ದಿನಭವಿಷ್ಯ 25-07-2024: ಗುರುವಾರದಂದು ಈ ರಾಶಿಯವರ ಮೇಲಿರಲಿದೆ ಗುರು ರಾಘವೇಂದ್ರರ ಆಶೀರ್ವಾದ

Today Horoscope 25th July 2024: ಗುರುವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jul 25, 2024, 07:46 AM IST
  • ವೃಷಭ ರಾಶಿಯ ಜನರಿಗೆ ಇಂದು ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿರಲಿದೆ.
  • ಸಿಂಹ ರಾಶಿಯವರಿಗೆ ಬಹುದಿನಗಳ ನಿಮ್ಮ ಆಸೆ ಇಂದು ನೆರವೇರಲಿದೆ.
  • ತುಲಾ ರಾಶಿಯವರೇ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಯ ನಿಮ್ಮಪಾಲಿಗಿದೆ.
ದಿನಭವಿಷ್ಯ 25-07-2024:  ಗುರುವಾರದಂದು ಈ ರಾಶಿಯವರ ಮೇಲಿರಲಿದೆ ಗುರು ರಾಘವೇಂದ್ರರ ಆಶೀರ್ವಾದ  title=

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಗುರುವಾರದ ಈ ದಿನ ಪೂ.ಭಾ. ನಕ್ಷತ್ರ, ಶೋಭನ ಯೋಗವು ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಇಂದು ಕೊಂಚ ಪರಿಹಾರ ದೊರೆಯಬಹುದು. ಉದ್ಯಮಿಗಳು ನಿಮ್ಮ ಶತ್ರುಗಳ ಬಗ್ಗೆ ಜಾಗರೂಕರಾಗಿರಬೇಕು. ದೀರ್ಘ ಪ್ರಯಾಣ ಮುಗಿಸಿ ಬಂದವರಿಗೆ ಕುಟುಂಬಸ್ಥರಿಂದ ಭರ್ಜರಿ ಸ್ವಾಗತ ದೊರೆಯಲಿದೆ. ಶೈಕ್ಷಣಿಕ ರಂಗದಲ್ಲಿ ಎದುರಾಗಿದ್ದ ಅಡೆತಡೆಗಳಿಂದ ಪರಿಹಾರ ದೊರೆಯಲಿದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿರಲಿದೆ. ಆದರೆ, ಉದ್ಯೋಗ-ವ್ಯವಹಾರದಲ್ಲಿ ನಿಮ್ಮ ಹಳೆಯ ತಪ್ಪುಗಳು ಮರುಕಳಿಸದಂತೆ ವಿಶೇಷ ನಿಗವಹಿಸಿ.  ಯಾವುದೇ ಕೆಲಸದಲ್ಲಿ ಯಶಸ್ಸಿಗಾಗಿ ಪ್ರಜ್ಞಾಪೂರ್ವಕ ಪ್ರಯತ್ನವನ್ನು ಮುಂದುವರೆಸಿ 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಸಾಮೂಹಿಕ ಪ್ರಜ್ಞೆಯನ್ನು ಹೆಚ್ಚಿಸುವ ಉದ್ದೇಶದಿಂದ ರೂಪಿಸುವ ನಿಮ್ಮ ಯೋಜನೆ ಯಶಸ್ವಿಯಾಗಲಿದೆ. ವೈಯಕ್ತಿಕ ವಿಚಾರಗಳ ಬಗ್ಗೆ ಜಾಗರೂಕರಾಗಿರಿ. ಹಣಕಾಸು ವ್ಯವಹಾರದಲ್ಲಿ ಸಹಿ ಹಾಕುವ ಮೊದಲು ಕಾಗದ-ಪತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ. 
ಮಕ್ಕಳ ಕಡೆಯಿಂದ ಸಂತಸದ ಸುದ್ದಿಯನ್ನು ಪಡೆಯಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಧರ್ಮ ಎಂಬುದು ನಿಮ್ಮ ಆತ್ಮವನ್ನು ಬೆಳಗಿಸುವ ದಿವ್ಯ ಜ್ಯೋತಿಯಾಗಿದೆ. ಯಾವುದೇ ಕೆಲಸವನ್ನು ಮಾಡುವಾಗ ಧರ್ಮದ ಹಾದಿಯನ್ನು ಬಿಟ್ಟು ಹೋಗಬೇಡಿ. ಕೇಂದ್ರೀಕೃತ ಉದ್ದೇಶಗಳನ್ನು ಹೊಂದಿಸಲು ಇದು ಪರಿಪೂರ್ಣ ದಿನವಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ  ಭಾಗವಹಿಸುವುದರಿಂದ ಜಯ. 

ಇದನ್ನೂ ಓದಿ- ಭರಣಿ -ಕೃತಿಕಾ ನಕ್ಷತ್ರದೊಂದಿಗೆ ಗಜಕೇಸರಿ ಯೋಗ, ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಬೆಳಗಲಿದೆ ಭಾಗ್ಯ ಜ್ಯೋತಿ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಬಹುದಿನಗಳ ನಿಮ್ಮ ಆಸೆ ಇಂದು ನೆರವೇರಲಿದೆ. ಮನೆಯಲ್ಲಿ ಪೂಜೆ ಇತ್ಯಾದಿಗಳನ್ನು ಆಯೋಜಿಸಬಹುದು. ಕೌಟುಂಬಿಕ ಜೀವನದಲ್ಲಿನ ಗೊಂದಲಗಳು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಮದುವೆಗೆ ಸಂಬಂಧಿಸಿದಂತೆ ಸಮಸ್ಯೆಗಳು ದೂರವಾಗಲಿದ್ದು, ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನಿಮಗೆ ಮಿಶ್ರಫಲಪ್ರದವಾದ ದಿನ. ನಿಮ್ಮ ಅಕ್ಕ-ಪಕ್ಕದವರೊಂದಿಗೆ ಜಗಳವಾಗುವ ಸಾಧ್ಯತೆಯಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚು ಶ್ರಮವಹಿಸಬೇಕು. ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸುವುದರಿಂದ ಮನಸ್ಸಿಗೆ ಸಂತೋಷ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇದು ನಿಮಗೆ ಸಂತೋಷದಾಯಕವಾದ ದಿನ. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಯ ನಿಮ್ಮಪಾಲಿಗಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಕುಟುಂಬದಲ್ಲಿ ಮಂಗಳಕರ ಕಾರ್ಯಗಳು ಜರುಗುವುವು. ಆದರೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಬಾಧಿಸಬಹುದು. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃತ್ತಿ ಬದುಕಿನಲ್ಲಿ ಇಂದು ನಿಮ್ಮ ಗೌರವ ಹೆಚ್ಚಾಗಲಿದೆ. ತಾಯಿ ಕಡೆಯಿಂದ ಧನಲಾಭವನ್ನು ಪಡೆಯುವಿರಿ. ಕುಳಿತು ಮಾತನಾಡುವುದರಿಂದ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಅಧ್ಯಯನದತ್ತ ಹೆಚ್ಚಿನ ಗಮನವಹಿಸಬೇಕಾಗುತ್ತದೆ. 

ಇದನ್ನೂ ಓದಿ- ಶೀಘ್ರದಲ್ಲೇ ಮುಖಾಮುಖಿಯಾಗಲಿದ್ದಾರೆ ಶನಿ-ಬುಧ: ವೃತ್ತಿ ಬದುಕಿನಲ್ಲಿ ಭಾರೀ ಜಯ ಸಾಧಿಸಲಿದ್ದಾರೆ ಈ ರಾಶಿಯ ಜನ

ಧನು ರಾಶಿಯವರ ಭವಿಷ್ಯ (Sagittarius Horoscope):  
ಖರ್ಚುಗಳಿಗೆ ಕಡಿವಾಣ ಹಾಕದಿದ್ದರೆ ಇಂದು ನಿಮ್ಮ ಬಜೆಟ್ ಹಾಳಾಗಬಹುದು. ಕೆಲವು ಸಂದರ್ಭದಲ್ಲಿ ನಿಮಗೆ ಇಷ್ಟವಿಲ್ಲದಿದ್ದರೂ ಆ ವೆಚ್ಚಗಳನ್ನು ಭರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಸಂಗಾತಿಯ ಆರೋಗ್ಯವು ಕಾಲಜಿಯ ವಿಷಯವಾಗಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಹೂಡಿಕೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ತುಂಬಾ ಜಾಗರೂಕರಾಗಿರಿ. ಯೋಚಿಸದೇ ಮಾಡುವ ಕೆಲಸಗಳಲ್ಲಿ ಭಾರೀ ನಷ್ಟವನ್ನು ಎದುರಿಸಬೇಕಾಗಬಹುದು. ಆದರೆ, ಆಸ್ತಿಯಲ್ಲಿ ಹೂಡಿಕೆಯು ಇಂದು ಮಂಗಳಕರವಾಗಿದೆ. ಇದರಿಂದ ಬಂಪರ್ ಧನಲಾಭವನ್ನು ನಿರೀಕ್ಷಿಸಬಹುದು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ದಿನ ನಿಮ್ಮ ಮಾತು ನಡವಳಿಕೆಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. ಕೋಪದ ಕೈಗೆ ಬುದ್ದಿ ಕೊಟ್ಟರೆ ಸಮಸ್ಯೆಗಳು ಉಲ್ಬಣಿಸಬಹುದು. ವ್ಯಾಪಾರಸ್ಥರು ಹೂಡಿಕೆಯಲ್ಲಿ ಜಾಗರೂಕರಾಗಿರಿ, ಇಲ್ಲವೇ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ಕುಟುಂಬದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಅದೃಷ್ಟದ ದಿನ. ಆಸ್ತಿ-ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು. ಸಂಗಾತಿಯೊಂದಿಗೆ ರೊಮ್ಯಾಂಟಿಕ್ ವಾಕ್ ಅನ್ನು ಯೋಜಿಸಬಹುದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು ಶುಭವಾರ್ತೆಯನ್ನು ಕೇಳಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News