Trans Day of Visibility 2023: ಮಂಗಳಮುಖಿಯರಿಗೆ ಕಿಚ್ಚನಿಂದ ಪ್ರೀತಿಯ ವಿಷಸ್ ರವಾನೆ..!

International Transgender Day of Visibility: ಕಿಚ್ಚನ ಹುಟ್ಟುಹಬ್ಬದ ಹಾಗೂ ಮುಂತಾದ ದಿನಗಳಲ್ಲಿ ಮಂಗಳಮುಖಿಯರು ಹಾಜರಾಗಿ ವಿಶೇಷರೀತಿಯಲ್ಲಿ ಕಿಚ್ಚನಿಗೆ ಸಲ್ಲಿಸುವ ವಿಷಸ್ ವೈರಲ್ ಆಗಿರೋದನ್ನ ನೋಡಿರ್ತೀರ, ಇದೀಗ ಕಿಚ್ಚ ಇವರೆಲ್ಲರಿಗೂ ಪ್ರೀತಿಯ ಸಂದೇಶವೊಂದನ್ನ ರವಾನಿಸಿದ್ದಾರೆ.  

Written by - K Karthik Rao | Edited by - Yashaswini V | Last Updated : Mar 31, 2023, 06:00 PM IST
  • ಪ್ರತೀದಿನ ಒಂದಲ್ಲ ಒಂದು ವಿಶೇಷತೆ ಇರುತ್ತದೆ.
  • ಹಾಗೆಯೆ ಇಂದು 'ಮಂಗಳ ಮುಖಿಯರ ದಿನ.
  • ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಲೇಖನಗಳು, ಹಲವರ ಶುಭಾಶಯಗಳು ಹರಿದಾಡ್ತಾ ಇದೆ. ಆದರೆ, ಕಿಚ್ಚ ಸುದೀಪ್ ಆವರ ಶುಭಾಶಯ ಮಾತ್ರ, ಎಲ್ಲರ ಕಣ್ಮನ ಸೆಳೆಯುತ್ತಿದೆ.
Trans Day of Visibility 2023: ಮಂಗಳಮುಖಿಯರಿಗೆ ಕಿಚ್ಚನಿಂದ ಪ್ರೀತಿಯ ವಿಷಸ್ ರವಾನೆ..! title=
Photo Credit: Twitter@KSCS__Official

TDOV or Trans Day of Visibility 2023: 'ಮಂಗಳಮುಖಿ' ಇವರನ್ನ ಹಿಯ್ಯಾಳಿಸುವವರು ಕೆಲವರಾದ್ರೆ, ಇವರೂ ನಮ್ಮಂತೆ ಸಮಾನರು ಎಂದು ಹೊಗಳೋರು ಹಲವರು. ಹೌದು, ಈಗೀನ ಕಾಲದಲ್ಲಿ ಸುಮಾರು ಎಲ್ಲಾ ಕ್ಷೇತ್ರದಲ್ಲೂ ಮಂಗಳಮುಖಿಯರನ್ನ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಇವರ ಸಾಧನೆಗಳು ಕೂಡ ಪ್ರಸಿದ್ಧಿಯಾಗಿವೆ. 

ಪ್ರತೀದಿನ ಒಂದಲ್ಲ ಒಂದು ವಿಶೇಷತೆ ಇರುತ್ತದೆ. ಹಾಗೆಯೆ ಇಂದು 'ಮಂಗಳ ಮುಖಿಯರ ದಿನ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಲೇಖನಗಳು, ಹಲವರ ಶುಭಾಶಯಗಳು ಹರಿದಾಡ್ತಾ ಇದೆ. ಆದರೆ, ಕಿಚ್ಚ ಸುದೀಪ್ ಆವರ ಶುಭಾಶಯ ಮಾತ್ರ, ಎಲ್ಲರ ಕಣ್ಮನ ಸೆಳೆಯುತ್ತಿದೆ. 

ಇದನ್ನೂ ಓದಿ- ಪ್ರೀತಿಯ ಗೆಳತಿಗೆ ನೂರಾರು ಕಾಲ ಸುಖವಾಗಿ ಬಾಳು ಎಂದು ಹಾರೈಸಿದ ಡಿ ಬಾಸ್‌ ..!

ಕಿಚ್ಚನ ಹುಟ್ಟುಹಬ್ಬದ ಹಾಗೂ ಮುಂತಾದ ದಿನಗಳಲ್ಲಿ ಮಂಗಳಮುಖಿಯರು ಹಾಜರಾಗಿ ವಿಶೇಷರೀತಿಯಲ್ಲಿ ಕಿಚ್ಚನಿಗೆ ಸಲ್ಲಿಸುವ ವಿಷಸ್ ವೈರಲ್ ಆಗಿರೋದನ್ನ ನೋಡಿರ್ತೀರ, ಇದೀಗ ಕಿಚ್ಚ ಇವರೆಲ್ಲರಿಗೂ ಪ್ರೀತಿಯ ಸಂದೇಶವೊಂದನ್ನ ರವಾನಿಸಿದ್ದಾರೆ.

"ನೀವು ನನ್ನಮ್ಮ, ನನ್ನ ಅಕ್ಕ ತಂಗಿಯರಂತೆ, ನಿಮ್ಮೊಂದಿಗೆ ನಿಮ್ಮ ಜೊತೆ ನಾನು, ಪ್ರತೀದಿನ ಪ್ರತೀ ಕ್ಷಣ ನನ್ನ ಹಾರೈಕೆ ನಿಮ್ಮ ಜೊತೆ, ವಿಶ್ವ ಮಂಗಳ ಮುಖಿಯರ ದಿನದ ಶುಭಾಶಯಗಳು". ಹೀಗೆ ಕಿಚ್ಚ ಮುಂಗಳ ಮುಖಿಯರಿಗಾಗಿ ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ- ಹಸಿಬಿಸಿ ದೃಶ್ಯಗಳಲ್ಲೂ ದರ್ಶನ ಕೊಟ್ಟು ಕಮಾಲ್ ಮಾಡಿದ ಗ್ಲೋಬಲ್ ಸ್ಟಾರ್..!

ಇತ್ತೀಚಿಗೆ ಎಲ್ಲಾ ಕ್ಷೇತ್ರದಲ್ಲೂ ಮಂಗಳಮುಖಿಯರು ತಮ್ಮನ್ನ ತಾವು ತೊಡಗಿಸಿಕೊಂಡು ನಾವು ಎಲ್ಲರಂತೆ ದೇಶದ ಪ್ರತೀ ಮೂಲಭೂತಹಕ್ಕು ನಮಗೂ ಕೂಡ ಇದೆ, ನಾವೇನು ಕಮ್ಮಿಯಿಲ್ಲ ಎಂದು ಹೋರಾಡೋದನ್ನ ಪ್ರತೀ ದಿನ ನೋಡುತ್ತಿರುತ್ತೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News