ಪಾನ್ ಮಸಾಲ ಜಾಹೀರಾತು ನೀಡಿ ಟ್ರೋಲ್‌ ಆದ ಅಕ್ಕಿ! ಕ್ಷಮೆಯಾಚಿಸಿದ ನಟ ಅಕ್ಷಯ್ ಕುಮಾರ್

ಪಾನ್ ಮಸಾಲ ಬ್ರಾಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹಿಂದಿಯ ಸೂಪರ್‌ ಸ್ಟಾರ್ ಅಕ್ಷಯ್ ಕುಮಾರ್ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಪಾನ್‌ ಮಸಾಲ ಜಾಹೀರಾತಿನ ಒ‍ಪ್ಪಂದ ಕಡಿದುಕೊಳ್ಳುವುದಾಗಿ ಸಹ ತಿಳಿಸಿದ್ದಾರೆ.

Written by - Chetana Devarmani | Last Updated : Apr 21, 2022, 03:02 PM IST
  • ಪಾನ್ ಮಸಾಲ ಜಾಹೀರಾತು ನೀಡಿ ಟ್ರೋಲ್‌ ಆದ ಅಕ್ಕಿ
  • ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ನಟ ಅಕ್ಷಯ್ ಕುಮಾರ್
  • ಜಾಹೀರಾತಿನ ಒ‍ಪ್ಪಂದ ಕಡಿದುಕೊಳ್ಳುವುದಾಗಿ ತಿಳಿಸಿದ ನಟ
ಪಾನ್ ಮಸಾಲ ಜಾಹೀರಾತು ನೀಡಿ ಟ್ರೋಲ್‌ ಆದ ಅಕ್ಕಿ! ಕ್ಷಮೆಯಾಚಿಸಿದ ನಟ ಅಕ್ಷಯ್ ಕುಮಾರ್ title=
ನಟ ಅಕ್ಷಯ್ ಕುಮಾರ್

ಮುಂಬೈ: ಕೆಜಿಎಫ್‌2 ಚಿತ್ರ ಬಿಡುಗಡೆಯಾದ ಬಳಿಕ ಬಾಲಿವುಡ್‌ ಸಿನಿಮಾ ಹಾಗೂ ಸೌತ್‌ ಚಿತ್ರಗಳ ಬಗ್ಗೆ ಟಾಕ್‌ ಶುರುವಾಯ್ತು. ಆ ನಂತರ ಮೂವರು ಬಾಲಿವುಡ್‌ ಸ್ಟಾರ್‌ ನಟರನ್ನು ಟ್ರೋಲಿಗರು ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದರು. ಬಾಲಿವುಡ್‌ ಸ್ಟಾರ್‌ ನಟರಾದ ಅಕ್ಷಯ್‌ ಕುಮಾರ್‌, ಅಜಯ್‌ ದೇವಗನ್‌ ಮತ್ತು ಶಾರುಖ್‌ ಖಾನ್ ಅವರನ್ನು ಟ್ರೋಲ್‌ ಮಾಡಿದರು. ಈ ವಿಚಾರವಾಗಿ ಇದೀಗ ಅಕ್ಷಯ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಪಾನ್ ಮಸಾಲ ಬ್ರಾಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹಿಂದಿಯ ಸೂಪರ್‌ ಸ್ಟಾರ್ ಅಕ್ಷಯ್ ಕುಮಾರ್ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಪಾನ್‌ ಮಸಾಲ ಜಾಹೀರಾತಿನ ಒ‍ಪ್ಪಂದ ಕಡಿದುಕೊಳ್ಳುವುದಾಗಿ ಸಹ ತಿಳಿಸಿದ್ದಾರೆ.

ಇದನ್ನೂ ಓದಿ: ಹೊಸ ಸಿನಿಮಾ ಪ್ರಕಟಿಸಿದ ಹೊಂಬಾಳೆ ಫಿಲ್ಮ್ಸ್‌.. ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ?

ಎಂದಿಗೂ ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಸಾಮಾಜಿಕ ಮಾಧ್ಯಮ ಬಳಕೆದಾರರು ಅಕ್ಷಯ್ ಕುಮಾರ್ ಅವರ ವಿರುದ್ಧ ತೀವ್ರ ಅಸಮಧಾನ ಹೊರಹಾಕಿದ್ದರು. ಇದನ್ನೆಲ್ಲ ನೋಡಿದ ಅಕ್ಷಯ್‌ ಕುಮಾರ್‌ ಸದ್ಯ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತಂಬಾಕು ಬ್ರಾಂಡ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಅದರಿಂದ ಪಡೆದ ಸಂಪೂರ್ಣ ಸಂಭಾವನೆಯನ್ನು ಯೋಗ್ಯ ಉದ್ದೇಶಕ್ಕಾಗಿ ದಾನ ಮಾಡುವುದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. 

ನನ್ನ ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳೇ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳು ನನ್ನನ್ನು ಆಳವಾಗಿ ಪ್ರಭಾವಿಸಿದೆ. ನಾನು ತಂಬಾಕನ್ನು ಎಂದಿಗೂ ಉತ್ತೇಜಿಸಿಲ್ಲ ಮತ್ತು ನಾನು ಜಾಹೀರಾತು ಮಾಡುತ್ತಿರುವ ಬ್ರಾಂಡ್ ಬಗೆಗಿನ ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ವಿನಮ್ರತೆಯಿಂದ ನಾನು ಆ ಜಾಹೀರಾತಿನಿಂದ ಹಿಂದೆ ಸರಿಯುತ್ತೇನೆ. ನಾನು ಪಡೆದಿರುವ ಸಂಪೂರ್ಣ ಸಂಭಾವನೆಯನ್ನು ಯೋಗ್ಯ ಉದ್ದೇಶಕ್ಕಾಗಿ ನೀಡಲು ನಿರ್ಧರಿಸಿದ್ದೇನೆ. ನನ್ನ ಒಪ್ಪಂದದ ಕಾನೂನು ಅವಧಿ ಮುಗಿಯುವವರೆಗೆ ಬ್ರಾಂಡ್ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ಮುಂದುವರಿಸಬಹುದು. ಆದರೆ ನಾನು ಭವಿಷ್ಯದ ಆಯ್ಕೆಗಳನ್ನು ಮಾಡುವಾಗ ಅತ್ಯಂತ ಜಾಗರೂಕರಾಗಿರುತ್ತೇನೆ. ಪ್ರತಿಯಾಗಿ ನಾನು ನಿಮ್ಮ ಪ್ರೀತಿ ಮತ್ತು ಹಾರೈಕೆಗಳನ್ನು ಬಯಸುತ್ತೇನೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ KGF2.. 7 ದಿನಕ್ಕೆ 723.15 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್‌!

ಈ ಹಿಂದೆ, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೂಡ ಪಾನ್ ಮಸಾಲಾ ಬ್ರಾಂಡ್‌ನ ಜಾಹೀರಾತು ಪ್ರಚಾರದಿಂದ ಹಿಂದೆ ಸರಿದಿದ್ದರು ಮತ್ತು ಅದರಿಂದ ಪಡೆದ ಹಣವನ್ನು ಹಿಂದಿರುಗಿಸಿರುವುದಾಗಿ ಹೇಳಿದ್ದರು. ಇದೀಗ ತೀವ್ರ ಟೀಕೆಗೆ ಗುರಿಯಾದ ಬಳಿಕ ನಟ ಅಕ್ಷಯ್‌ ಕುಮಾರ್‌ ಸಹ ಬಿಗ್‌ ಬಿ ಹಾದಿಯಲ್ಲೇ ಸಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News