ನವದೆಹಲಿ : ಕರೋನಾಸುರ ಆರ್ಭಟಿಸುತ್ತಿದ್ದಾನೆ. ಜನರ ಜೀವಕ್ಕೆ ಬೆಲೆಯಿಲ್ಲದಂತಾಗಿದೆ. ಸಾವು ಸಾಮಾನ್ಯವಾಗಿಬಿಟ್ಟಿದೆ. ಸ್ಮಶಾನಗಳಲ್ಲಿ ದೊಡ್ಡ ದೊಡ್ಡ ಕ್ಯೂ ಕಾಣಿಸುತ್ತಿದೆ. ಪರಿಸ್ಥಿತಿ ರಣಭೀಕರ ಅನ್ನಿಸುತ್ತಿದೆ. ಈ ನಡುವೆಯೇ ಕರ್ನಾಟಕ (Karnataka) ಸೇರಿ ಹಲವು ರಾಜ್ಯಗಳು ಫುಲ್ ಲಾಕ್ ಡೌನ್ (Full Lockdown) ಘೋಷಣೆ ಮಾಡಿಬಿಟ್ಟಿದೆ. ಜನರು ಮನೆಯೊಳಗೆ ಕುಳಿತುಕೊಳ್ಳಬೇಕಾದ ಅನವಾರ್ಯತೆ ಉಂಟಾಗಿದೆ. ವ್ಯಾಪಾರ ವಹಿವಾಟಿಗೆ ದೊಡ್ಡ ಹೊಡೆತ ಬಿದ್ದಿದೆ. ಆರ್ಥಿಕ ಸ್ಥಿತಿ ನೆಲ ಕಚ್ಚಿದೆ. ಸದ್ಯ ಜೀವ ಉಳಿಸಿಕೊಂಡರೆ ಸಾಕು ಎಂಬ ಮನಸ್ಥಿತಿಗೆ ಜನತೆ ಬಂದಿದೆ. ಹೋದ ವರ್ಷಕ್ಕಿಂತಲೂ ಭೀಕರವಾಗಿದೆ ಈ ಸಲದ ಕರೋನಾ ಹೊಡೆತ.
ಲೋನ್ ಮೊರಾಟೋರಿಯಂ ಘೋಷಣೆ ಮಾಡುತ್ತಾ ಆರ್ ಬಿಐ..?
ಲಾಕ್ ಡೌನ್ (Lockdown) ನಡುವೆಯೇ ಎದ್ದಿರುವ ದೊಡ್ಡ ಸವಾಲು ಯಾವುದೆಂದರೆ ಲಾಕ್ ಡೌನ್ ಬಳಿಕ ಲೋನ್ ಮೊರಟೋರಿಯಂ (Loan Moratorium)ಘೋಷಣೆ ಮಾಡುತ್ತಾ ಸರ್ಕಾರ ಅನ್ನೋದು. ಕಳೆದ ವರ್ಷ ಲಾಕ್ ಡೌನ್ ಮಾಡಿದಾಗ ಸರ್ಕಾರ ಮತ್ತು ಆರ್ ಬಿಐ (RBI) 6 ತಿಂಗಳ ಲೋನ್ ಮೊರೊಟೋರಿಯಂ ಘೋಷಣೆ ಮಾಡಿತ್ತು. ಇದೀಗ ಮತ್ತದೇ ಸನ್ನಿವೇಶ ಎದುರಾಗಿದೆ. ಲೋನ್ ಮೊರಟೋರಿಯಂ ಘೋಷಣೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಜನರು.
ಇದನ್ನೂ ಓದಿ : ಕ್ಯೂಆರ್ ಸ್ಕ್ಯಾನ್ ವಂಚನೆಗೆ ಬಲಿಯಾಗಬೇಡಿ..! ಇಲ್ಲಿದೆ ಅಗತ್ಯ ಮಾಹಿತಿ
ಆರ್ಥಿಕವಾಗಿ ಜನರು ಸಂಕಷ್ಟದಲ್ಲಿದ್ದಾರೆ. ಈ ಹೊತ್ತಿನಲ್ಲಿ ಕೆಲವೊಂದು ಪರಿಹಾರ ಕ್ರಮಗಳನ್ನು ಸರ್ಕಾರ (Government) ಪ್ರಕಟಿಸಲೇ ಬೇಕಾಗುತ್ತದೆ. ಇಲ್ಲದೇ ಹೋದರೆ ಜನ, ಉದ್ಯಮ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಬಹುದು. ಸರ್ಕಾರ ಲೋನ್ ಮೊರಾಟೋರಿಯಂ ಘೋಷಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಬ್ಯಾಂಕಿಂಗ್ (Banking) ವಲಯದ ಕೆಲವು ತಜ್ಞರು.
ಕೊವಿಡ್ (COVID-19) ಲಾಕ್ ಡೌನ್ ನಿಂದಾಗಿ ಸಣ್ಣ ಕೈಗಾರಿಕೆಗಳ, ಚಿಲ್ಲರೆ ವಲಯದ ವಹಿವಾಟುಗಳು ತೊಂದರೆಯಲ್ಲಿವೆ. ಬಹುಸಂಖ್ಯಾತ ಶ್ರಮಿಕ ವರ್ಗ ವಲಸೆ ಹೋಗಿದೆ. ಸೇವಾ ವಲಯದ ಮೇಲೆ ಲಾಕ್ ಡೌನ್ ಗಂಭೀರ ಪರಿಣಾಮ ಬೀರುತ್ತಿದೆ. ಇಂಥ ಸನ್ನಿವೇಶದಲ್ಲಿ ಸಾಲಗಾರರಿಗೆ ತಮ್ಮ ಸಾಲ ಮರುಪಾವತಿ ಕಷ್ಟವಾಗಬಹುದು. ಅದಕ್ಕೊಂದು ಪರಿಹಾರದ ಅಗತ್ಯವಿದೆ ಎನ್ನುತ್ತಾರೆ ಬ್ಯಾಂಕಿಂಗ್ ತಜ್ಞರು.
ಇದನ್ನೂ ಓದಿ : Life Insurance Policy: ಸರಿಯಾದ 'ಜೀವ ವಿಮಾ ಪಾಲಿಸಿ' ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ನೋಡಿ
ಸಾಲ ಮೊರೊಟೋರಿಯಂ ಘೋಷಣೆಯಾಗುತ್ತೊ ಇಲ್ಲವೋ ಗೊತ್ತಿಲ್ಲ. ಅದಕ್ಕಾಗಿ ಕಾಯುವುದೂ ಸರಿಯಲ್ಲ. ಕೈಯಲ್ಲಿ ದುಡ್ಡಿದ್ದರೆ ಸಾಲದ ಕಂತು ಕೂಡಲೇ ಭರಿಸುವುದು ಉತ್ತಮ. ಇಲ್ಲದೇ ಹೋದರೆ ಅನಗತ್ಯ ಬಡ್ಡಿ (Interest) ತೆರಬೇಕಾಗಿ ಬರಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.