ಹೈದರಾಬಾದ್ ಮೂಲದ ಲಸಿಕೆ ತಯಾರಕರು ಜಾಗತಿಕ ಆರೋಗ್ಯ ಸಂಸ್ಥೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ ಮತ್ತು 'ಇಯುಎಲ್ ಅನ್ನು ಬೇಗನೆ ಪಡೆಯಲು ಡಬ್ಲ್ಯುಎಚ್ಒ ಜೊತೆ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
Corona Vaccine - ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜನವರಿ ತಿಂಗಳಿನಲ್ಲಿ ಕೋವಿಶಿಲ್ದ್ (Covishield) ಜೊತೆಗೆ ಕೊವ್ಯಾಕ್ಸಿನ್ (Covaxin) ಅನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಆದರೆ ಇಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ತುರ್ತು ಬಳಕೆಯ ಅಧಿಕಾರವನ್ನು (EUA) ಮತ್ತಷ್ಟು ವಿಳಂಬ ಮಾಡಿದೆ.
ಆಗಸ್ಟ್ನಲ್ಲಿ, ಭಾರತೀಯ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯವರು ಡಬ್ಲ್ಯುಎಚ್ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರನ್ನು ಭೇಟಿ ಮಾಡಿದರು ಮತ್ತು ಕೊವಾಕ್ಸಿನ್ನ ಡಬ್ಲ್ಯುಎಚ್ಒ ಅನುಮೋದನೆಯ ಕುರಿತು ಚರ್ಚಿಸಿದರು.
Covid-19 Vaccine: ಅಧ್ಯಯನಕ್ಕಾಗಿ ವ್ಯಾಕ್ಸಿನೆಶನ್ ನಲ್ಲಿ ಭಾಗವಹಿಸಿರುವ ಸುಮಾರು 614 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ICMR-RMRC ವಿಜ್ಞಾನಿ ಡಾ.ದೇವದತ್ ಭಟ್ಟಾಚಾರ್ಯ ತಿಳಿಸಿದ್ದಾರೆ. ಇವರಲ್ಲಿ, 308 ಜನರ ಅಂದರೆ ಶೇ..50.2 ರಷ್ಟು ಜನರು ಕೋವಿಶೀಲ್ಡ್ Covishield ಪಡೆದುಕೊಂಡಿದ್ದರೆ, 306 ಅಂದರೆ ಶೇ. 49.8 ಜನರು Covaxin ಲಸಿಕೆಯನ್ನು ಹಾಕಿಸಿಕೊಂಡಿದ್ದರು.
ಭಾರತ್ ಬಯೋಟೆಕ್ನ ಕೋವಾಕ್ಸಿನ್ಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಬಹುನಿರೀಕ್ಷಿತ ಅನುಮೋದನೆಯನ್ನು ಈ ವಾರ ನೀಡುವ ಸಾಧ್ಯತೆಯಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.
How To Identify Fake Corona Vaccine - ಕರೋನ ವಿರುದ್ಧದ ಹೋರಾಟದಲ್ಲಿ ಇದೀಗ ವಿಶ್ವದಾದ್ಯಂತ ಹೆಚ್ಚು ಹೆಚ್ಚು ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ, ಈ ಮಧ್ಯೆ ಅನೇಕ ಸ್ಥಳಗಳಲ್ಲಿ ನಕಲಿ ಲಸಿಕೆಗಳನ್ನು ನೀಡಲಾಗುತ್ತಿದೆ ಎಂಬ ವರದಿಗಳೂ ಕೂಡ ಪ್ರಕಟಗೊಂಡಿವೆ.
DCGI Nod For Vaccine Mix And Match: ಕರೋನಾ ವೈರಸ್ನ (Coronavirus) ಎರಡು ಲಸಿಕೆಗಳನ್ನು ಬೆರೆಸುವಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇದೀಗ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) ಸಹ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಮಿಶ್ರಣವನ್ನು ಅಧ್ಯಯನ (Vaccine Mix And Match) ಮಾಡಲು ತನ್ನ ಅನುಮೋದನೆಯನ್ನು ನೀಡಿದೆ.
Vaccine Mixing And Matching - ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸಂಶೋಧನೆಯು ಅಡೆನೊವೈರಸ್ ವೆಕ್ಟರ್ ಪ್ಲಾಟ್ಫಾರ್ಮ್ (Adenovirus Vector Platform) ಆಧರಿಸಿದ Covishield ಹಾಗೂ Covaxin ಲಸಿಕೆಗಳ ಮಿಶ್ರಣ ಮಾಡಿ ಪರಿಣಾಮಗಳನ್ನು ಗಮನಿಸಿದಾಗ ಅದು ಉತ್ತಮ ಫಲಿತಾಂಶಗಳನ್ನೂ ನೀಡಿದೆ.
ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಬಹುದಾದ ಹಲವು ಸ್ಥಳಗಳಿದ್ದರೂ, ಇಂದು, ವಾಟ್ಸಾಪ್ ಬಳಸಿ ಕೋವಿಡ್ -19 ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡುವ ಹಂತ ಹಂತದ ಪ್ರಕ್ರಿಯೆಯನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ನಾಲ್ಕರಿಂದ ಆರು ವಾರಗಳಲ್ಲಿ ಭಾರತ್ ಬಯೋಟೆಕ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಅನ್ನು ತುರ್ತು ಬಳಕೆ ಪಟ್ಟಿಯಲ್ಲಿ (ಇಯುಎಲ್) ಸೇರಿಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಮಾಡರ್ನಾ ಇಂಕ್ನ ಕೊರೊನಾ ಲಸಿಕೆಯನ್ನು ದೇಶದಲ್ಲಿ ವಿತರಿಸಲು ಭಾರತೀಯ ಔಷಧಿ ತಯಾರಕ ಸಿಪ್ಲಾ ಲಿಮಿಟೆಡ್ ನಿಯಂತ್ರಣ ಅನುಮೋದನೆ ಪಡೆದಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುರೋಪಿಯನ್ ಯೂನಿಯನ್ ತನ್ನ 'ಗ್ರೀನ್ ಪಾಸ್ಪೋರ್ಟ್' ಯೋಜನೆಯಡಿ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ, ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ತೆಗೆದುಕೊಂಡ ಭಾರತೀಯರಿಗೆ ಯುರೋಪಿಗೆ ಪ್ರಯಾಣಿಸಲು ಅವಕಾಶ ನೀಡುವುದನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ಭಾರತ 27 ರಾಷ್ಟ್ರಗಳ ಗುಂಪಿನ ಸದಸ್ಯರನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.
ಭಾರತ್ ಬಯೋಟೆಕ್ನ ಕೊರೊನಾ ಲಸಿಕೆ ಕೋವಾಕ್ಸಿನ್ 3 ನೇ ಹಂತದ ಕ್ಲಿನಿಕಲ್ ಡಾಟಾ ಟ್ರಯಲ್ ಡೇಟಾದಲ್ಲಿ ಶೇಕಡಾ 77.8 ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ, ಇದನ್ನು ವಿಷಯ ತಜ್ಞರ ಸಮಿತಿ (ಎಸ್ಇಸಿ) ಪರಿಶೀಲಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
Calf Serum In Covaxin? - ಕೊವ್ಯಾಕ್ಸಿನ್ ನಲ್ಲಿ ಹಸುವಿನ ಕರುವಿನ ಸಿರಮ್ (New Born Calf Serum) ಬಳಕೆ ಮಾಡಲಾಗಿರುತ್ತದೆ ಎಂಬುದರ ಕುರಿತು ಕೇಂದ್ರ ಸರ್ಕಾರ (Central Government) ಹೇಳಿಕೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿನ (Social Media) ಪೋಸ್ಟ್ ನಲ್ಲಿ ತಥ್ಯಗಳನ್ನು ತಿರುಚಿ ಪ್ರಸ್ತುತ ಪಡಿಸಲಾಗಿದೆ ಎಂದಿದೆ.
ಹೈದರಾಬಾದ್ ಮೂಲದ ಕೊರೊನಾ ಲಸಿಕೆ ತಯಾರಕ ಭಾರತ್ ಬಯೋಟೆಕ್ ಮಂಗಳವಾರ ತನ್ನ ಲಸಿಕೆ ಕೋವಾಕ್ಸಿನ್ ಅನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್ಗೆ 150 ರೂ.ಗೆ ಸರಬರಾಜು ಮಾಡುವ ದರ ದೀರ್ಘಾವಧಿಯಲ್ಲಿ ಸಮರ್ಥನೀಯವಲ್ಲ. ಆದ್ದರಿಂದ, ಅದರ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಖಾಸಗಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೆಲೆ ಅಗತ್ಯವಿದೆ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.