಬಸ್‌ನ ಮುಂಭಾಗಕ್ಕೆ ಹೆಜ್ಜೆ ಹಾಕಿ ಬಸ್‌ಗೆ ಬ್ರೇಕ್ ಹಾಕುವ ಮೂಲಕ ಹತ್ತಾರು ಜನರ ಪ್ರಾಣ ಉಳಿಸಿದ್ದಾರೆ ಎಂದು ಬಾಲಕನ ಧೈರ್ಯ, ಸಾಹಸಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.