Trending Video: ಗುನ್ನಾರ್ ಡೆಥರೇಜ್ ಎಂಬ ಈ ಫ್ಯಾಷನ್ ಡಿಸೈನರ್ ಯೂಟ್ಯೂಬ್ನಲ್ಲಿ ಗೌನ್ ವೊಂದರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಅವಧಿ ಮೀರಿದ ಕಾಂಡೋಮ್ಗಳನ್ನು ಬಳಸಿ ಅವರು ಈ ಗೌನ್ ವಿನ್ಯಾಸಗೊಳಿಸಿದ್ದಾರೆ. (Viral News In Kannada)
Paragliding Video Viral: ಪಂಜಾಬ್ನ ಹರ್ಷ್ ಎಂಬ ವ್ಯಕ್ತಿ, ಹಿಮಾಚಲ ಪ್ರದೇಶದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Viral Video: ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೋರ್ವನ ಮೇಲೆ ಎರಡು ಬಾರಿ ಮಿಂಚು ಬೀಳುತ್ತದೆ. ಆದರೆ ಅವನಿಗೆ ಏನೂ ಆಗುವುದಿಲ್ಲ ಮತ್ತು ಆತ ಬದುಕುಳಿಯುತ್ತಾನೆ. ಈ ವೀಡಿಯೊವನ್ನು ನೋಡಿ ಜನರು ಸಾಕಷ್ಟು ಆಶ್ಚರ್ಯಚಕಿತರಾಗಿದ್ದಾರೆ. (Viral News In Kannada)
Viral Video: ವಿಲ್ ಮ್ಯಾನಿಡಿಸ್ ಎಂಬುವರು ಅಕ್ಟೋಬರ್ನಲ್ಲಿ ಎಕ್ಸ್ ಸಾಮಾಜಿಕ ವೇದಿಕೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಸ್ಯಾನ್ ಮೆಟೊ-ಹಾರ್ಡ್ ಸೇತುವೆ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿಯ ಮೇಲೆ ಗಾಳಿಯಲ್ಲಿ ಸ್ಥಿರವಾಗಿ ನಿಂತಿರುವಂತೆ ಕಾಣುವ ವಿಮಾನವೊಂದು ಪತ್ತೆಯಾಗಿದೆ. (Viral News In Kannada)
Bear Attack: ಹನೂರು ತಾಲೂಕಿನ ಸಂದನಪಾಳ್ಯದ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಗೆ ಗುರುವಾರ ಮಧ್ಯರಾತ್ರಿ ಕರಡಿಯೊಂದು ನುಗ್ಗಿದ್ದು, ಆಹಾರ ಪದಾರ್ಥಗಳನ್ನು ತಿನ್ನುವುದರ ಜೊತೆಗೆ ಪೀಠೋಪಕರಣಗಳನ್ನು ಮುರಿದು ಹಾಕಿ ದಾಂಧಲೆ ಮಾಡಿದೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದವರು ಶಾಕ್ ಆಗಿದ್ದಾರೆ. ಏಕೆಂದರೆ, ನೀವು ಊಹಿಸಲೂ ಸಾಧ್ಯವಾಗದಂತಹ ಒಂದು ಕೆಲಸ ಈ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕೆನಡಾದಿಂದ ಹೊರಹೊಮ್ಮಿದ್ದು, 200 ವರ್ಷ ಹಳೆಯ ಕಟ್ಟಡವನ್ನು ಸಾಬೂನಿನ ಸಹಾಯದಿಂದ ಸ್ಥಳಾಂತರಿಸಲಾಗಿದೆ. (Viral News In Kannada)
ಸ್ಥಳೀಯ ಕೇಂದ್ರ ರೈಲ್ವೆ(Central Railway)ಯ ಮಹಿಳೆಯರ 2nd-class ಕೋಚ್ನಲ್ಲಿ ಈ ಘಟನೆ ನಡೆದಿದೆ. ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಮನಿಸಿದ್ದು, ಹೋಮ್ ಗಾರ್ಡ್ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅನೇಕರು ತಮ್ಮ ಪಾರ್ಟ್ನರ್ ಜೊತೆಗೆ ಯೋಗ ಮಾಡುತ್ತಿರುವುದನ್ನು ನೀವು ಕಾಣಬಹುದು. ಇಂತಹ ಯೋಗ ನೋಡಿದ ಜನರು ಆಶ್ಚರ್ಯಪಡುತ್ತಿದ್ದಾರೆ.(Viral News In Kannada)
Israel vs Gaza War: ಟರ್ಕಿಯ ಗ್ರ್ಯಾಂಡ್ ನ್ಯಾಷನಲ್ ಅಸೆಂಬ್ಲಿಯ ಸದಸ್ಯ ಹಸನ್ ಬಿಟ್ಮೆಜ್ ಅವರು ಭಾಷಣವನ್ನು ಪೂರ್ಣಗೊಳಿಸಿದ ಕೂಡಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Viral Video: ಮದುವೆ ಮಂಟಪದಲ್ಲಿ ವರನೊಬ್ಬ ವಧುವಿನ ಮನೆಯವರ ಜೊತೆಗೆ ವರದಕ್ಷಿಣೆ ಕುರಿತು ಮಾತನಾಡುತ್ತಿದ್ದಾನೆ. 2 ಲಕ್ಷ ರೂ.ಗಳ ಬಗ್ಗೆ ಮಾತುಕತೆಯಾಗಿದ್ದು, ಅದರಲ್ಲಿ ತನಗೆ ಕೇವಲ 50 ಸಾವಿರ ಮಾತ್ರ ದೊರೆತಿವೆ ಎಂದು ವರ ಹೇಳುತ್ತಿರುವುದನ್ನು ನೀವು ನೋಡಬಹುದು. (Viral News In Kanana)
Viral Video: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವಧು ಡ್ರಮ್ ಮೇಲೆ ಕುಳಿತು ಅರಿಶಿನ ಹಚ್ಚುವ ಕಾರ್ಯಕ್ರಮದಲ್ಲಿಯೇ ನೃತ್ಯ ಮಾಡುವುದನ್ನು ನೀವು ನೋಡಬಹುದು. ಈ ವಿಡಿಯೋದಲ್ಲಿ ಡ್ರಮ್ಮರ್ ಕೂಡ ಪೂರ್ಣ ಉತ್ಸಾಹದಿಂದ ಡ್ರಮ್ ಬಾರಿಸುವುದನ್ನು ಕಾಣಬಹುದು. (Viral News In Kannada)
Expensive Insect:ಈ ಕೀಟ ಅತ್ಯಂತ ದುಬಾರಿ. ಈ ಕೀಟವನ್ನು ಮಾರಾಟ ಮಾಡುವ ಮೂಲಕ ರಾತ್ರೋರಾತ್ರಿ ಮಿಲಿಯನೇರ್ ಆಗಿ ಬಿಡಬಹುದು. ಆದರೆ, ಕೆಲವೇ ಜನರು ಮಾತ್ರ ಈ ಕೀಟವನ್ನು ಗುರುತಿಸಲು ಸಮರ್ಥರಾಗಿರುತ್ತಾರೆ.
Viral QR Code Statue Photo: ಭಾರತದಲ್ಲಿ ಕ್ಯೂಆರ್ ಕೋಡ್ ತಂತ್ರಜ್ಞಾನದ ಮೂಲಕ ಆನ್ಲೈನ್ ಪಾವತಿಯ ಬಳಕೆಯು ಕೇವಲ ಒಂದು ದಶಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ವೈರಲ್ ವಿಗ್ರಹದಲ್ಲಿ ಮಾಯಾ ನಾಗರಿಕತೆಯ ಸುಧಾರಿತ ತಂತ್ರಜ್ಞಾನವನ್ನು ನೋಡಿ ಜನರು ದಿಗ್ಭ್ರಮೆಗೊಂಡಿದ್ದಾರೆ. ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಮಾಯಾ ನಾಗರಿಕತೆಯಲ್ಲಿ ಇಂತಹ ತಂತ್ರಜ್ಞಾನವನ್ನು ಕೆಲವು ಮಹತ್ವದ ಕೆಲಸಗಳಿಗೆ ಬಳಸಿರಬೇಕು ಎಂದು ಜನರು ಹೇಳುತ್ತಿದ್ದಾರೆ. (Viral News In Kannada)
Viral Fees Structure For Nursery: ಖಾಸಗಿ ಶಾಲೆಗಳಲ್ಲಿ ಶುಲ್ಕ ಗಗನಕ್ಕೇರುತ್ತಿದೆ. ಬೋಧನಾ ಶುಲ್ಕದ ಪೈಕಿ, ಪೋಷಕರ ಓರಿಯಂಟೇಶನ್ ಶುಲ್ಕದ ಹೆಸರಿನಲ್ಲಿ ಶಾಲೆಯೊಂದು 8,400 ರೂ. ಫೀಜ್ ಸ್ಟ್ರಕ್ಚರ್ ಗೆ ಸೇರಿಸಿದೆ. ಬನ್ನಿ ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ, (Viral News In Kannada)
Viral Marriage: ಇಂದೋರ್ನ ಅಲ್ಕಾ ಎಂಬ ಯುವತಿ ತನ್ನ ಲಿಂಗವನ್ನು ಬದಲಿಸಿ ಅಲ್ಕಾನಿಂದ ಅಸ್ತಿತ್ವ ಆಗಿ ಮಾರ್ಪಟ್ಟು ತನ್ನ ಗೆಳತಿ ಆಸ್ತಾಳ ಜೊತೆಗೆ ವಿವಾಹವಾಗಿದ್ದಾಳೆ. 5-6 ತಿಂಗಳ ಹಿಂದೆಯೇ ಆಸ್ತಾ ಈ ಕುರಿತು ಅಸ್ತಿತ್ವನೊಂದಿಗೆ ಮಾತುಕತೆ ನಡೆಸಿದ್ದಾಳೆ, ಬಳಿಕ ಸಾಕಷ್ಟು ಯೋಚಿಸಿದ ನಂತರ ಮದುವೆಯಾಗಲು ನಿರ್ಧರಿಸಿರುವುದಾಗಿ ಅವಳು ಹೇಳುತ್ತಾಳೆ. ಎರಡೂ ಕುಟುಂಬಗಳಿಗೆ ಯಾವುದೇ ತೊಂದರೆ ಇರಲಿಲ್ಲ ಎಂದ ಆಸ್ತಾ, ನಂತರ ಮದುವೆಯಾಗಲು ಬೇಕಾದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವುದಾಗಿ ಆಸ್ತಾ ಹೇಳಿದ್ದಾಳೆ. ಗುರುವಾರ ಅವರು ಕಾನೂನು ನ್ಯಾಯಾಲಯದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. (Viral News In Kannada)
Viral Video: ರೀಲ್ ಗಳನ್ನು ತಯಾರಿಸಲು ಜನರು ಯಾವ ಹಂತಕ್ಕೆ ಬೇಕಾದರು ಹೋಗುತ್ತಾರೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ. ರೈಲು, ಬಸ್ಸು, ಪಾರ್ಕ್, ರಸ್ತೆ ಮುಂತಾದ ಕಡೆ ಜನ ರೀಲ್ ಗಳನ್ನು ತಯಾರಿಸುವ ಪರಿಸ್ಥಿತಿನಿರ್ಮಾಣವಾಗಿದೆ. ರೀಲ್ ಗಳಿವೆ ಸಾಕಷ್ಟು ಲೈಕ್ಸ್ ಮತ್ತು ವೀಕ್ಷಣೆಗಳನ್ನು ಗಿಟ್ಟಿಸುವುದು ಅವರ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು ವಿಡಿಯೋ ಭಾರಿ ಚರ್ಚೆಯಲ್ಲಿದೆ. ಇದರಲ್ಲಿ ಯುವತಿಯೊಬ್ಬಳು ಲೋಕಲ್ ಟ್ರೈನ್ ನಲ್ಲಿ ಪೊಲೀಸ್ ಪೇದೆಯ ಜೊತೆಗೆ ನೃತ್ಯ ಮಾಡಿದ್ದಾಳೆ. (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.