ಬಡ ಹುಡುಗಿ... ಶ್ರೀಮಂತ ನಾಯಿ... ಒಂದು ಚೆಂಡು ಬೆಸೆಯಿತು ಸಂಬಂಧ ! ಕಣ್ಣಾಲಿ ಒದ್ದೆಯಾಗಿಸುವ ವಿಡಿಯೋ

Emotional Video : ಎತ್ತಣ ಮಾಮಾರ ಎತ್ತಣ ಕೋಗಿಲೆ ಎನ್ನುವ ಹಾಗೆ ಯಾರೋ ಬಡ ಹುಡುಗಿ, ಯಾರದ್ದೋ ಮನೆಯ ಶ್ರೀಮಂತ ನಾಯಿ ಒಂದು ಕ್ಷಣಕ್ಕೆ ಸ್ನೇಹ ಬೆಳೆದು ಬಿಟ್ಟಿದೆ. ಒಂದು ಶ್ರೀಮಂತ ನಾಯಿ ಮತ್ತೊಬ್ಬ ಬಡ ಪುಟ್ಟ ಹುಡುಗಿಯ ವಿಡಿಯೋ ಅದು.

Written by - Ranjitha R K | Last Updated : Jul 13, 2023, 10:33 AM IST
  • ಎರಡು ಮುಗ್ದ ಮಸ್ಸುಗಳ ನಡುವಣ ಸಂಬಂಧ
  • ಬಡ ಹುಡುಗಿ... ಶ್ರೀಮಂತ ನಾಯಿಯ ಅಪರೂಪದ ಜೋಡಿ
  • ಇಲ್ಲಿದೆ ನೋಡಿ ಭಾವನಾತ್ಮಕ ವಿಡಿಯೋ
ಬಡ ಹುಡುಗಿ... ಶ್ರೀಮಂತ ನಾಯಿ... ಒಂದು ಚೆಂಡು ಬೆಸೆಯಿತು ಸಂಬಂಧ ! ಕಣ್ಣಾಲಿ ಒದ್ದೆಯಾಗಿಸುವ ವಿಡಿಯೋ  title=

Emotional Video : ಸಾಮಾಜಿಕ ಮಾಧ್ಯಮವೇ ಹಾಗೆ. ಇಲ್ಲಿ ಕಾಣ ಸಿಗುವ ಕೆಲವು ವಿಡಿಯೋಗಳು ಮನಸ್ಸಿಗೆ ಮುದ ನೀಡುವುದರ ಜೊತೆಗೆ ಜೀವನ ಪಾಠವನ್ನು ಕೂಡಾ ಕಲಿಸುತ್ತದೆ. ಕೆಲವು ವಿಡಿಯೋಗಳು ಕಣ್ಣಂಚು ಒದ್ದೆ ಮಾಡಿಸಿ ಬಿಡುತ್ತವೆ.  ಅಂಥದ್ದೇ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ. ಒಂದು ಶ್ರೀಮಂತ ನಾಯಿ ಮತ್ತೊಬ್ಬ ಬಡ ಪುಟ್ಟ ಹುಡುಗಿಯ ವಿಡಿಯೋ ಅದು. ಈ ವಿಡಿಯೋ ಅದೆಷ್ಟೋ ಭಾವವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. 

 ನಾಯಿ ತುಂಬಾ ಕೃತಜ್ಞತೆಯ ಪ್ರಾಣಿ.  ನಾಯಿಗಿರುವ ನಿಯತ್ತು ಜಗತ್ತಿನಲ್ಲಿ ಬೇರೆ ಯಾವ ಪ್ರಾಣಿಗೂ ಇಲ್ಲ. ಪ್ರಾಣಿಗೆ ಯಾಕೆ ಮನುಷ್ಯನಿಗೂ ಇರುವುದಿಲ್ಲ ಎಂದರೆ ತಪ್ಪಲ್ಲ. ಈ ಕಾರಣಕ್ಕಾಗಿಯೇ ನಾಯಿಯನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಅದೆಷ್ಟೋ ಮಕ್ಕಳಿಲ್ಲದ ಮಂದಿ ನಾಯಿಯನ್ನೇ ಮಗುವಿನಂತೆ ಸಾಕುತ್ತಾರೆ. ಇನ್ನು ಕೆಲವರಿಗೆ ತಮ್ಮ ನಾಯಿಯನ್ನು ಯಾರಾದರೂ ನಾಯಿ ಎಂದರೆ ಕೋಪ ನೆತ್ತಿಗೇರಿ ಬಿಡುತ್ತದೆ. ಮನುಷ್ಯರಂತೆ ಅದನ್ನೂ ಅದರ ಹೆಸರಿನಿಂದಲೇ ಸಂಬೋಧಿಸಬೇಕು. ನಾಯಿಗಳು ಕೂಡಾ ಹಾಗೆಯೇ ಆ ಕುಟುಂಬದ ಒಂದು ಭಾಗವಾಗಿ ಬಿಡುತ್ತವೆ. 

ಇದನ್ನೂ ಓದಿ :  Viral Video : ಹುಡುಗಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೊರಟದ್ದು ರೈಡ್ ಗೆ ! ಆದರೆ ಮಾರ್ಗ ಮಧ್ಯೆ ಮಾಡಿದ್ದು ...

ನಾಯಿ ಬಹಳ ಸೂಕ್ಷ್ಮ ಜೀವಿ. ಮನುಷ್ಯನ ಮನಸ್ಸಿನ ಭಾವನೆಯನ್ನು ಬಹಳ ಬೇಗನೆ ಅರ್ಥ ಮಾಡಿಕೊಂಡು ಬಿಡುತ್ತದೆ. ಈ ವಿಡಿಯೋ ನೋಡಿದಾಗ ಆ ಸತ್ಯ ತಿಳಿಯುತ್ತದೆ. ಇಲ್ಲಿ ದಾರಿಯಲ್ಲಿ  ಬಡ ಹುಡುಗಿಯೊಬ್ಬಳು  ಹೋಗುತ್ತಿರುತ್ತಾಳೆ. ಅಚಾನಕಾಗಿ ಆಕೆಯ ಕಣ್ಣು ಒಂದು ಮನೆಯ ಮುಂದೆ ಇರುವ ನಾಯಿಯ ಮೇಲೆ ಬೀಳುತ್ತದೆ. ಆ ಹುಡುಗಿ ಅಲ್ಲೇ ಇರುವ ಚೆಂಡನ್ನು ನಾಯಿಯತ್ತ ಎಸೆಯುತ್ತಾಳೆ. ನಾಯಿಗೆ ಆ ಹುಡುಗಿಯ ಮುಗ್ದ ಭಾವ ಇಷ್ಟವಾಯಿತೋ ಏನೋ, ಅದು ಕೂಡಾ ಆ ಚೆಂಡನ್ನು ಮತ್ತೆ ಹುಡುಗಿಯತ್ತ ಎಸೆಯುತ್ತದೆ. ಇದನ್ನು ಕಂಡ ಆ ಪುಟ್ಟ ಹುಡುಗಿಯ ಸಂತಸಕ್ಕೆ ಪಾರವೇ ಇರುವುದಿಲ್ಲ. ಆ ಕ್ಷಣಕ್ಕೆ ಹುಡುಗಿ ತನ್ನೆಲ್ಲಾ ಕಷ್ಟಗಳನ್ನು ಮರೆತು ಕುಣಿದಾಡುವ ವಿಡಿಯೋ ಎಂಥವರ ಮನಸ್ಸನ್ನು ಹಿಂಡದೇ ಇರದು. 

ಹುಡುಗಿಯ ಸಂತಸ  ಕಂಡ ನಾಯಿ ಮತ್ತೆ ಮತ್ತೆ ಆ ಹುಡುಗಿಯ ಜೊತೆ ಆಟಕ್ಕೆ ಇಳಿದು ಬಿಡುತ್ತದೆ. ಅಲ್ಲಿ ಎರಡು ಮುಗ್ದ ಮನಸ್ಸುಗಳ ನಡುವೆ ಸಂಬಂಧ ಬೆಸೆದು ಕೊಳ್ಳುತ್ತದೆ. ಎತ್ತಣ ಮಾಮಾರ ಎತ್ತಣ ಕೋಗಿಲೆ ಎನ್ನುವ ಹಾಗೆ ಯಾರೋ ಬಡ ಹುಡುಗಿ, ಯಾರದ್ದೋ ಮನೆಯ ಶ್ರೀಮಂತ ನಾಯಿ ಒಂದು ಕ್ಷಣಕ್ಕೆ ಸ್ನೇಹ ಬೆಳೆದು ಬಿಟ್ಟಿದೆ. ಆ ನಾಯಿ ಮುಂದೆ ಅದೆಷ್ಟು ಕಾಲ ಕಳೆದರೂ ಆ ಹುಡುಗಿಯನ್ನು ಖಂಡಿತಾ ಮರೆಯಲಿಕ್ಕಿಲ್ಲ. ಶ್ರೀಮಂತ ಮನೆಯ ನಾಯಿ ಜೊತೆ ನಾನು ಆಟವಾಡಿದೆ ಅನ್ನುವ ಸಂತಸ ಆ ಬಾಲಕಿ ಮನಸ್ಸಿನಲ್ಲಿಯೂ ಖಂಡಿತಾ ಉಳಿಯುತ್ತದೆ. 

 

ಇದನ್ನೂ ಓದಿ :  ನಡುರಸ್ತೆಯಲ್ಲಿ ಕಂಬದಂತೆ ನೆಟ್ಟಗೆ ನಿಂತ ನಾಗರಹಾವು..! ವಿಸ್ಮಯಕಾರಿ ವಿಡಿಯೋ ವೈರಲ್‌

ಈ ವೀಡಿಯೋವನ್ನು theboxertuffy ಸಾಮಾಜಿಕ ಮಾಧ್ಯಮ ವೇದಿಕೆ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಬಹಳಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News