ಭಾರತೀಯ ರೈಲು ಇಲಾಖೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ವಿಶೇಷ ರೈಲುಗಳನ್ನು ಸಹ ಓಡಿಸುತ್ತಿದೆ. ಬಿಹಾರದಲ್ಲಿ ಪ್ರವೇಶ ಪರೀಕ್ಷೆಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಮುಂಬರುವ ದಿನಗಳಲ್ಲಿ ರೈಲುಗಳ ಮೂಲಕ ಪ್ರಯಾಣ ನಡೆಸುವುದು ಇನ್ನಷ್ಟು ದುಬಾರಿಯಾಗಲಿದೆ. ಝೀ ಮೀಡಿಯಾಗೆ ಸಿಕ್ಕ ಎಕ್ಸ್ ಕ್ಲೂಸಿವ್ ಮಾಹಿತಿಯ ಪ್ರಕಾರ, ದೊಡ್ಡ ರೈಲು ನಿಲ್ದಾಣಗಳಿಂದ ರೈಲು ಪ್ರಯಾಣ ಬೆಳೆಸುವ ಪ್ರಯಾಣಿಕರು ಇನ್ಮುಂದೆ ಸ್ಟೇಷನ್ ಯುಸರ್ ಫೀಸ್ (Station User Fees) ಭರಿಸಬೇಕಾಗಿದೆ.
ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ರೈಲ್ವೆ ಬೋರ್ಡ್ (Railway Board) ಅಧ್ಯಕ್ಷ ವಿ.ಕೆ ಯಾದವ್, ರೈಲುಗಳನ್ನು ಏಕಕಾಲಕ್ಕೆ ಮೂರು ರೈಲು ಘಟಕಗಳಾಗಿ ಅಂದರೆ, ಕಪುರ್ಥಲಾ ರೈಲ್ವೆ ಕೋಚ್ ಫ್ಯಾಕ್ಟರಿ, ರಾಯ್ಬರೇಲಿ ಆಧುನಿಕ ಕೋಚ್ ಫ್ಯಾಕ್ಟರಿ ಹಾಗೂ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗಳಾಗಿ ನಿರ್ಮಿಸಲಾಗುವುದು ಎಂದಿದ್ದಾರೆ.
ಪ್ಲಾಸ್ಮಾ ವಾಯು ಶುದ್ಧೀಕರಣ, ಕೈಗಳಿಂದ ಮುಕ್ತವಾದ ಸೌಕರ್ಯಗಳು, ಕಾಲು-ಚಾಲಿತ ಸೋಪ್ ವಿತರಕ, ವೈರಸ್ಗಳನ್ನು ಕೊಲ್ಲಲು ರೈಲ್ವೆ ಬೋಗಿಗಳಲ್ಲಿ ಟೈಟಾನಿಯಂ ಡಿ-ಆಕ್ಸೈಡ್ ಲೇಪನಗಳನ್ನು ರೈಲ್ವೆ ಸಚಿವಾಲಯವು ಕೋವಿಡ್ ನಂತರದ ಹಂತದಲ್ಲಿ ತರಲು ಯೋಜಿಸಿರುವ ಕೆಲವು ಹೊಸ ಕ್ರಮಗಳಾಗಿವೆ.ಅಂತಹ ಮೊದಲ ಮೂಲ ಮಾದರಿಯನ್ನು ಕಪೂರ್ತಲಾದ ರಾಷ್ಟ್ರೀಯ ವಾಹಕದ ಉತ್ಪಾದನಾ ಘಟಕ ರೈಲ್ ಕೋಚ್ ಫ್ಯಾಕ್ಟರಿ ನಿರ್ಮಿಸಿದೆ. ಈ ಸೌಲಭ್ಯಗಳೊಂದಿಗೆ ಅಸ್ತಿತ್ವದಲ್ಲಿರುವ ಎಲ್ಲಾ ಬೋಗಿಗಳನ್ನು ಮರುಹೊಂದಿಸಲು ರೈಲ್ವೆ ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಲು ಭಾರತೀಯ ರೈಲ್ವೆ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಡಿಎಫ್ಸಿಸಿಐಎಲ್) ನಿರ್ಧರಿಸಿದೆ. ಸಿಗ್ನಲಿಂಗ್ ಒಪ್ಪಂದವನ್ನು ಬೀಜಿಂಗ್ ರಾಷ್ಟ್ರೀಯ ರೈಲ್ವೆ ಸಂಶೋಧನೆ ಮತ್ತು ವಿನ್ಯಾಸ ಸಂಸ್ಥೆಗೆ ಸಿಗ್ನಲ್ ಮತ್ತು ಸಂವಹನ ಸಂಸ್ಥೆಗೆ 2016 ರಲ್ಲಿ ನೀಡಲಾಯಿತು.
ಟ್ರೈನ್ ನಲ್ಲಿ ಪ್ರಯಾಣ ಬೆಳೆಸುವವರಿಗಾಗಿ IRCTCಯ ಒಂದು ಜಬರ್ದಸ್ತ್ ಯೋಜನೆ ಇದೆ. ಈ ಯೋಜನೆಯನ್ನು ಬಳಸಿ ಯಾತ್ರಿಗಳು ಯಾವುದೇ ಹಣ ನೀಡದೆ ತಮ್ಮ ಟಿಕೆಟ್ ಬುಕ್ ಮಾಡಬಹುದು. ಆದರೆ, IRCTCಯಲ್ಲಿ ನೀವು ಅಧಿಕೃತ ಖಾತೆ ಹೊಂದಿದ್ದರೆ ಮಾತ್ರ ನೀವು ಟಿಕೆಟ್ ಅನ್ನು ಬುಕ್ ಮಾಡಬಹುದು.
ಪ್ರಯಾಣದ ವೇಳೆ ಯಾವುದೇ ರೀತಿಯ ತೊಂದರೆಯಾಗಬಾರರು ಎಂಬ ಕಾರಣಕ್ಕೆ ಪ್ರತಿಯೊಬ್ಬರೂ ಕನ್ಫರ್ಮ್ ಟಿಕೆಟ್ ಬಯಸುವುದು ಸಾಮಾನ್ಯ. ಪ್ರಯಾಣಿಕರ ಈ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ರೇಲ್ವೆ ವಿಭಾಗ ಮುಂಗಡ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ಮಾಡಿದೆ.
ಜೂನ್ 1 ರಿಂದ ಭಾರತೀಯ ರೈಲ್ವೆ ಓಡಿಸಲಿರುವ 200 ಹೆಚ್ಚುವರಿ ವಿಶೇಷ ರೈಲುಗಳಿಗೆ ಗುರುವಾರ ಸಂಜೆ 4 ಗಂಟೆಯವರೆಗೆ 2.37 ಲಕ್ಷ ಟಿಕೆಟ್ಗಳನ್ನು ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಆರಂಭಿಸಲಾಗಿರುವ ವಿಶೇಷ ರೈಳುಗಳಲ್ಲಿಯೂ ಕೂಡ ಪ್ರಯಾಣಿಕರಿಗಾಗಿ ವೈಟಿಂಗ್ ಟಿಕೆಟ್ ಸೌಲಭ್ಯ ಆರಂಭಿಸಲಾಗಿದೆ. ರೈಲು ಇಲಾಖೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮೇ 22 ರಿಂದ ಓಡಾಟ ನಡೆಸಲಿರುವ ವಿಶೇಷ ರೈಲುಗಳಲ್ಲಿ ವೈಟಿಂಗ್ ಟಿಕೆಟ್ ಬುಕ್ ಮಾಡಬಹುದಾಗಿದೆ ಎಂದು ಹೇಳಿದೆ. ಆದರೆ. ಪ್ರತ್ಯೇಕ ಶ್ರೇಣಿಗೆ ಲಿಮಿಟ್ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.