ಮೊಟ್ಟೆ ಕದಿಯಲು ಯತ್ನಿಸಿದವರಿಗೆ ಸರಿಯಾಗಿ ಬುದ್ದಿ ಕಲಿಸಿದ ನವಿಲು- ವಿಡಿಯೋ ವೈರಲ್

ಭಾರತದ ರಾಷ್ಟೀಯ ಪಕ್ಷಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನವಿಲು ಯಾರನ್ನೆ ಆದರೂ ತನ್ನತ್ತ ಆಕರ್ಷಿಸುತ್ತದೆ. ಗರಿಬಿಚ್ಚಿ ಕುಣಿಯುವ ನವಿಲನ್ನು ನೋಡುವುದೇ ಆನಂದ. ಅಂತಹ ನವಿಲಿನ ಮೊಟ್ಟೆ ಕದಿಯಲು ಯತ್ನಿಸಿದವರಿ ನವಿಲು ಏನ್ ಮಾಡ್ತು ಗೊತ್ತಾ.... 

Written by - Yashaswini V | Last Updated : Apr 19, 2023, 04:35 PM IST
  • ಇಬ್ಬರು ಮಹಿಳೆಯರು ಗೂಡಿನಿಂದ ನವಿಲಿನ ಮೊಟ್ಟೆಗಳನ್ನು ಕದಿಯಲು ಯತ್ನಿಸಿದ್ದಾರೆ.
  • ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದೌಡಾಯಿಸಿದ ನವಿಲು ಮಾಡಿದ್ದೇನು ಗೊತ್ತಾ....
  • ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ...
ಮೊಟ್ಟೆ ಕದಿಯಲು ಯತ್ನಿಸಿದವರಿಗೆ ಸರಿಯಾಗಿ ಬುದ್ದಿ ಕಲಿಸಿದ ನವಿಲು- ವಿಡಿಯೋ ವೈರಲ್  title=
Peacock Viral Video

Peacock Viral Video: ಅದು ಮಾನವರೇ ಆಗಿರಲಿ ಅಥವಾ ಪ್ರಾಣಿ-ಪಕ್ಷಿಗಳೇ ಆಗಿರಲಿ ತಮ್ಮ ಮಗು, ಮರಿ ತಂಟೆಗೆ ಬಂದರೆ ಗ್ರಹಚಾರ ಬಿಡಿಸುವುದರಲ್ಲಿ ಅನುಮಾನವೇ ಇಲ್ಲ. ಇದೀಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ವಿಡಿಯೋವೊಂದು ಇದಕ್ಕೆ ಕನ್ನಡಿ ಹಿಡಿದಂತಿದೆ. 

ವಾಸ್ತವವಾಗಿ, ಇಬ್ಬರು ಮಹಿಳೆಯರು ಗೂಡಿನಿಂದ ನವಿಲಿನ ಮೊಟ್ಟೆಗಳನ್ನು ಕದಿಯಲು ಯತ್ನಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದೌಡಾಯಿಸಿದ ನವಿಲು ಮಾಡಿದ್ದೇನು ಗೊತ್ತಾ.... ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ... 

ಇದನ್ನೂ ಓದಿ- Viral Video: ಹಳ್ಳಕ್ಕೆ ಬಿದ್ದ ಬೆಕ್ಕಿನ ರಕ್ಷಣೆಗೆ ಕೋತಿಯ ಶತಪ್ರಯತ್ನ: ಮನಮುಟ್ಟುತ್ತೆ ಈ ವಿಡಿಯೋ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಸೇರಿ ಮರದಿಂದ ನವಿಲಿನ ಮೊಟ್ಟೆಗಳನ್ನು ಕದಿಯುತ್ತಿರುವುದನ್ನು ಕಾಣಬಹುದು. ಇವರಲ್ಲಿ  ಓರ್ವ ಮಹಿಳೆ ಮರದ ಮೇಲೆ ಹತ್ತಿ ಮೊಟ್ಟೆಗಳನ್ನು ಕದ್ದು ಕೆಳಗೆ ಎಸಿಯುತ್ತಿದ್ದರೆ, ಮತ್ತೊರ್ವ ಮಹಿಳೆ ಕೆಳಗೆ ನಿಂತು ನವಿಲಿನ ಮೊಟ್ಟೆಯನ್ನು ಕ್ಯಾಚ್ ಹಿಡಿಯುತ್ತಿದ್ದಳು. 

ಇದನ್ನೂ ಓದಿ- ನೀರಡಿಕೆಯಿಂದ ಬಳಲುತ್ತಿದ್ದ ತೋಳಕ್ಕೆ ನೀರುಣಿಸಿದ ವ್ಯಕ್ತಿ..! ಹೃದಯಸ್ಪರ್ಶಿ ವಿಡಿಯೋ ವೈರಲ್‌

ಈ ಸಮಯದಲ್ಲಿ ಸ್ಥಳಕ್ಕೆ ಬಂದ ನವಿಲು ತನ್ನ ಮೊಟ್ಟೆಗಳನ್ನು ಕಾಪಾಡಿಕೊಳ್ಳಲು ತಕ್ಷಣ ಮರದ ಮೇಲೆ ಹಾರಿ ಮೊಟ್ಟೆ ಕದಿಯುತ್ತಿದ್ದ ಮಹಿಳೆಯರ ಮೇಲೆ ದಾಳಿ ಮಾಡಿದೆ. ಮೊದಲು ಮರದ ಮೇಲಿದ್ದ ಮಹಿಳೆಯ ಮೇಲೆ ದಾಳಿ ಮಾಡಿದ ನವಿಲು ಆಕೆಯನ್ನು ಕುಟುಕುತ್ತಾ ಮೊಟ್ಟೆಗಳನ್ನು ರಕ್ಷಿಸಲು ಯತ್ನಿಸುತ್ತದೆ. ಬಳಿಕ ಕೆಳಗೆ ಮೊಟ್ಟೆಗಳನ್ನು ಕ್ಯಾಚ್ ಹಿಡಿಯುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ.  

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ದಿ ಫಿಗೆನ್ ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ ಮತ್ತು ಇದು ಸುಮಾರು 6,74,000ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  6 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಲೈಕ್ ಮಾಡಿದ್ದರೆ 721ಮಂದಿ ಈ ವೀಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News