Viral Video : ಎಷ್ಟು ದೂರ ಸರಿದರೂ ಮತ್ತೆ ಮತ್ತೆ ಸಿಂಹಕ್ಕೆ ಮುತ್ತಿಕ್ಕುತ್ತಿರುವ ಆಮೆ

ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆಮೆಯೊಂದು ಸಿಂಹವನ್ನು ಬೆಂಬಿಡದಂತೆ ಕಾಡುತ್ತಿದೆ. ಪದೇ ಪದೇ ಹತ್ತಿರ ಹೋಗಿ ಚುಂಬಿಸುತ್ತಿದೆ. 

Written by - Ranjitha R K | Last Updated : Mar 17, 2022, 03:49 PM IST
  • ಸಿಂಹವನ್ನು ಚುಂಬಿಸುತ್ತಿರುವ ಆಮೆ
  • ವೈರಲ್ ಆಗಿದೆ ವಿಡಿಯೋ
  • ಸಾವಿರಾರು ಸಂಖ್ಯೆಯಲ್ಲಿ ವಿಡಿಯೋಗೆ ವೀಕ್ಷಣೆ
Viral Video : ಎಷ್ಟು ದೂರ ಸರಿದರೂ ಮತ್ತೆ ಮತ್ತೆ ಸಿಂಹಕ್ಕೆ ಮುತ್ತಿಕ್ಕುತ್ತಿರುವ ಆಮೆ  title=
ಸಿಂಹವನ್ನು ಚುಂಬಿಸುತ್ತಿರುವ ಆಮೆ (photo twitter)

ಬೆಂಗಳೂರು : ಸಿಂಹ ಅಂದಾಕ್ಷಣ ಕಣ್ಣ ಮುಂದೆ ಬರುವುದು ಘನ ಗಾಂಭೀರ್ಯದಿಂದ ಓಡಾಡುವ ಕಾಡಿನ ರಾಜ (Lion Video). ಸಿಂಹ ಎಂದರೆ ಎಂಥವರಿಗೂ ಭಯ ಕಾಡುತ್ತದೆ. ಆದರೆ ವಯಸ್ಸಾದಂತೆ ಸಿಂಹ ಯಾರಿಗೂ ತೊಂದರೆ ಕೊಡುವುದಿಲ್ಲ. ಕಣ್ಣ ಮುಂದೆಯೇ ಬೇಟೆ ಇದ್ದರೂ ಅದು ಬೇಟೆಯಾಡುವುದಿಲ್ಲ. ಯಾಕೆಂದರೆ ಸಿಂಹಕ್ಕೆ ಅಷ್ಟು ಶಕ್ತಿ ಇರುವುದಿಲ್ಲ (Lion viral video). ಈ ಹೊತ್ತಿನಲ್ಲಿ ಸಣ್ಣ ಸಣ್ಣ ಪ್ರಾಣಿಗಳು ಕೂಡಾ ಸಿಂಹವನ್ನು ಕಾಡುತ್ತವೆ.   

ತೋಳಗಳು ಮುದಿ ಸಿಂಹಗಳನ್ನು ಸುತ್ತುವ ಹಾಗೂ ಬೇಟೆಯಾಡುವ ವಿಡಿಯೋಗಳನ್ನು (Video) ಅನೇಕ ಬಾರಿ ನೋಡಿರಬಹುದು. ಇದು ನೋಡುಗರನ್ನು ವಿಚಲಿತಗೊಳಿಸುತ್ತವೆ. ಆದರೆ ಇಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ (Viral Video) ಆಮೆಯೊಂದು ಸಿಂಹವನ್ನು ಬೆಂಬಿಡದಂತೆ ಕಾಡುತ್ತಿದೆ. ಪದೇ ಪದೇ ಹತ್ತಿರ ಹೋಗಿ ಚುಂಬಿಸುತ್ತಿದೆ. 

ಇದನ್ನೂ ಓದಿ : Viral Video : ಗಸ್ತಿನಲ್ಲಿದ್ದಾಗ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ ಕಾಡಾನೆ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ!

ಸಾವಿರಾರು ಜನ ಈ ವಿಡಿಯೋವನ್ನು  ಟ್ವಿಟರ್‌ನಲ್ಲಿ ವೀಕ್ಷಿಸಿದ್ದಾರೆ. ವಯಸ್ಸಾದ ಸಿಂಹವು ಕೊಳದ ನೀರು ಕುಡಿಯಲು ಬರುತ್ತದೆ (Animal Video). ಅಲ್ಲಿಗೆ ನಿಧಾನವಾಗಿ ಆಮೆ ಬರುತ್ತದೆ. ನೀರು ಕುಡಿಯುತ್ತಿರುವ ಸಿಂಹದ ಬಳಿ ಬಂದು ಮುತ್ತಿಡುತ್ತದೆ. ಸಿಂಹ ಕೊಂಚ ಇರಿಸು ಮುರುಸಾದಂತೆ ದೂರ ಸರಿಯುತ್ತದೆ. ಆದರೆ ಆಮೆ ಮತ್ತೆ ಮತ್ತೆ ಸಿಂಹದ ಬಳಿ ಹೋಗಿ ಮುತ್ತು ನೀಡುತ್ತದೆ. 

 

ಆಫ್ರಿಕನ್  ಅನಿಮಲ್ twitter ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋ ವೀಕ್ಷಿಸಿದವರು ವಿಡಿಯೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : Viral Video: ಚಲಿಸುತ್ತಿರುವ ರೈಲಿನಿಂದ ಪ್ಲಾಟ್ಫಾರ್ಮ್ ಗೆ ಬಿದ್ದ ಪ್ರಯಾಣಿಕ, ಮುಂದೇನಾಯ್ತು ನೀವೇ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News